ಬೆಂಗಳೂರಿನಲ್ಲಿ ಲೈಂಗಿಕ ವೃತ್ತಿಗೆ ಥಾಯ್ಲೆಂಡ್ ಮಹಿಳೆಯರಿಗೆ ಬೇಡಿಕೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 9 : ಭಾರತದಲ್ಲಿ ಸ್ಪಾ ಹಾಗೂ ಮಸಾಜ್ ಪಾರ್ಲರ್ ಗಳ ಸಂಖ್ಯೆ ಹೆಚ್ಚುತ್ತಿದ್ದು, ಅಲ್ಲಿ ಕೆಲಸ ಮಾಡುವ ಸಲುವಾಗಿ ಥಾಯ್ಲೆಂಡ್ ಮಹಿಳೆಯರಿಗೆ ಬೇಡಿಕೆ ಜಾಸ್ತಿಯಾಗಿದೆ. ಹಲವರನ್ನು ಲೈಂಗಿಕ ಗುಲಾಮಗಿರಿಗೆ ಬಳಸಲಾಗುತ್ತಿದೆ ಎಂಬ ಸಂಗತಿಯನ್ನು ಬುಧವಾರ ಅಧಿಕಾರಿಗಳು ಬಯಲು ಮಾಡಿದ್ದಾರೆ.

ಬೆಂಗಳೂರು: ಮಹಿಳೆಯರ ಒಳ ಉಡುಪು ಧರಿಸಿ ರೂಪದರ್ಶಿಗೆ ಕಿರುಕುಳ

ಬೆಂಗಳೂರು, ದೆಹಲಿ ಹಾಗೂ ಜೈಪುರದಂಥ ನಗರಗಳಲ್ಲಿ ಥಾಯ್ಲೆಂಡ್ ಮಹಿಳೆಯನ್ನು ವೇಶ್ಯಾವಾಟಿಕೆಗೆ ಬಳಸುವುದು ಹೆಚ್ಚು ಎಂಬ ಅಂಶ ಕೂಡ ತಿಳಿದುಬಂದಿದೆ.

Massage Parlours Drive Demand For Thai Sex Slaves In Bengaluru

ಈ ವರ್ಷ ಮುಂಬೈ, ಪುಣೆ ಸೇರಿದಂತೆ ವಿವಿಧ ನಗರಗಳಲ್ಲಿ ನಡೆಸಿದ ವೇಶ್ಯಾವಾಟಿಕೆ ಅಡ್ಡೆ ಮೇಲಿನ ದಾಳಿಯಲ್ಲಿ ಥಾಯ್ಲೆಂಡ್ ನ ಕನಿಷ್ಠ ನಲವತ್ತು ಮಹಿಳೆಯರನ್ನು ರಕ್ಷಿಸಲಾಗಿದೆ. "ಥಾಯ್ಲೆಂಡ್ ಮಹಿಳೆಯರ ಮೈ ಬಣ್ಣ ಬೆಳ್ಳಗಿರುವುದರಿಂದ ಭಾರತದ ಮಸಾಜ್ ಪಾರ್ಲರ್ ಗಳಲ್ಲಿ ಬೇಡಿಕೆ ಹೆಚ್ಚು" ಎನ್ನುತ್ತಾರೆ ಸೇವ್ ದ ಚಿಲ್ಡ್ರನ್ ಸಂಸ್ಥೆಯ ಪ್ರೋಗ್ರಾಂ ಡೈರೆಕ್ಟರ್ ಜ್ಯೋತಿ ನಾಲೆ.

ಲೈಂಗಿಕ ವೃತ್ತಿಗಾಗಿ ನೇಪಾಳ ಹಾಗೂ ಬಾಂಗ್ಲಾ ದೇಶದ ಮಹಿಳೆಯರನ್ನು ಭಾರತಕ್ಕೆ ಮಾನವ ಸಾಗಣೆ ಮಾಡುವುದು ತುಂಬ ವರ್ಷಗಳಿಂದ ನಡೆದುಬಂದಿದೆ. ಆದರೆ ಭಾರತೀಯರ ಹಾಗೂ ವಿದೇಶಿ ಪ್ರವಾಸಿಗರು ಥಾಯ್ಲೆಂಡ್ ನಂಥ ದೇಶದ ಮಹಿಳೆಯರ ಬಗ್ಗೆ ಹೆಚ್ಚು ಆಸಕ್ತಿ ತೋರುತ್ತಾರೆ ಎಂಬುದು ಪೊಲೀಸರ ಅಭಿಪ್ರಾಯ.

ಮೈಸೂರು: ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದ ಐವರ ಬಂಧನ

ಆ ಮಹಿಳೆಯರು ಅಕ್ಷರಸ್ಥರಲ್ಲ. ಬಡ ಕುಟುಂಬದ ಹಿನ್ನೆಲೆಯವರು. ಇವರ ಆದಾಯದ ಮೇಲೇ ಕುಟುಂಬ ಅವಲಂಬಿತ ಆಗಿರುತ್ತದೆ. ಭಾರತದಲ್ಲಿ ಹೆಚ್ಚಿನ ಹಣ ದುಡಿಯಬಹುದು ಎಂಬ ಆಮಿಷ ತೋರಿಸಿ ಕರೆತರಲಾಗುತ್ತದೆ. ಥಾಯ್ಲೆಂಡ್ ನಲ್ಲಿ ಸರಾಸರಿಯಾಗಿ ಈ ಮಹಿಳೆಯರು ಒಂಬತ್ತು ಅಮೆರಿಕ ಡಾಲರ್ ನಷ್ಟು ಸಂಪಾದಿಸುತ್ತಾರೆ. ಆದರೆ ಭಾರತದಲ್ಲಿ ಅದರ ಎರಡರಷ್ಟು ಸಂಪಾದನೆ ಮಾಡುತ್ತಾರೆ.

ಕಳೆದ ಮೂರ್ನಾಲ್ಕು ತಿಂಗಳಿಂದ ಪುಣೆಯಲ್ಲಿದ್ದ ಮಹಿಳೆಯರ ಬಳಿ ಒಂದು ಲಕ್ಷ ರುಪಾಯಿ ಇತ್ತು ಎಂದು ಅವರನ್ನು ರಕ್ಷಿಸಿದ ಪೊಲೀಸರೊಬ್ಬರು ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Thai embassy officials confirmed more Thai women were being rescued from parlours across the country – including in the capital New Delhi, the tourist fort city of Jaipur, and tech hub Bengaluru.
Please Wait while comments are loading...