• search

ಇವರೇ ನೋಡಿ ಬೆಂಗಳೂರಿನ ವಿವಾಹಿತ ಸುಂದರಿಯರು

Subscribe to Oneindia Kannada
For Quick Alerts
ALLOW NOTIFICATIONS
For Daily Alerts

  ಬೆಂಗಳೂರು, ಮಾರ್ಚ್ 26: ರಾಜಧಾನಿ ಬೆಂಗಳೂರಿನಲ್ಲಿ ಅದ್ಧೂರಿಯಾಗಿ ಸಮಾರೋಪಗೊಂಡ ಮಿಸೆಸ್ ಇಂಡಿಯಾ ಕರ್ನಾಟಕ-2018ರ ಫೈನಲ್ ನಲ್ಲಿ ರಾಜೇಂದರ್ ಕೌರ್ ವಿಜೇತರಾಗಿ ಕಿರೀಟ ಧರಿಸಿದರು. ಪ್ರಥಮ ರನ್ನರ್ ಅಪ್ ಆಗಿ ಉಜ್ಜಲ ಸಭರ್ ವಾಲ್, ದ್ವಿತೀಯ ರನ್ನರ್ ಅಪ್ ಆಗಿ ಅರ್ಚನಾ ಕಪೂರ್ ನಾಗ್ಪಾಲ್ ಹೊರಹೊಮ್ಮಿದರು.

  ಕಾಜೊಲ್ ಭಾಟಿಯಾ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಶೀರ್ಷಿಕೆ ಪಡೆದರೆ, ಶೈಲಜಾ ನಾಗನೇನಿ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಪ್ರಥಮ ರನ್ನರ್ ಅಪ್, ಮದುರ್ ದುಬೇ ದ್ವಿತೀಯ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್ ಅಪ್ ಪ್ರಶಸ್ತಿ ಗಳಿಸಿದರು. ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಶೀರ್ಷಿಕೆ ಪ್ರೀತಿ ಕಲ್ಯಾಣ್‍ಪುರ್ ಅವರ ಪಾಲಾಯಿತು.

  ಮಿಸೆಸ್ ಇಂಡಿಯಾ ಹೆಸರಲ್ಲಿ ವಂಚನೆ: ಸ್ಪರ್ಧಾಳುವಿಂದ ದೂರು

  ಬೆಂಗಳೂರಿನ ರಾಯಲ್ ಆರ್ಕಿಡ್ ರೆಸಾರ್ಟ್ ಅಂಡ್ ಕನ್ವೆನ್ಷನ್ ಸೆಂಟರ್ ನಲ್ಲಿ ಈ ಫೈನಲ್ ಸ್ಪರ್ಧೆ ಶನಿವಾರ ನಡೆಯಿತು. ಫೈನಲ್ ಫೋಟೋಶೂಟ್ ನಂತರ ಪ್ರಿ-ಜಡ್ಜಿಂಗ್ ಕಾರ್ಯಕ್ರಮ ಮತ್ತು ಸಹಜ ಚರ್ಮ ಮತ್ತು ಮೇಕಪ್ ಟಿಪ್ಸ್ ಕುರಿತು ಕಾರ್ಯಾಗಾರಗಳನ್ನು ಆಯೋಜಿಸಲಾಗಿತ್ತು.

  ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

  ತರಹೇವಾರಿ ಬಿರುದುಗಳು

  ತರಹೇವಾರಿ ಬಿರುದುಗಳು

  ಶನಿವಾರ ನಡೆದ ಫೈನಲ್ಸ್ ಹಲವು ಆಕರ್ಷಣೆಗಳನ್ನು ಹೊಂದಿತ್ತು. ಇದರಲ್ಲಿ ಎಥ್ನಿಕ್, ಫಿಟ್ನೆಸ್ವೇರ್ ಮತ್ತು ವೆಸ್ಟ್ರನ್ ಗೌನ್ ಸುತ್ತುಗಳಿದ್ದವು. ನಂತರ ಮಿಸೆಸ್ ಫೋಟೋಜೆನಿಕ್, ಮಿಸೆಸ್ ದಿವಾ, ಮಿಸೆಸ್ ಗ್ಲಾಮರಸ್, ಮಿಸೆಸ್ ಇನ್ಸ್ಪಿರೇಷನಲ್, ಮಿಸೆಸ್ ಬೆಸ್ಟ್ ವಾಕ್, ಮಿಸೆಸ್ ಬೆಸ್ಟ್ ಸ್ಮೈಲ್, ಮಿಸೆಸ್ ಇನ್ನರ್ ಬ್ಯೂಟಿ, ಮಿಸೆಸ್ ಬ್ಯೂಟಿಫುಲ್ ಐಸ್, ಮಿಸೆಸ್ ಇಂಟೆಲೆಕ್ಚುಯಲ್, ಮಿಸೆಸ್ ಬೆಸ್ಟ್ ಪರ್ಫಾರ್ಮರ್, ಮಿಸೆಸ್ ಟ್ಯಾಲೆಂಟ್ ಕ್ವೀನ್, ಮಿಸೆಸ್ ಫಿಟ್ನೆಸ್ ಕ್ವೀನ್, ಮಿಸೆಸ್ ಕ್ರಿಯೇಟಿವ್ ಕ್ವೀನ್, ಮಿಸೆಸ್ ಬ್ಯೂಟಿಫುಲ್ ಹೇರ್, ಮಿಸೆಸ್ ವಿವಾಷಿಯಸ್, ಮಿಸೆಸ್ ಎಂಟರ್‍ಟೈನರ್, ಮಿಸೆಸ್ ಬಾಡಿ ಬ್ಯೂಟಿಫುಲ್, ಮಿಸೆಸ್ ಗ್ಲೋಯಿಂಗ್ ಸ್ಕಿನ್ ಮತ್ತು ಮಿಸೆಸ್ ಪಾಪ್ಯುಲರ್ ಶೀರ್ಷಿಕೆಗಳನ್ನು ಒಳಗೊಂಡಿತ್ತು.

  ಎಲ್ಲ ವಯಸ್ಸಿನವರಿಗೂ ಅವಕಾಶ

  ಎಲ್ಲ ವಯಸ್ಸಿನವರಿಗೂ ಅವಕಾಶ

  ಅಂತಿಮವಾಗಿ ಎಲ್ಲ ಮೂರು ವಯಸ್ಸಿನ(22-40, 40-60, 60+) ಗುಂಪುಗಳ 17 ಗ್ರಾಂಡ್ ಫೈನಲಿಸ್ಟ್ ಗಳನ್ನು ಆಯ್ಕೆ ಮಾಡಲಾಯಿತು. ಅವರು ಪ್ರಶ್ನೆಗಳ ಸುತ್ತಿನ ನಂತರ 22-40 ವಿಭಾಗದಲ್ಲಿ ಮಿಸೆಸ್ ಇಂಡಿಯಾ ಕರ್ನಾಟಕ, ಮಿಸೆಸ್ ಇಂಡಿಯಾ ಕರ್ನಾಟಕ ಮೊದಲ ಹಾಗೂ ದ್ವಿತೀಯ ರನ್ನರ್ ಅಪ್, 40-60 ವರ್ಷಗಳಲ್ಲಿ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ, ಕ್ಲಾಸಿಕ್ ಮಿಸೆಸ್ ಇಂಡಿಯಾ-ಕರ್ನಾಟಕ ಮೊದಲ ಹಾಗೂ ದ್ವಿತೀಯ ರನ್ನರ್ ಅಪ್ ಮತ್ತು 60 ವರ್ಷ ಮೇಲ್ಪಟ್ಟವರ ವಿಭಾಗದಲ್ಲಿ ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ, ಸೂಪರ್ ಕ್ಲಾಸಿಕ್ ಮಿಸೆಸ್ ಇಂಡಿಯಾ ಕರ್ನಾಟಕ ಮೊದಲ ಹಾಗೂ ದ್ವಿತೀಯ ರನ್ನರ್ ಅಪ್‍ ಗಳನ್ನು ಆಯ್ಕೆ ಮಾಡಲಾಗಿದೆ. ಅವರು ಪ್ರತಿಷ್ಠಿತ ಮಿಸೆಸ್ ಇಂಡಿಯಾದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ. ಅಲ್ಲಿಂದ ಮಿಸೆಸ್ ಏಷ್ಯಾ, ಮಿಸೆಸ್ ವರ್ಲ್ಡ್ ಮತ್ತು ಮಿಸೆಸ್ ಪ್ಲಾನೆಟ್ ಈವೆಂಟ್ಸ್ ಗೆ ಮುನ್ನಡೆಯಲಿದ್ದಾರೆ.

  ಮಾಡೆಲ್ ಗಳಲ್ಲ, ರೋಲ್ ಮಾಡೆಲ್ ಗಳು ಬೇಕು!

  ಮಾಡೆಲ್ ಗಳಲ್ಲ, ರೋಲ್ ಮಾಡೆಲ್ ಗಳು ಬೇಕು!

  ಬೆಂಗಳೂರಿನಲ್ಲಿ ಫೈನಲ್ ಕಾರ್ಯಕ್ರಮ ಎಲ್ಲರ ಉತ್ಸಾಹದ ಕೂಗಿನೊಂದಿಗೆ ನಡೆಯಿತು. ಪ್ರೇಕ್ಷಕರು ನೃತ್ಯ ತಂಡಗಳ ನೃತ್ಯಕ್ಕೆ ಮನಸೋತರು. ಹಲವು ಖ್ಯಾತನಾಮರು, ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಮಿಸೆಸ್ ಇಂಡಿಯಾ-ಕರ್ನಾಟಕ 2018 ಅತ್ಯಂತ ಯಶಸ್ವಿಯಾಗಿದ್ದು, ನೂರಾರು ವಿವಾಹಿತ ಸ್ತ್ರೀಯರು ಕಳೆದ ವರ್ಷ ಪ್ರಾರಂಭವಾದ ಈ ಕಾರ್ಯಕ್ರಮದ ಆಡಿಷನ್ ನಲ್ಲಿ ಭಾಗವಹಿಸುತ್ತಿದ್ದಾರೆ. ಸಮಾಜದ ವಿವಿಧ ವಲಯಗಳ ಸ್ತ್ರೀಯರು ಸಕ್ರಿಯವಾಗಿ ಈ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ಬಾರಿ ಕಾರ್ಯಕ್ರಮ ಮತ್ತಷ್ಟು ದೊಡ್ಡ ಪ್ರಮಾಣದಲ್ಲಿತ್ತು. ವಿವಾಹಿತ ಸ್ತ್ರೀಯರು ವಿಶ್ವದಲ್ಲಿ ತಮ್ಮದೇ ಛಾಪು ಮೂಡಿಸಲು ಇದು ವೇದಿಕೆ ಒದಗಿಸುತ್ತದೆ. ಮಿಸೆಸ್ ಇಂಡಿಯಾ ಕರ್ನಾಟಕ ಮಹಿಳೆಯರನ್ನು ವೈಯಕ್ತಿಕ ಪ್ರಗತಿಗೆ ಅವಕಾಶ ಕಲ್ಪಿಸುವ ಮೂಲಕ ಅವರನ್ನು ಸಬಲಗೊಳಿಸುತ್ತದೆ. ಇದು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿವಿಧ ಹಿನ್ನೆಲೆಗಳ ಮಹಿಳೆಯರನ್ನು ಒಗ್ಗೂಡಿಸಲು ಮತ್ತು ಜೀವನಪೂರ್ತಿ ಅವರ ಉನ್ನತಿಗೆ ಶ್ರಮಿಸಲು ನೆರವಾಗುತ್ತದೆ. ಮಿಸೆಸ್ ಇಂಡಿಯಾ ಕರ್ನಾಟಕ ಮಾಡೆಲ್ ಗಳನ್ನು ನಿರೀಕ್ಷಿಸುವುದಿಲ್ಲ ಬದಲಿಗೆ ಅವರು ರೋಲ್ ಮಾಡೆಲ್ ಆಗುವಂತೆ ಮಾಡುತ್ತದೆ ಎಂಬುದು ಕಾರ್ಯಕ್ರಮ ಆಯೋಜಕರ ಮಾತು.

  ಪ್ರತಿಭಾವಂತ ವಿವಾಹಿತ ಮಹಿಳೆಯರನ್ನು ಬೆಳಕಿಗೆ ತರುವ ಯತ್ನ

  ಪ್ರತಿಭಾವಂತ ವಿವಾಹಿತ ಮಹಿಳೆಯರನ್ನು ಬೆಳಕಿಗೆ ತರುವ ಯತ್ನ

  "ಮಿಸೆಸ್ ಇಂಡಿಯಾ ಕರ್ನಾಟಕ ವೈವಿಧ್ಯತೆಯಲ್ಲಿ ಸೌಂದರ್ಯವನ್ನು ಸಂಭ್ರಮಿಸುವ ಏಕೈಕ ಸ್ಪರ್ಧೆಯಾಗಿದೆ. ಅವಕಾಶ ವಂಚಿತರಾದ ಹಲವು ಮಹಿಳೆಯರು ಮುಂಚೂಣಿಗೆ ಬರಲಿ ಎನ್ನುವ ದೃಷ್ಟಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದೇವೆ ಎಂದು ಮಾಜಿ ಮಿಸೆಸ್ ಇಂಡಿಯಾ ಏಷ್ಯಾ ಇಂಟರ್ ನ್ಯಾಷನಲ್ ಪ್ರತಿಭಾ ಸೌಂಶಿಮಠ್ ಹೇಳಿದರು. ಮಿಸೆಸ್ ಇಂಡಿಯಾ ಕರ್ನಾಟಕ ರಾಜ್ಯದ ಮೂಲೆ ಮೂಲೆಯನ್ನೂ ತಲುಪುವ ಉದ್ದೇಶ ಹೊಂದಿದ್ದು ಪ್ರತಿಭಾವಂತ ವಿವಾಹಿತ ಮಹಿಳೆಯರನ್ನು ಬೆಳಕಿಗೆ ತರುವುದಲ್ಲದೆ ಅವರಿಗೆ ಪ್ರತಿಷ್ಠಿತ ವೇದಿಕೆ ಸೃಷ್ಟಿಸುವ ಮೂಲಕ ತಮ್ಮನ್ನು ಜಗತ್ತಿಗೆ ಪರಿಚಯಿಸಿಕೊಳ್ಳಲು ನೆರವಾಗುತ್ತದೆ.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  English summary
  The finale for Mrs India Karnataka-2018 was held at Royal Orchid Resort & Convention Centre on March 24th Saturday. Here are the winners: Mrs. India Karnataka winner Rajender Kaur, Classic mrs India Karnataka winner Kajol Bhatia, Super classic mrs India Karnataka Preeti kalyanpur

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more