ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೆಆರ್‌ ಮಾರ್ಕೆಟ್ ಮೇಲ್ಸೇತುವೆಯ ಒಂದು ಬದಿಯಲ್ಲಿ ಸಂಚಾರ ನಿಷೇಧ

|
Google Oneindia Kannada News

ಬೆಂಗಳೂರು, ಜನವರಿ 3: ಸಿರ್ಸಿ ಸರ್ಕಲ್ ಫ್ಲೈಓವರ್ ಮೇಲೆ ಗುಂಡಿಗಳು ಇರುವುದರಿಂದ ಮರುಡಾಂಬರೀಕರಣ ಮಾಡಲು ಬಿಬಿಎಂಪಿ ಕಾಮಗಾರಿ ಕೈಗೆತ್ತಿಕೊಂಡಿದೆ ಹೀಗಾಗಿ ಸಿರ್ಸಿ ಸರ್ಕಲ್ ಮೇಲ್ಸೇತುವೆ ಮೇಲೆ ವಾಹನ ನಿರ್ಬಂಧಿಸಲಾಗಿದೆ.

ನಗರದ ಟೌನ್‌ಹಾಲ್ ಕಡೆಯಿಂದ ಮೈಸೂರು ರಸ್ತೆಯ ಕಡೆಗೆ ಬಾಲ ಗಂಗಾಧರನಾಥ ಸ್ವಾಮೀಜಿ ಮೇಲ್ಸೇತುವೆಯಲ್ಲಿ ಗುರುವಾರ ರಾತ್ರಿಯಿಂದ ಡಾಂಬರು ಪದರ ತೆರವುಗೊಳಿಸುವ ಕಾಮಗಾರಿಯನ್ನು ಕೈಗೊಳ್ಳಲು ಬಿಬಿಎಂಪಿ ತೀರ್ಮಾಣಿಸಿದೆ. ಈ ವೇಳೆ ಮೇಲ್ಸೇತುವೆಯ ಒಂದು ಪಾರ್ಶ್ವದಲ್ಲಿ ವಾಹನ ಸಂಚಾರ ನಿಷೇಧಿಸಲಾಗುತ್ತದೆ.

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್‌ಮೇಲೆ ಭಾರಿ ವಾಹನಗಳ ಸಂಚಾರ ನಿಷೇಧ

1.5 ಕಿ.ಮೀ ವರೆಗೆ ಡಾಂಬರು

1.5 ಕಿ.ಮೀ ವರೆಗೆ ಡಾಂಬರು

ಮೇಲ್ಸೇತುವೆಯ ರಾಯನ್ ವೃತ್ತ ದಿಂದ ಮೈಸೂರು ರಸ್ತೆಯ ಕಡೆಗೆ 1.5 ಕಿಮೀ ಡಾಂಬರು ಪದರ ತೆರವುಕಾರ್ಯ ಮುಗಿದಿದೆ. ಗುರುವಾರ ರಾತ್ರಿಯಿಂದ ಶುರುವಾಗುವ ಸಾಧ್ಯತೆಗಳಿವೆ. ಟೌನ್‌ಹಾಲ್‌ ಕಡೆಯಿಂದ ಮಿಲ್ಲಿಂಗ್ ಕೆಲಸ ಆರಂಭವಾದರೆ, ರಾಯನ್ ವೃತ್ತದವರೆಗೆ ಮೇಲ್ಸೇತುವೆ ಬಂದ್ ಆಗಲಿದೆ.

ಒಂದು ಕಡೆ ಮಾತ್ರ ಸಂಚಾರ ನಿಷೇಧ

ಒಂದು ಕಡೆ ಮಾತ್ರ ಸಂಚಾರ ನಿಷೇಧ

ಮೈಸೂರು ರಸ್ತೆ ಕಡೆಯಿದ ಮೆಜೆಸ್ಟಿಕ್ ಮತ್ತು ಟೌನ್‌ಹಾಲ್‌ ಕಡೆಗೆ ಬರುವ ವಾಹನಗಳಿಗೆ ಬೆಳಗ್ಗೆ 6ರಿಂದ ಮಧ್ಯಾಹ್ನದ 3ರವರೆಗೆ ಪ್ರವೇಶ ಕಲ್ಪಿಸಲಾಗುತ್ತದೆ. ಮಧ್ಯಾಹ್ನ 3ರಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಟೌನ್‌ಹಾಲ್ ಕಡೆಯಿಂದ ಮೈಸೂರು ರಸ್ತೆಯತ್ತ ಸಾಗುವ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗುತ್ತದೆ.

ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ ಹೆಬ್ಬಾಳದ ಮೂಲಕವೇ ಕೆಂಪೇಗೌಡ ಏರ್‌ಪೋರ್ಟ್‌ಗೆ ನಮ್ಮ ಮೆಟ್ರೋ

ಕಾಮಗಾರಿ ಬಗ್ಗೆ ಮಾಹಿತಿ

ಕಾಮಗಾರಿ ಬಗ್ಗೆ ಮಾಹಿತಿ

ಮಾರ್ಗ ಬದಲಾವಣೆಯಾದ ಬಳಿಕ ಕೆಆರ್ ಮಾರುಕಟ್ಟೆ ಮೇಲ್ಸೇತುವೆ ದುರಸ್ತಿ ಕಾರ್ಯ ಆರಂಭಿಸಲಾಗುತ್ತದೆ. ಸುಮಾರು 2.65 ಕಿ.ಮೀ ಉದ್ದವಿರುವ ಮೇಲ್ಸೇತುವೆಯ ದುರಸ್ತಿಗೆ 4.30 ಕೋಟಿ ರೂ. ವೆಚ್ಚ ಮಾಡಲಾಗುತ್ತಿದ್ದು, ನಾಗೇಶ್ ಮಾಯಣ್ಣ ಸಾಯಿ ತ್ರಿಷಾ ಇನ್‌ಫ್ರಾ ಎಂಜಿನಿಯರಿಂಗ್ ಪ್ರೈವೇಟ್ ಲಿಮಿಟೆಡ್ ಕಂಪನಿಗೆ ಕಾಮಗಾರಿ ಗುತ್ತಿಗೆ ನೀಡಲಾಗಿದೆ. ಈ ಅವಧಿಯಲ್ಲಿ ಮೇಲುರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣವಾಗಿ ನಿಷೇಧಿಸಲಾಗುತ್ತದೆ. ಪುರಭವನದಿಂದ ಮೈಸೂರು ರಸ್ತೆ ಮತ್ತು ಚಾಮರಾಜಪೇಟೆಯ ಕಡೆಗೆ ಸಾಗುವವರು ಪರ್ಯಾಯ ರಸ್ತೆಗಳಲ್ಲಿ ತೆರಳಬೇಕಾಗುತ್ತದೆ. ಒಂದು ಪದರ ಡಾಂಬರು ಕಿತ್ತು ಹಾಕಿ, 3 ಎಂಎಂ ದಪ್ಪದ ಡಾಂಬರು ಶೀಟ್ ಹೊದಿಸಲಾಗುತ್ತದೆ. ಬಳಿಕ 40 ಎಂಎಂ ದಪ್ಪದ ಬಿಟುಮಿನ್ ಹಾಕಲಾಗುವುದು ಎಂಜಿನಿಯರ್ ಒಬ್ಬರು ಮಾಹಿತಿ ನೀಡಿದ್ದಾರೆ.

ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಹೆಬ್ಬಾಳ ಜಂಕ್ಷನ್‌ನಲ್ಲಿ ಕೆಂಪೇಗೌಡ ಪ್ರತಿಮೆ ಸ್ಥಾಪನೆ

ಯಾವ್ಯಾವ ಭಾಗಕ್ಕೆ ತೊಂದರೆ

ಯಾವ್ಯಾವ ಭಾಗಕ್ಕೆ ತೊಂದರೆ

ಒಂದು ಭಾಗದಲ್ಲಿ ಸಂಚಾರ ನಿಷೇಧಿಸುವುದರಿಂದ ಕೆಆರ್ ಮಾರುಕಟ್ಟೆ, ರಾಯನ್ ವೃತ್ತ, ಚಾಮರಾಜಪೇಟೆ ಸೇರಿ ಪ್ರಮುಖ ರಸ್ತೆಗಳಲ್ಲಿ ತಾತ್ಕಾಲಿಕವಾಗಿ ಸಂಚಾರ ಬದಲಾವಣೆ ಮಾಡಲಾಗುತ್ತದೆ. ಇನ್ನು ಎರಡು ಬದಿಯ ನಾಲ್ಕು ಪಥದ 2.65 ಕಿ.ಮೀಟರ್ ರಸ್ತೆಗೆ ಮರು ಡಾಮಬರು ಮಾಡಲಾಗುತ್ತದೆ.

ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ! ಹೆಬ್ಬಾಳ ಜಂಕ್ಷನ್ ನಲ್ಲಿ ಸದ್ಯದಲ್ಲೇ ಮಿನಿ ಪಾರ್ಕ್ ನಿರ್ಮಾಣ!

English summary
BBMP started repair works in Sirsi circle flyover, so one lane will remain closed.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X