ವಿಚಾರಣೆ ವೇಳೆ ಮಸಾಲೆ ದೋಸೆ, ಕರಬೂಜ ಬೇಡಿಕೆಯಿಟ್ಟ ಯಾಸಿನ್

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 15: 2013ರಲ್ಲಿ ದಿಲ್ ಕುಶ್ ನಗರದ ಬ್ಲಾಸ್ಟ್ ಸಂಬಂಧಿಸಿದಂತೆ ಅನೇಕ ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಇಂಡಿಯನ್ ಮುಜಾಯುದ್ದೀನ್ ಮುಖ್ಯಸ್ಥ ಯಾಸಿನ್ ಭಟ್ಕಳ್ ವಿಚಾರಣೆಯ ವೇಳೆ ಜೈಲಿನಲ್ಲಿ ಕರಬೂಜ, ಮಸಾಲೆದೋಸೆ ಬೇಡಿಕೆ ಇಟ್ಟು ತನಿಖೆ ನಡೆಸುವವರನ್ನು ಸತಾಯಿಸಿರುವ ವಿಷಯ ಬಹಿರಂಗವಾಗಿದೆ.

ಅನೇಕ ರಾಷ್ಟ್ರದ್ರೋಹಿ ಚುಟುವಟಿಕೆಯಲ್ಲಿ ಭಾಗಿಯಾಗಿದ್ದ ಯಾಸಿನ್ ಭಟ್ಕಳ್ ಯಾವಾಗಲು ಮಾಹಿತಿಯನ್ನು ಹೊರಹಾಕಲು ಯಾವುದಾದರೊಂದು ಬೇಡಿಕೆಯನ್ನು ಇಡುತ್ತಿದ್ದ ಅವರನ್ನು ವಿಚಾರಣಾ ಸ್ಥಳದಲ್ಲಿದ್ದ ಬೆಂಗಳೂರಿನ ಅಧಿಕಾರಿಯೊಬ್ಬರು ತಿಳಿಸಿದರು.[ಭಟ್ಕಳದ ಯಾಸಿನ್ ಮೋಸ್ಟ್ ವಾಂಟೆಡ್ ಭಯೋತ್ಪಾದಕನಾಗಿ ಬೆಳೆದ ಬಗೆ]

yasin bhatkal

ತನಿಖೆ ವೇಳೆ ಮೊದಲು ಪ್ರಶ್ನೆ ಕೇಳಿದರೆ ಸರಿಯಾಗಿ ಸಹಕರಿಸುತ್ತಿರಲಿಲ್ಲ ಅದರೆ ನಂತರ ಒಂದೊಂದು ಪ್ರಶ್ನೆಗೆ ಒಂದೊಂದು ಬೇಡಿಕೆಗಳನ್ನು ಇಡುತ್ತಿದ್ದ, ಮೊದಲು ಮಸಾಲೆ ದೋಸೆ ಎಂದು ಕೇಳಿದರೆ ಮತ್ತೊಂದು ವೇಳೆ ಕರಬೂಜ ಹಣ್ಣನ್ನು ಮತ್ತೆ ಕೆಲವು ವೇಳೆ ನನಗೆ ನಿಮ್ಮ ಬಳಿ ಮಾತನಾಡಲು ಮೂಡ್ ಇಲ್ಲ ಎಂದು ಹೇಳುತ್ತಿದ್ದ ಎಂದು ಅವರು ತಿಳಿಸಿದರು.[ಹೈದರಾಬಾದ್ ಸ್ಫೋಟ: ಇಂಡಿಯನ್ ಮುಜಾಹಿದ್ದೀನ್ ಮುಖ್ಯಸ್ಥ ಅಪರಾಧಿ]

ಅಲ್ಲದೆ ಯಾಸೀನ್ ಕೇಳಿದ ಬೇಡಿಕೆಗಳನ್ನು ಈಡೇರಿಸಿದ್ದು, ನನಗೆ ಈಗ ನಿದ್ದೆ ಬರುತ್ತಿದೆ ಎಂದು ತನಿಖೆ ವೇಳೆ ವಿಚಾರಣೆ ಮಾಡುವವರಿಗೆ ಸತಾಯಿಸಿದ್ದಾನೆ ಎಂದರು. ಯಾವುದೇ ವಿಚಾರಣೆಯಲ್ಲಿ ಮಾಹಿತಿ ನೀಡುವ ವ್ಯಕ್ತಿ ಖಚಿತ ಮಾಹಿತಿಯನ್ನು ನೀಡುತ್ತಾನೋ ಇಲ್ಲವೋ ಎಂಬುದರ ಪೂರ್ವಾಲೋಚನೆ ತನಿಖಾತಂಡಕ್ಕೆ ಇರುತ್ತದೆ ಆದರೆ ಯಾಸೀನ್ ವಿಚಿತ್ರ ರೀತಿಯಲ್ಲಿ ಬೇಡಿಕೆಯನ್ನು ಇಟ್ಟು ತಂತ್ರಗಾರಿಕೆ ಮಾಡಿ ಅನೇಕ ಸುಳಿವು, ಕೆಲವೊಂದು ವಿಷಯಗಳನ್ನು ತಿಳಿಸಿರುವುದಾಗಿ ಅವರು ಹೇಳಿದರು.

ಕರ್ನಾಟಕದ ಹೈಕೋರ್ಟ್ ಮೇಲೆಯೂ ಬಾಂಬ್ ದಾಳಿ ನಡೆಸುವ ಪ್ಲಾನ್ ಮಾಡಲಾಗಿತ್ತು ಎಂಬ ಮಾಹಿತಿಯನ್ನು ಹೊರಹಾಕಿದ್ದು, ಯಾಸಿನ್ ಅರ್ಧ ಸುಳ್ಳು ಮತ್ತು ಅರ್ಧ ಸತ್ಯ ಹೀಗೆ ಹೇಳಿ ವಿಚಾರಕರನ್ನು ದಿಕ್ಕುತಪ್ಪಿಸುವ ಕೆಲಸವನ್ನು ಮಾಡುತ್ತಿದ್ದಾನೆ ಎಂದರು. ಇದು ಭಯೋತ್ಪಾದಕರು ಮಾಡುವ ಸಾಂಪ್ರದಾಯಿಕ ತಂತ್ರಗಾರಿಕೆಯಾಗಿದ್ದು, ಸಾಮಾನ್ಯ ಸತ್ಯದಲ್ಲಿ ಸುಳ್ಳನ್ನು ಸೇರಿಸಿ ಪೊಲೀಸರಿಗೆ ದಿಕ್ಕು ತಪ್ಪಿಸುವ ಹುನ್ನಾರ ಎಂದು ಅಧಿಕಾರಿ ಬಣ್ಣಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Indian Mujahideen chief Yasin Bhatkal, who was recently convicted in connection with the 2013, Dilsukhnagar blasts in Hyderabad. the investication time he would come up with a demand or the other. First it was a masala dosa and then it would be musk melons.
Please Wait while comments are loading...