ವಿಧಾನಸಭಾ ಚುನಾವಣೆ: ಮೊದಲ ಬಾರಿಗೆ 'ಮಾರ್ಕ್3' ಮತಯಂತ್ರ ಬಳಕೆ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 16: ಕೇಂದ್ರ ಚುನಾವಣಾ ಆಯೋಗ ಇದೇ ಮೊದಲ ಬಾರಿಗೆ ಮಾರ್ಕ್ 3 ಮಾದರಿಯ ಎಲೆಕ್ಟ್ರಾನಿಕ ಮತಯಂತ್ರವನ್ನು ಕಂಟ್ರೋಲ್ ಯುನಿಟ್ ಹಾಗೂ ವಿವಿಪ್ಯಾಟ್ ಸಮೇತ ದೇಶದಲ್ಲೇ ಮೊದಲ ಬಾರಿಗೆ ಬಳಕೆ ಮಾಡುತ್ತಿದೆ.

ಗುಜರಾತ್‌ನಿಂದ ಬೆಂಗಳೂರಿಗೆ ಬಂದಿಳಿದ 3860 ಮತಯಂತ್ರ

ಆ ಪೈಕಿ ಬೆಂಗಳೂರಿನ 3250 ಮತ ಕೇಂದ್ರಗಳಲ್ಲಿ ಅಳವಡಿಸಲಾಗುತ್ತಿದೆ. ಸೋಮವಾರ ಜಿಲ್ಲಾ ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ಈ ಮೊದಲು ಮಾರ್ಕ್ 1 ಹಾಗೂ ಮಾರ್ಕ್ 2 ಮತಯಂತ್ರಗಳನ್ನು ಮಾತ್ರ ಬಳಕೆ ಮಾಡಲಾಗುತ್ತಿತ್ತು.

ಇದೀಗ ಮಾರ್ಕ್ 3 ಮಾದರಿಯ ಮತಯಂತ್ರಗಳನ್ನು ವಿವಿಪ್ಯಾಟ್ ಹಾಗೂ ಕಂಟ್ರೋಲ್ ಯುನಿಟ್ ಸಹಿತ ಬಳಸುತ್ತಿದ್ದು, ಇಂತಹ ಯಂತ್ರಗಳಲ್ಲಿ 324 ಅಭ್ಯರ್ಥಿಗಳ ಹೆಸರುಗಳನ್ನು ಅಳವಡಿಸಬಹುದಾಗಿದೆ ಎಂದು ತಿಳಿಸಿದರು.

ಅಭ್ಯರ್ಥಿಗಳ ಪಟ್ಟಿ : ಕಾಂಗ್ರೆಸ್ | ಬಿಜೆಪಿ | ಜೆಡಿಎಸ್

ಬೆಂಗಳೂರಿನಲ್ಲಿ 2,26,364 ಮತದಾರರನ್ನು ಹೊಸದಾಗಿ ಸೇರ್ಪಡೆ ಮಾಡಲಾಗಿದ್ದು, ಒಟ್ಟು 88 ಲಕ್ಷ ಮತದಾರರು ಮತ ಚಲಾಯಿಸಲಿದ್ದಾರೆ. ಈಗಾಗಲೇ ಎಲ್ಲಾ ರಾಜಕೀಯ ಪಕ್ಷಗಳ ಜತೆ ಸಭೆ ನಡೆಸಲಾಗಿದ್ದು, ಅವರ ಕುಂದು ಕೊರತೆಗಳು ಹಾಗೂ ದೂರುಗಳನ್ನು ಆಲಿಸಲಾಗಿದೆ.

Mark 3 model will install in Bangalore polling centers

ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದ್ದು, ಬೆಳಗ್ಗೆ 11 ಗಂಟೆಯಿಂದ ನಾಮಪತ್ರ ಸ್ವೀಕಾರ ಶುರುವಾಗಲಿದೆ ಎಂದು ತಿಳಿಸಿದರು. ರಾಜಕೀಯ ಪಕ್ಷಗಳು ಮತದಾನದ ಸಂದರ್ಭದಲ್ಲಿ ಯಾವುದೇ ಪಕ್ಷದ ಚಿಹ್ನೆ ಅಥವಾ ಅಭ್ಯರ್ಥಿಯ ಹೆಸರಿಲ್ಲದ ಓಟರ್ ಸ್ಲಿಪ್ ಗಳನ್ನು ಕೊಡಬಹುದಾಗಿದೆ ಅಲ್ಲದೆ ಯಾವುದೇ ಪಕ್ಷದ ಗುರುತು ಅಥವಾ ಅಭ್ಯರ್ಥಿಗಳ ಹೆಸರಿರುವ ಸ್ಲಿಪ್ ಗಳನ್ನು ನೀಡಿದರೆ ಚುನಾವಣಾ ಮಾದರಿ ಸಂಹಿತೆ ಉಲ್ಲಂಘನೆಯಾಗಲಿದೆ ಎಂದು ಸ್ಪಷ್ಟಪಡಿಸಿದರು.

ಹತ್ತು ಸಾವಿರ ಡೆಪಾಸಿಟ್ ಇಡಬೇಕು. ಎಸ್.ಸಿ, ಎಸ್.ಟಿ ಅಭ್ಯರ್ಥಿಗಳಿಗೆ ಐದು ಸಾವಿರ. ಸಾಮಾನ್ಯ ವಾರ್ಡಲ್ಲಿ ನಿಂತರೆ ಹತ್ತು ಸಾವಿರ ಕಟ್ಟಬೇಕು. ಎರಡು ಒರ್ಜಿನಲ್ ಸಹಿ ಇರಬೇಕು. ಸಾರ್ವಜನಿಕ ರಜೆ ದಿನಗಳ ಸಂದರ್ಭದಲ್ಲಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವಂತಿಲ್ಲ, ಬೆಳಗ್ಗೆ 11 ರಿಂದ ಮಧ್ಯಾಹ್ನ 3.30ರ ವರೆಗೆ ನಾಮಪತ್ರ ಸಲ್ಲಿಸಬಹುದಾಗಿದ್ದ ನಂತರದಲ್ಲಿ ಸ್ವೀಕರಿಸಲಾಗುವುದಿಲ್ಲ.

ಸಣ್ಣ ಪುಟ್ಟ ತಪ್ಪುಗಳಾಗಿದ್ದರೆ ನಾಮಪತ್ರವನ್ನೇ ಸ್ವೀಕರಿಸೋದಿಲ್ಲ. ಈವರೆಗೂ ಅಬಕಾರಿ ಇಲಾಖೆಯಿಂದ 903 ತಪಾಸಣೆ ಮಾಡಲಾಗಿದೆ. 622 ಪ್ರಕರಣ ದಾಖಲಿಸಲಾಗಿದ್ದು, 238ಜನರನ್ನ ವಶಕ್ಕೆ ಪಡೆಯಲಾಗಿದೆ. 7,630 ಲೀಟರ್ ಲಿಕ್ಕರ್. 3687 ಲೀಟರ್ ಬಿಯರ್. 179 ಲೀಟರ್ ವೈನ್ ಹಾಗೂ 83,990 ಹಣ ವಶಕ್ಕೆ ಪಡೆಯಲಾಗಿದೆ. ಒಟ್ಟು 62.30ಲಕ್ಷ ಅಂತ ಅಂದಾಜಿಸಲಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mark three model of electronic voting machines will be installed in 3,250 polling centers in Bangalore which were enabled with adoption of more than three hundred candidates names in a single machine. This is the first kind of this machine using in the country which was included control unit and vv pat also.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ