ಕಾಲ್ ಸೆಂಟರ್ ವಿವಾದ : ಕನ್ನಡವೇ ನನ್ನಮ್ಮ ಎಂದ ಬಿಬಿಎಂಪಿ ಮೇಯರ್

Posted By:
Subscribe to Oneindia Kannada

ಬೆಂಗಳೂರು, ಜುಲೈ 05: ಕಳೆದ ಕೆಲ ದಿನಗಳಿಂದ ಬಿಬಿಎಂಪಿಯ ಉದ್ದೇಶಿತ ಬಹುಭಾಷೆ ಕಾಲ್ ಸೆಂಟರ್ ವಿವಾದಕ್ಕೀಡಾಗಿದ್ದು ಗೊತ್ತಿರಬಹುದು. ಈ ಬಗ್ಗೆ ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಮಂಗಳವಾರ ಸ್ಪಷ್ಟನೆ ನೀಡಿದ್ದಾರೆ.

ಕರ್ನಾಟಕದಲ್ಲಿ ಕನ್ನಡವೇ ಆಡಳಿತ ಭಾಷೆ. ಬೇರೆ ಯಾವುದೆ ಭಾಷೆಗೆ ಆದ್ಯತೆ ನೀಡುವುದು ಪಾಲಿಕೆ ಉದ್ದೇಶವಲ್ಲ. ಎಲ್ಲಾ ಹಂತದಲ್ಲೂ ಕನ್ನಡಕ್ಕೆ ಬೆಲೆ ನೀಡಲಾಗುತ್ತಿದೆ. ಸಾರ್ವಜನಿಕರು ಕಂಟ್ರೋಲ್ ರೂಮ್, ಕಾಲ್ ಸೆಂಟರ್ ಗಳ ಜತೆ ಕನ್ನಡದಲ್ಲೇ ವ್ಯವಹರಿಸಬಹುದು. ಈ ಬಗ್ಗೆ ಯಾವುದೇ ಸುಳ್ಳು ಮಾಹಿತಿಗೆ ಕಿವಿಗೊಡಬೇಡಿ ಎಂದು ಬಿಬಿಎಂಪಿ ಮೇಯರ್ ಹೇಳಿಕೊಂಡಿದ್ದಾರೆ.[ಬಿಬಿಎಂಪಿ ಕಾಲ್ ಸೆಂಟರ್ ವಿರುದ್ಧ - ಐಟಿ ಬಿಟಿ ಕನ್ನಡಿಗರ ಟ್ವಿಟ್ಟರ್ ಸಮರ]

Mayor Manjunath Reddy clarification on BBMP Multilingual control room


ಬಿಬಿಎಂಪಿಯವರು ಪರಭಾಷೆ ಕಾಲ್ ಸೆಂಟರ್ ಆರಂಭಿಸುತ್ತಿರುವುದರ ವಿರುದ್ಧವಾಗಿ ಐಟಿ ಬಿಟಿ ಕನ್ನಡಿಗರು ಟ್ವಿಟ್ಟರ್ ನಲ್ಲಿ ಅಭಿಯಾನ ನಡೆಸಿದ್ದವು.


ಬಿಜೆಪಿ ಮುಖಂಡ ಸಿ.ಟಿ.ರವಿ ಯವರು ಇದಕ್ಕೆ ಬೆಂಬಲ ವ್ಯಕ್ತಪಡಿಸಿ, ಬಿಬಿಎಂಪಿಯ ಕಾಲ್ ಸೆಂಟರ್ ನಲ್ಲಿ ಬೇರೆ ಭಾಷೆಗಳು ಬೇಡ, ಕೆಲವರು ಕರ್ನಾಟಕದಲ್ಲಿ 5 ವರ್ಷಕ್ಕಿಂತಲೂ ಹೆಚ್ಚು ಕಾಲ ಇಲ್ಲಿರುತ್ತಾರೆ ಅಂತವರು ಇಲ್ಲಿಯ ಭಾಷೆ ಕಲಿತು ಇಲ್ಲಿಗೆ ಒಗ್ಗಿಕೊಳ್ಳುವುದು ಸೂಕ್ತ ಎಂದು ಹೇಳಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mayor Manjunath Reddy took social networking site Facebook to give clarification on proposed BBMP Multilingual control room. Earlier IT BT Kannadigas group and Pro Kannada organisation are opposed Bruhat Bengaluru Mahanagara Palike(BBMP)'s concept of centralized control room and Helpline services in multilingual.
Please Wait while comments are loading...