ಹುತಾತ್ಮ ಮೇಜರ್ ಅಕ್ಷಯ್ ಕುಟುಂಬ, ಪುಟ್ಟ ಮಗಳು, ಚಾಕಲೇಟ್

Posted By:
Subscribe to Oneindia Kannada

ಆ ಪುಟ್ಟ ಮಗುವಿನ ಕೈಯಲ್ಲಿ ಚಾಕಲೇಟ್. ಉಮ್ಮಳಿಸುವಂಥ ದುಃಖವಿದ್ದರೂ ಮಗಳೆದುರು ಅಳಬಾರದು ಎಂಬಂತೆ ಇದ್ದ ಆ ಮಹಾತಾಯಿ. ಮಗನನ್ನು ಕಳೆದುಕೊಂಡ ನೋವು ಹೆಪ್ಪುಗಟ್ಟಿದ್ದರೂ ತೃಣ ಮಾತ್ರವೂ ತೋರಗೊಡದ ಆ ವ್ಯಕ್ತಿ- ಈ ಎಲ್ಲರ ದುಃಖದ ಬಗ್ಗೆ ಏನು ಹೇಳಲು ಸಾಧ್ಯ?

ಬೆಂಗಳೂರಿನ ಯಲಹಂಕದಲ್ಲಿರುವ ವಾಯು ನೆಲೆಯಲ್ಲಿ ಹುತಾತ್ಮ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅಂತಿಮ ಗೌರವ ಸಲ್ಲಿಸುವ ವೇಳೆ ಕಂಡ ದೃಶ್ಯಗಳು ಎದೆಯೊಳಗೆ ಚೂರಿ ಇರಿದಂತೆ ಅನುಭವ ನೀಡಿದ್ದಂತೂ ಹೌದು. ಶತ್ರುವಿನ ತಲೆಗೆ ಗುರಿಯಿಟ್ಟು ಗುಂಡಿಕ್ಕುವ ಬಂಡೆ ಹೃದಯದ ಸೈನಿಕ ಕೂಡ ಅತ್ಯಂತ ದುಃಖಕ್ಕೆ ಈಡಾಗುವ ಕ್ಷಣ ಯಾವುದು ಎಂಬ ಪ್ರಶ್ನೆ ಆ ಕ್ಷಣಕ್ಕೆ ಮೂಡಿದ್ದು ಹೌದು.[ಮೇಜರ್ ಅಕ್ಷಯ್ ಅಂತ್ಯಕ್ರಿಯೆಗೆ ಸಕಲ ಸಿದ್ಧತೆ]

ಎಂಥ ಭಾರವನ್ನೂ ಹೊರಲು ಮಾನಸಿಕವಾಗಿ ಸಿದ್ಧವಾದ ಜೀವಕ್ಕೆ ಹೆಗಲ ಮೇಲೆ ತನ್ನ ನಾಯಕನೋ ಜತೆಗಾರನದೋ ಶವ ಹೊತ್ತು ಆತನ ಮನೆಗೆ ಹೋಗುವ ದುಃಖಕ್ಕಿಂತ ಹೆಚ್ಚಿನ ನೋವು ಯಾವುದಿದೆ? ಸೇನೆಗೆ ಸೇರುವಾಗಲೇ ಜೀವದ ಬಗ್ಗೆ ಮಮಕಾರ ಕಳೆದುಕೊಂಡಿದ್ದರೂ ಅಂಥ ಸನ್ನಿವೇಶದಲ್ಲಿ ಅಂತಃಕರಣ ಎಲ್ಲವನ್ನೂ ಮರೆಸುವುದಿಲ್ಲವೇ ಎಂಬ ಪ್ರಶ್ನೆ ಬಂದಿದ್ದು ಸುಳ್ಳಲ್ಲ.

ನಗ್ರೋಟಾದಲ್ಲಿ ಹುತಾತ್ಮರಾದ ಬೆಂಗಳೂರಿನ ಮೇಜರ್ ಅಕ್ಷಯ್ ಗಿರೀಶ್ ಕುಮಾರ್ ಅಂತ್ಯಸಂಸ್ಕಾರ ಸೋಮವಾರ ನಡೆಯಿತು. ಆ ಸಂದರ್ಭದಲ್ಲಿ ಅಂತಿಮ ದರ್ಶನ ಪಡೆಯಲು ಬಂದಿದ್ದ ನೂರಾರು ಜನರ ಕಣ್ಣಲ್ಲಿ ಅಕ್ಷಯ್ ರ ಪತ್ನಿ, ಮಗು, ತಂದೆ-ತಾಯಿ ಬಗ್ಗೆ ಹೆಮ್ಮೆ, ಗೌರವ, ಮರುಕ ಒಟ್ಟೊಟ್ಟಿಗೆ ಮೂಡಿದ ಕ್ಷಣವದು.[ನಗ್ರೋಟಾ ಸೇನಾ ನೆಲೆ ಮೇಲೆ ಉಗ್ರರ ದಾಳಿ: 7 ಯೋಧರು ಹುತಾತ್ಮ]

ಪುಟ್ಟ ಕೈಯಲ್ಲಿ ಚಾಕಲೇಟ್

ಪುಟ್ಟ ಕೈಯಲ್ಲಿ ಚಾಕಲೇಟ್

ಹುತಾತ್ಮ ಮೇಜರ್ ಅಕ್ಷಯ್ ಅವರ ಪತ್ನಿ ಸಂಗೀತಾ (ಗುಲಾಬಿ ಚೂಡಿದಾರ್), ತಾಯಿ ಮೇಘನಾ ಮತ್ತು ಮಗಳು ನೈನಾ ಬೆಂಗಳೂರಿನ ಯಲಹಂಕ ವಾಯುನೆಲೆಯಲ್ಲಿ ಗುರುವಾರ ಅಂತಿಮ ಗೌರವ ಸಲ್ಲಿಸುವ ವೇಳೆ ಪಾಲ್ಗೊಂಡಿದ್ದರು.

ಅಂಕಲ್ ನಾ ಬರ್ತೀನಿ

ಅಂಕಲ್ ನಾ ಬರ್ತೀನಿ

ಮೇಜರ್ ಅಕ್ಷಯ್ ಅವರ ಮಗಳು ನೈನಾ ಏರ್ ಫೋರ್ಸ್ ಅಧಿಕಾರಿಯೊಬ್ಬರಿಗೆ ಕೈ ಬೀಸಿ ಟಾಟಾ ಹೇಳಿದ ಕ್ಷಣ.

ಎಲ್ಲರಿಗೂ ನಮಸ್ತೆ

ಎಲ್ಲರಿಗೂ ನಮಸ್ತೆ

ಬೆಂಗಳೂರಿನ ತಮ್ಮ ಮನೆಯಲ್ಲಿ ಮೇಜರ್ ಅಕ್ಷಯ್ ಅಂತಿಮ ಯಾತ್ರೆಗೂ ಮುನ್ನ ಅವರ ತಂದೆ ವಾಯುಪಡೆ ಮಾಜಿ ಪೈಲಟ್ ಗಿರೀಶ್ ಕುಮಾರ್ ಜನರಿಗೆ ವಂದನೆ ಹೇಳಿದರು.

ಮಕ್ಕಳ ಶ್ರದ್ಧಾಂಜಲಿ

ಮಕ್ಕಳ ಶ್ರದ್ಧಾಂಜಲಿ

ಶಾಲಾ ಮಕ್ಕಳು ಹುತಾತ್ಮ ಮೇಜರ್ ಅಕ್ಷಯ್ ರ ಅಂತಿಮ ದರ್ಶನವನ್ನು ಪಡೆದರು.

ನಿಮ್ಮ ಪ್ರೀತ್ಯಾದರಕ್ಕೆ ನಮಸ್ತೆ

ನಿಮ್ಮ ಪ್ರೀತ್ಯಾದರಕ್ಕೆ ನಮಸ್ತೆ

ಮೇಜರ್ ಅಕ್ಷಯ್ ಆವರ ಅಂತಿಮ ದರ್ಶನ ಪಡೆಯಲು ಬಂದಿದ್ದವರಿಗೆ ವಂದನೆ ಸಲ್ಲಿಸಿದ ಗಿರೀಶ್ ಕುಮಾರ್.

ಅಂತಿಮ ಸೆಲ್ಯೂಟ್

ಅಂತಿಮ ಸೆಲ್ಯೂಟ್

ಹುತಾತ್ಮ ಮೇಜರ್ ಅಕ್ಷಯ್ ಗೆ ಎಲ್ಲ ಸರಕಾರಿ ಗೌರವದ ಜತೆಗೆ ಸೇನೆಯಿಂದ ಅಂತಿಮ ಸೆಲ್ಯೂಟ್

ಸ್ಥಳೀಯರ ಶ್ರದ್ಧಾಂಜಲಿ

ಸ್ಥಳೀಯರ ಶ್ರದ್ಧಾಂಜಲಿ

ಅಕ್ಷಯ್ ಅವರ ಬೆಂಗಳೂರಿನಲ್ಲಿರುವ ಅಪಾರ್ಟ್ ಮೆಂಟ್ ಮುಂಭಾಗ ಸ್ಥಳೀಯರು ಶ್ರದ್ಧಾಂಜಲಿ, ಗೌರವ ಸಲ್ಲಿಸಿದ್ದು ಹೀಗೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Major Akshay Girish from Bengaluru martyr in Nagrota Attack in Jammu and Kashmir. Last rituals performed in Bengaluru on Thursday.
Please Wait while comments are loading...