ಗಣಪತಿ ಆತ್ಮಹತ್ಯೆಯ ಪ್ರಮುಖ ಸಾಕ್ಷಿಗಳ ನಾಶ? ಇಲ್ಲಿದೆ ಸ್ಫೋಟಕ ಮಾಹಿತಿ

Posted By: ಒನ್ ಇಂಡಿಯಾ ನ್ಯೂಸ್ ಡೆಸ್ಕ್
Subscribe to Oneindia Kannada

ಬೆಂಗಳೂರು, ಆಗಸ್ಟ್ 23:ಕಳೆದ ವರ್ಷಾಂತ್ಯಕ್ಕೆ ಕರ್ನಾಟಕದಲ್ಲಿ ಭಾರೀ ಸಂಚಲನ ಸೃಷ್ಟಿಸಿದ್ದ ಡಿವೈಎಸ್ ಪಿ ಗಣಪತಿ ಆತ್ಮಹತ್ಯೆ ಪ್ರಕರಣದ ತನಿಖೆಯಲ್ಲಿ ಭಾರೀ ಪ್ರಮಾಣದ ಲೋಪ ದೋಷಗಳಾಗಿವೆ ಎಂದು ಟೈಮ್ಸ್ ನೌ ವರದಿ ಮಾಡಿದೆ.

ಗಣಪತಿ ಸಾವಿನ ಪ್ರಕರಣ: ಜಾರ್ಜ್ ಗೆ ಸುಪ್ರೀಂನಿಂದ ನೋಟಿಸ್

ಈ ಪ್ರಕರಣದ ತನಿಖೆಯ ವೇಳೆ ವಿಧಿವಿಜ್ಞಾನ ಪ್ರಯೋಗಾಲಯದ ತಜ್ಞರು ಸಂಗ್ರಹಿಸಿದ್ದ ಕೆಲವಾರು ದಾಖಲೆಗಳ ವಿವರಗಳುಳ್ಳ ವರದಿಯ ಪ್ರತಿಗಳನ್ನು ಆಧಾರವಾಗಿಟ್ಟುಕೊಂಡು ವರದಿ ಮಾಡಿರುವ ವಾಹಿನಿಯು, ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಗಂಭೀರವಾದ ಲೋಪಗಳಾಗಿದ್ದು, ಸಿಐಡಿ ತನಿಖೆಯಲ್ಲಿ ಹಲವಾರು ಅಂಶಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದೆ.

ಡಿವೈಎಸ್ಪಿ ಗಣಪತಿ ಕೇಸ್: ಸಚಿವ ಜಾರ್ಜ್ ಗೆ ಸುಪ್ರೀಂನಿಂದ ನೋಟಿಸ್

ವಾಹಿನಿಯು ಹೇಳುವಂತೆ, ವಿಧಿವಿಜ್ಞಾನ ತಜ್ಞರ ವರದಿಯಲ್ಲಿನ ಅಂಶಗಳು ಹೀಗಿವೆ:

ಕರೆ ವಿವರ ಡಿಲೀಟ್ ಮಾಡಿದ್ದೇಕೆ?

ಕರೆ ವಿವರ ಡಿಲೀಟ್ ಮಾಡಿದ್ದೇಕೆ?

- ಸಿಐಡಿ ವರದಿಯಲ್ಲಿ ಗಣಪತಿ ಅವರು ಲಾಡ್ಜ್ ಒಂದರ ಕೊಠಡಿಯೊಂದರಲ್ಲಿ ಫ್ಯಾನಿಗೆ ನೇಣು ಹಾಕಿಕೊಂಡಿದ್ದರೆಂದು ಹೇಳಲಾಗಿದೆ. ಆದರೆ, ಅದರ ಫೋಟೋವನ್ನು ತೆಗೆದಿಲ್ಲ.
- ಗಣಪತಿ ಶವ ದೊರೆತ ಸ್ಥಳದಿಂದ ಅವರ ಮೊಬೈಲ್ ವಶಕ್ಕೆ ಪಡೆದಿರುವ ಅಧಿಕಾರಿಗಳಿಂದ ಅದರಲ್ಲಿನ ಅನೇಕ ಮಾಹಿತಿಗಳನ್ನು ಡಿಲೀಟ್ ಮಾಡಲಾಗಿದೆ. ಗಣಪತಿ ಬಳಸುತ್ತಿದ್ದ ಪೆನ್ ಡ್ರೈವ್ ಗಳಿಂದ ಅನೇಕ ಫೈಲ್ ಗಳನ್ನು ಡಿಲೀಟ್ ಮಾಡಲಾಗಿದೆ.

ಮಾಜಿ ಮಂತ್ರಿ, ಹಾಲಿ ಶಾಸಕರ ಕರೆಗಳು ಡಿಲೀಟ್ ಏಕಾದವು?

ಮಾಜಿ ಮಂತ್ರಿ, ಹಾಲಿ ಶಾಸಕರ ಕರೆಗಳು ಡಿಲೀಟ್ ಏಕಾದವು?

- ಅವರ ಪರ್ಸನಲ್ ಕಂಪ್ಯೂಟರ್ ನಿಂದ 100 ಇ-ಮೇಲ್ ಗಳನ್ನು ಡಿಲೀಟ್ ಮಾಡಲಾಗಿದೆ.
- ಪೆನ್ ಡ್ರೈವ್ ನಿಂದ 145 ಪಿಡಿಎಫ್ ಫೈಲ್ ಗಳು ಡಿಲೀಟ್
- ಮೊಬೈಲ್ ನ ಕಾಲ್ ಲಾಗ್ ನಲ್ಲಿದ್ದ ಕೆಲವಾರು ಕರೆಗಳು, ಹೆಸರುಗಳು ಡಿಲೀಟ್. ಇದರಲ್ಲಿ ಒಬ್ಬ ಮಾಜಿ ಮಂತ್ರಿ, ಹಾಲಿ ಕಾಂಗ್ರೆಸ್ ಶಾಸಕ, ಕೇಂದ್ರ ಸಚಿವರೊಬ್ಬರ ಸಂಬಂಧಿಯ ಕರೆಗಳ ಲಾಗ್ ಡಿಲೀಟ್ ಆಗಿದೆ.
- ಮೊಬೈಲ್ ನಲ್ಲಿದ್ದ 52 ಮೆಸೇಜ್ ಗಳು ಡಿಲೀಟ್ ಆಗಿದೆ.

ಹಲವಾರು ಅನುಮಾನಗಳು

ಹಲವಾರು ಅನುಮಾನಗಳು

- ಮೊಬೈಲ್ ನಲ್ಲಿದ್ದ 2500 ಫೋಟೋಗಳು ಡಿಲೀಟ್ ಆಗಿದೆ.
- ಕಂಪ್ಯೂಟರ್ ನಲ್ಲಿದ್ದ 910 ಎಕ್ಸೆಲ್ ಫೈಲ್ ಗಳು ಡಿಲೀಟ್ ಆಗಿದೆ.
- 2699 ಎಂಎಸ್ ವರ್ಡ್ ಫೈನಲ್ ಗಳು ಡಿಲೀಟ್ ಆಗಿದೆ.
- 791 ಟೆಕ್ಸ್ ಫೈಲ್ ಗಳು ಡಿಲೀಟ್ ಆಗಿದೆ.
- ಗಣಪತಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದ ಹೋಟೆಲ್ ಕೊಠಡಿಯ ಚಿಲಕ ಒಳಗಿನಿಂದ ಹಾಕಿರುವುದರ ಬಗ್ಗೆ ಅನುಮಾನ.

ಏನಿದು ಕ್ಯಾನ್ವಾಸ್ ಬೆಲ್ಟ್?

ಏನಿದು ಕ್ಯಾನ್ವಾಸ್ ಬೆಲ್ಟ್?

- ಗಣಪತಿ ಶವ ನೇತಾಡುತ್ತಿದ್ದ ಸೀಲಿಂಗ್ ಫ್ಯಾನ್ ನ ಮೇಲಿರುವ ಕೆಲವಾರು ಬೆರಳಚ್ಚುಗಳನ್ನು (ಫಿಂಗರ್ ಪ್ರಿಂಟ್ ಗಳನ್ನು) ಪರಿಗಣಿಸಿಲ್ಲ.
- ಅಲ್ಲದೆ, ಫ್ಯಾನಿಗೆ ಗಣಪತಿ ಬಟ್ಟೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಅದರ ಜತೆಗೇ, ಪೊಲೀಸರು ಉಪಯೋಗಿಸುವ ಕ್ಯಾನ್ವಾಸ್ ಬೆಲ್ಟ್ ಕೂಡ ಫೋಟೋದಲ್ಲಿ ಕಾಣುತ್ತಿದೆ. ಇದನ್ನು ಸಿಐಡಿಯು ತನಿಖೆಯಲ್ಲಿ ಪರಿಗಣಿಸಿಲ್ಲ.

ಸಾಕ್ಷಿಯಿಂದ ಹೇಳಿಕೆ

ಸಾಕ್ಷಿಯಿಂದ ಹೇಳಿಕೆ

- ಆತ್ಮಹತ್ಯೆ ನಡೆದ ಸ್ಥಳದಲ್ಲಿ ಎರಡು ಹಾರಿಸಿರುವ ಬುಲೆಟ್ ಗಳ ಗುರುತು ಹಾಗೂ ಸಿಡಿದ ಗುಂಡಿನ ಕ್ಯಾಟ್ರಿಡ್ಜ್ ಗಳು ಪತ್ತೆಯಾಗಿದ್ದರ ಬಗ್ಗೆ ಮಾಹಿತಿ ಇಲ್ಲ. ಇದಕ್ಕೆ ಪೂರಕವಾಗಿ, ಸಿಐಡಿ ಅಧಿಕಾರಿಗಳು ತನಿಖೆಯ ವೇಳೆ, ಒಬ್ಬ ಪ್ರತ್ಯಕ್ಷ ಸಾಕ್ಷಿಯಿಂದ, ತಮ್ಮಿಂದ ಹೇಳಿಕೆ ಪಡೆದುಕೊಂಡಿದ್ದಲ್ಲದೆ, ಖಾಲಿ ಪೇಪರ್ ನ ಮೇಲೆ ಸಹಿ ಮಾಡಿಸಿಕೊಂಡಿದ್ದಾಗಿ ಹೇಳಿದ್ದನ್ನು ಪ್ರಸಾರ ಮಾಡಿರುವ ವಾಹಿನಿ, ಈ ಹೇಳಿಕೆಗೆ ಆದ್ಯತೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Times Now news channel says it has got access to the forensic department's records which are related to DYSP Ganapathi's suicide case and says the investigation by Karnataka CID in this case was massive cover-up to protect influencial persons.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X