ಅತ್ಯಾಚಾರ ಆರೋಪ ಮುಕ್ತ ಫಾಸ್ಕಲ್ ವಿರುದ್ಧ ಪತ್ನಿಯಿಂದ ಮೇಲ್ಮನವಿ

Subscribe to Oneindia Kannada

ಬೆಂಗಳೂರು, ಏಪ್ರಿಲ್ 20: ತನ್ನ ಮೂರೂವರೆ ವರ್ಷದ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪದಿಂದ ದೋಷ ಮುಕ್ತರಾಗಿದ್ದ ಫ್ರೆಂಚ್ ರಾಯಭಾರ ಕಚೇರಿಯ ಮಾಜಿ ಅಧಿಕಾರಿ ಫಾಸ್ಕಲ್ ಮಜೂರಿಯರ್ ವಿರುದ್ಧ ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಲಾಗುವುದು ಎಂದು ಅವರ ಪತ್ನಿ ತಿಳಿಸಿದ್ದಾರೆ.

ಬುಧವಾರದಂದು ಬೆಂಗಳೂರಿನ ವಿಶೇಷ ನ್ಯಾಯಾಲಯ ಫಾಸ್ಕಲ್ ಮಜೂರಿಯಾರ್ ರನ್ನು ಅತ್ಯಾಚಾರ ಆರೋಪದಿಂದ ಮುಕ್ತರನ್ನಾಗಿ ಮಾಡಿತ್ತು. ಸುಮಾರು ಒಂದೂವರೆ ವರ್ಷಗಳ ಕಾಲ ನಿರಂತರವಾಗಿ ತನ್ನ ಮಗಳ ಮೇಲೆಯೇ ಅತ್ಯಾಚಾರವೆಸಗಿದ ಆರೋಪವನ್ನು ಅವರು ಹೊತ್ತಿದ್ದರು.[ಮಗಳ ಮೇಲೆ ಅತ್ಯಾಚಾರ ಆರೋಪದಿಂದ ಪ್ಯಾಸ್ಕಲ್ ಮುಕ್ತ]

Mazurier's wife, Suja has said she will appeal against the husbands acquittal

ಫಾಸ್ಕಲ್ ವಿರುದ್ಧ ಸ್ವತಃ ಅವರ ಪತ್ನಿ ಸುಜಾ ಜೋನ್ಸ್ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಪತ್ನಿಯ ದೂರಿನನ್ವಯ ಪಾಸ್ಕಲ್ ಮಜೂರಿಯರ್ ರನ್ನು ಹೈಗ್ರೌಂಡ್ ಪೊಲೀಸರು ಜೂನ್ 19, 2012ರಲ್ಲಿ ಬಂಧಿಸಿದ್ದರು. ಇದೀಗ ಐದು ವರ್ಷಗಳ ನಂತರ ಅವರನ್ನು ಆರೋಪದಿಂದ ಮುಕ್ತರನ್ನಾಗಿ ಮಾಡಲಾಗಿದೆ.

ಈ ಕುರಿತು ಹೇಳಿಕೆ ನೀಡಿರುವ ಸುಜಾ ಜೋನ್ಸ್, ಫಾಸ್ಕಲ್ ಆರೋಪ ಮುಕ್ತರಾಗಿರುವುದರಿಂದ ತಮ್ಮ ಮಗಳಿಗೆ ನ್ಯಾಯ ಸಿಕ್ಕಿಲ್ಲ ಎಂದು ಹೇಳಿದ್ದಾರೆ. ಮಾತ್ರವಲ್ಲ ತಾವು ಈ ಆದೇಶವನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತೇನೆ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
French diplomat Pascal Mazurier's wife, Suja Jones Mazurier, has said she will appeal against the verdict. A Bengaluru court on Wednesday acquitted former Pascal Mazurier in a rape case. He was accused by his wife of raping their three-year-old daughter in 2012.
Please Wait while comments are loading...