ಫ್ಲೆಕ್ಸ್ ತೆರವಿಗೆ ಜ.6ರ ಗಡುವು: ಕ್ರಮ ಕೈಗೊಳ್ಳದಿದ್ದರೆ ತಲೆ ದಂಡ

Posted By: Nayana
Subscribe to Oneindia Kannada

ಬೆಂಗಳೂರು, ಜನವರಿ 4 : ಅನಧಿಕೃತ ಜಾಹೀರಾತು ಫಲಕ ತೆರವಿಗೆ ಗಡುವು ವಿಸ್ತರಿಸಲಾಗಿದೆ. ಜನವರಿ 6 ರೊಳಗೆ ತೆರವುಗೊಳಿಸಿ ವರದಿ ನೀಡುವಂತೆ ಆಯುಕ್ತರಿಗೆ ಮೇಯರ್ ಸಂಪತ್ ರಾಜ್ ಸೂಚನೆ ನೀಡಿದ್ದಾರೆ.

ಅನಧಿಕೃತ ಫ್ಲೆಕ್ಸ್ ಹಾವಳಿ: ಮುದ್ರಣ ಮಳಿಗೆಗಳ ಮೇಲೆ ದಾಳಿ

ಡಿಸೆಂಬರ್ ನಲ್ಲಿ ನಡೆದ ಕೌನ್ಸಿಲ್ ಸಭೆಯಲ್ಲಿ ಅನಧಿಕೃತ ಫ್ಲೆಕ್ಸ್ ಮತ್ತು ಬ್ಯಾನರ್ ತೆರವು ಮಾಡದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ಮೇಯರ್ ನೀಡಿದ್ದರು. ಆದರೆ, ಅವರು ಆದೇಶಿಸಿ ವಾರದವಾದರೂ ಫ್ಲೆಕ್ಸ್, ಬ್ಯಾನರ್ ಗಳ ಪ್ರಮಾಣ ಕಡಿಮೆಯಾಗಿಲ್ಲ.

Mayor gives deadline for unauthorised flexes

ಮೇಯರ್ ಆದೇಶ ಕಡೆಗಣನೆ ಬಗ್ಗೆ ಸಾರ್ವಜನಿಕರಿಂಧ ವ್ಯಾಪಕ ಟೀಕೆ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ ನಡೆಸಿದ ಸಂಪತ್ ರಾಜ್ ಜನವರಿ 6 ಕ್ಕೆ ಅಂತಿಮ ಗಡುವು ನೀಡಿದ್ದಾರೆ. ಒಂದು ವೇಳೆ ಕ್ರಮ ಕೈಗೊಳ್ಳದಿದ್ದರೆ ತಲೆದಂಡ ವಿಧಿಸಬೇಕಾಗುತ್ತದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು ಫಲಕಗಳ ಅಳವಡಿಕೆ ಅನುಮತಿ ನೀಡುವುದು ಸೇರಿ ಇನ್ನಿತರ ಅಧಿಕಾರವನ್ನು ಕೇಂದ್ರ ಕಚೇರಿಯಲ್ಲಿನ ಜಾಹೀರಾತು ವಿಭಾಗಕ್ಕೆ ನೀಡಲು ನಿರ್ಧರಿಸಲಾಗಿದೆ. ಜನವರಿ 6ರಂದು ಮತ್ತೊಮ್ಮೆ ಸಭೆ ಕರೆದು ನೀರ್ಮಾನ ಕೈಗೊಳ್ಳಲಾಗುವುದು ಎಂದು ಮೇಯರ್ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
BBMP Mayor Sampath Raj has given deadline to officials for removing unauthorized advertisemnet boards and flexes in the city.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ