ಮಾಸ್ತಿಗುಡಿ ದುರಂತ: ಒಂದು ಶವ ಕೊನೆಗೂ ಪತ್ತೆ

Posted By:
Subscribe to Oneindia Kannada

ತಾವರೆಕೆರೆ, ನವೆಂಬರ್ 09: ರಾಮನಗರ ಜಿಲ್ಲೆ ತಾವೆರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಸಾವನ್ನಪ್ಪಿದ್ದ ಇಬ್ಬರು ನಟರ ಪೈಕಿ, ಒಬ್ಬ ನಟನ ಶವ ಬುಧವಾರ ಮಧ್ಯಾಹ್ನ ಪತ್ತೆಯಾಗಿದೆ.

ಪತ್ತೆಯಾದ ಶವ ಅನಿಲ್ ಅವರದ್ದು ಎಂದು ಎನ್ ಡಿಆರ್ ಎಫ್ ತಂಡ ಸ್ಪಷ್ಟಪಡಿಸಿದೆ. ಜಿಲ್ಲಾಧಿಕಾರಿ ವಿ ಶಂಕರ್ ಹಾಗೂ ಅಗ್ನಿಶಾಮಕದಳದ ಮುಖ್ಯಸ್ಥ ರೇವಣ್ಣ ಅವರು ಕೂಡಾ ಅನಿಲ್ ಶವ ಎಂದಿದ್ದು ಗೊಂದಲಕ್ಕೆ ಕಾರಣವಾಗಿತ್ತು. ಆದರೆ, ನಟ ದುನಿಯಾ ವಿಜಯ್ ಅವರು ಇದು ಉದಯ್ ಶವ ಎಂದಿದ್ದಾರೆ. [ಮಾಸ್ತಿಗುಡಿ ದುರಂತ: ಇಬ್ಬರು ನಟರು ಕೆರೆಗೆ ಹಾರ]

ಕೆರೆಯ ಪಕ್ಕದಲ್ಲೇ ಮರಣೋತ್ತರ ಪರೀಕ್ಷೆ ನಡೆನಡೆಸಲಾಗುತ್ತದೆ. ಮರಣೋತ್ತರ ಪರೀಕ್ಷೆಯ ವಿಡಿಯೋ ಚಿತ್ರಿಕರಣ ನಡೆಸಲಾಗುತ್ತದೆ. ನಂತರ ಕುಟುಂಬಸ್ಥರಿಗೆ ಶವವನ್ನು ನೀಡಲಾಗುತ್ತದೆ.[ಮಾಸ್ತಿಗುಡಿ ಚಿತ್ರದ ನಿರ್ಮಾಪಕ ಸುಂದರ್ ಪಿ ಗೌಡ ಬಂಧನ]

Mastigudi Tragedy: 2 days after mishap actor's body found

ಸೋಮವಾರ ಮಧ್ಯಾಹ್ನ ರಾಮನಗರ ಜಿಲ್ಲೆ ತಾವೆರೆಕೆರೆ ಪೊಲೀಸ್ ಠಾಣೆ ವ್ಯಾಪ್ತಿಯ ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಚಿತ್ರದ ಕ್ಲೈಮ್ಯಾಕ್ಸ್ ಹಂತದ ದೃಶ್ಯಗಳನ್ನು ಚಿತ್ರೀಕರಣ ಮಾಡಲಾಗುತ್ತಿತ್ತು. ಹೆಲಿಕಾಪ್ಟರ್​ನಿಂದ ನೀರಿಗೆ ಹಾರಿ ನಾಯಕನಿಂದ ತಪ್ಪಿಸಿಕೊಳ್ಳುವ ಸನ್ನಿವೇಶದಲ್ಲಿ ಇಬ್ಬರು ನಟರು ನೀರುಪಾಲಾಗಿದ್ದರು.[ಮಾಸ್ತಿಗುಡಿ ಚಿತ್ರ ತಂಡದ ವಿರುದ್ಧ ಎಫ್ ಐಆರ್]

ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಿತ್ರದ ಕ್ಲೈಮ್ಯಾಕ್ಸ್ ಶೂಟಿಂಗ್ ಸಂದರ್ಭದಲ್ಲಿ ಖಳನಟ ಅನಿಲ್ ಹಾಗೂ ರಾಘವ್ ಉದಯ್ ಅವರು ದುರಂತ ಸಾವಿಗೀಡಾಗಿರುವ ಪ್ರಕರಣದಲ್ಲಿ ಮೊದಲ ಆರೋಪಿಯ ಬಂಧನವಾಗಿದೆ. ತಾವರೆಕೆರೆ ಪೊಲೀಸರು ಮುಖ್ಯ ಆರೋಪಿ ಚಿತ್ರ ನಿರ್ಮಾಪಕ ಸುಂದರ್ ಪಿ ಗೌಡ ಅವರನ್ನು ಮಂಗಳವಾರ ಸಂಜೆ ಬಂಧಿಸಿದ್ದರು.

ಬಂಧಿತ ಆರೋಪಿ ಸುಂದರ್ ಗೌಡರನ್ನು ರಾಮನಗರದ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, 14ದಿನಗಳ ಕಾಲ ನ್ಯಾಯಾಂಗ ಬಂಧನ ಶಿಕ್ಷೆ ಲಭಿಸಿದೆ. ಸದ್ಯ ರಾಮನಗರದ ಜಿಲ್ಲಾ ಕಾರಾಗೃಹದಲ್ಲಿದ್ದಾರೆ. ಮಿಕ್ಕ ಆರೋಪಿಗಳು ನಾಪತ್ತೆಯಾಗಿದ್ದು, ಹುಡುಕಾಟ ಜಾರಿಯಲ್ಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Body of Raghav Uday, one of the actors, who drowned in T G Halli during a shoot has been found by search teams. Teams of NDRF, Fire and safety personnel along with the help of local fishermen had been scouting the T G Halli reservoir waters since Monday evening for bodies of actors Uday and Anil.
Please Wait while comments are loading...