ಪಿಜಿ ಮೆಡಿಕಲ್ ಶುಲ್ಕ ಶೇ.15ರಷ್ಟು ಹೆಚ್ಚಳ: ಸರ್ಕಾರಿ ಸೀಟಿಗೆ 5.6 ಲಕ್ಷ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 08: ಖಾಸಗಿ ವೈದ್ಯಕೀಯ ಕಾಲೇಜುಗಳ ಲಾಭಿಗೆ ಕೊನೆಗೂ ಮಣಿದಿರುವ ರಾಜ್ಯ ಸರ್ಕಾರ 2018-19ನೇ ಸಾಲಿನಲ್ಲಿ ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತವೈದ್ಯಕೀಯ ಕೋರ್ಸ್ ಗಳ ಪ್ರವೇಶ ಶುಲ್ಕವನ್ನು ಶೇ.15ರಷ್ಟು ಹೆಚ್ಚಳ ಮಾಡಿದೆ.

ಖಾಸಗಿ ವೈದ್ಯ-ದಂತ ವೈದ್ಯಕೀಯ ಕಾಲೇಜು ಗಳ ಒಕ್ಕೂಟ ಸರ್ಕಾರಕ್ಕೆ ಮನವಿ ಮಾಡಿತ್ತು. ಬಳಿಕ ಒಕ್ಕೂಟದ ಪ್ರತಿನಿಧಿಗಳೋಂದಿಗೆ ಈ ಹಿಂದೆ ಎರಡು ಸುತ್ತಿನ ಸಭೆ ನಡೆಸಿದ ಸರ್ಕಾರ ಇದು ಚುನಾವಣಾ ವರ್ಷವಾದ್ದರಿಂದ ಶುಲ್ಕ ಹೆಚ್ಚಳ ಸಾಧ್ಯವಿಲ್ಲವೆಂದು ತಿಳಿಸಿತ್ತು.

ವರ್ಷಾಂತ್ಯದೊಳಗೆ 'ಆರೋಗ್ಯ ಕರ್ನಾಟಕ' ಯೋಜನೆ ಜಾರಿ, ಸಿಎಂ ಘೋಷಣೆ

ಆದರೆ, ಕಾಲೇಜುಗಳು ಶುಲ್ಕ ಹೆಚ್ಚಿಸಲಿದ್ದರೆ ಸರ್ಕಾರದೊಂದಿಗೆ ಸೀಟು ಹಂಚಿಕೆ ಮತ್ತು ಶುಲ್ಕ ನಿಗದಿ ಒಪ್ಪಂದಕ್ಕೆ ಸಹಿ ಹಾಕುವುದಿಲ್ಲವೆಂದು ಪಟ್ಟು ಹಿಡಿದಾಗ ಅಂತಿಮ ಕ್ಷಣದಲ್ಲಿ ಶೇ.15ರಷ್ಟು ಶುಲ್ಕ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ಸೂಚಿಸಿದೆ.

Medical courses fees more costlier in Karnataka

ಶೇ.15ರಷ್ಟು ಶುಲ್ಕ ಹೆಚ್ಚಳದಿಂದ ಪ್ರಸ್ತುತ ಖಾಸಗಿ ಕಾಲೇಜುಗಳಲ್ಲಿ 4.40 ಲಕ್ಷ ರೂ ಇರುವ ಸರ್ಕಾರಿ ಕೋಟಾದ ಪಿಜಿ ವೈದ್ಯಕೀಯ ಶುಲ್ಕ 5.06 ಲಕ್ಷ ರೂ ಗೆ ಹೆಚ್ಚಲಿದೆ. 6.60 ಲಕ್ಷ ರೂ ಇರುವ ಆಡಳಿತ ಮಂಡಳಿ ಕೋಟಾದ ವೈದ್ಯ ಸೀಟಿನ ಶುಲ್ಕ 7.59 ಲಕ್ಷ ರೂ ಆಗಲಿದೆ. ಅದೇ ರೀತಿ ಆಡಳಿತ ಮಂಡಳಿಯ ಡೆಂಟಲ್ ಸೀಟು ಶುಲ್ಕ ಪ್ರಸ್ತುತ 3.52 ಲಕ್ಷ ರೂ ಇದ್ದು, ಅದು 4.04ನ ಲಕ್ಷ ರೂಗೆ, ಸರ್ಕಾರಿ ದಂತ ವೈದ್ಯಕೀಯ ಸೀಟು 2.58 ಲಕ್ಷ ರೂ ಗೆ ಏರಲಿದೆ.

ವೈದ್ಯಕೀಯ ಪಿಜಿ ಶುಲ್ಕ ಹೆಚ್ಚಳಕ್ಕೆ ಸರ್ಕಾರ ನಕಾರ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Medical and Dental Courses in Private colleges have become more costlier as government of Karnataka increased fees upto 15 percent. It will be Rs.5.06 lakhs for medical in private colleges under government quota.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ