ಬೆಂಗಳೂರಿನ ರಸ್ತೆಗಳ ಗುಂಡಿ ಮುಚ್ಚಲು 15 ದಿನಗಳ ಗಡುವು ನೀಡಿದ ಮೇಯರ್

Subscribe to Oneindia Kannada

ಬೆಂಗಳೂರು, ಆಗಸ್ಟ್ 24: ನಗರದ ರಸ್ತೆಗಳ ಗುಂಡಿಗಳನ್ನು ಮುಚ್ಚಲು ಮೇಯರ್ ಜಿ ಪದ್ಮಾವತಿ ಅಧಿಕಾರಿಗಳಿಗೆ 15 ದಿನಗಳ ಗಡುವು ನೀಡಿದ್ದಾರೆ

ಬಿಡಿಎ ಮೂಲೆ ನಿವೇಶನಗಳ ಬಹಿರಂಗ ಹರಾಜಿಗೆ ನಿರ್ಧಾರ

ಬುಧವಾರ ರಸ್ತೆ ಮತ್ತು ಮೂಲ ಸೌಕರ್ಯ ವಿಭಾಗದ ಎಂಜಿನಿಯರ್‌ ಗಳು ಹಾಗೂ ನಗರದ 8 ವಲಯಗಳ ಮುಖ್ಯ ಎಂಜಿನಿಯರ್‌ ಗಳ ಸಭೆ ನಡೆಸಿದ ಅವರು, "ಮಳೆಗಾಲ ಆರಂಭವಾಗಿದೆ. ಆದರೆ ರಸ್ತೆ ಗುಂಡುಗಳನ್ನು ಇನ್ನೂ ಏಕೆ ಮುಚ್ಚಿಲ್ಲ?" ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

Mayor gives 15 days deadline to fill potholes in Bengaluru roads

"ಇನ್ನು ನಗರದಲ್ಲಿ ಬೃಹತ್‌, ಮಧ್ಯಮ ಹಾಗೂ ಸಣ್ಣ ರಸ್ತೆಗಳು ಸೇರಿ ಒಟ್ಟು 14,118 ಕಿ.ಮೀ. ರಸ್ತೆಗಳಿವೆ. ಇದರಲ್ಲಿ ಗುಂಡಿಗಳಿಲ್ಲದ ರಸ್ತೆಗಳಿಲ್ಲ. ತಿಂಗಳ ಹಿಂದೆ ಅಭಿವೃದ್ಧಿಪಡಿಸಿರುವ ಪ್ರಮುಖ ರಸ್ತೆಗಳೇ ಗುಂಡಿ ಬಿದ್ದಿವೆ. ಒಂದು ಮಳೆಗೆ ಗುಂಡಿಗಳ ಸಂಖ್ಯೆ ಹೆಚ್ಚಾಗಿವೆ," ಎಂದು ಅಧಿಕಾರಿಗಳ ವಿರುದ್ಧ ಮೇಯರ್ ಕಿಡಿಕಾರಿದ್ದಾರೆ.

ಇದೇ ವೇಳೆ ರಸ್ತೆ ಮೇಲೆ ನೀರು ಹರಿದು ಹೋಗದೆ, ನೀರು ನಿಲ್ಲುತ್ತಿರುವುದರ ಬಗ್ಗೆಯೂ ಮೇಯರ್ ಅಧಿಕಾರಿಗಳಿಗ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Bengaluru mayor G Padmavathi have given a 15-day deadline to officials to fill potholes in the city roads.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ