ಉಪನಗರ ರೈಲು: ಎಲಿವೇಟೆಡ್ ಮಾರ್ಗಕ್ಕೆ ಹಲವು ಅಡ್ಡಿ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 12 : ಉಪನಗರ ರೈಲು ಯೋಜನೆಯಲ್ಲಿ ನಿರ್ಮಾಣವಾಗಲಿರುವ 72 ಕಿ.ಮೀ ಉದ್ದದ ಎತ್ತರಿಸಿದ ಮಾರ್ಗದ ನಿರ್ಮಾಣಕ್ಕೆ ಮೆಟ್ರೋ ಮೇಲು ರಸ್ತೆಗಳು ಅಡ್ಡವಾಗಿದ್ದು, ಕೆಲವೆಡೆ ಅತಿ ಎತ್ತರದಲ್ಲಿ ಮಾರ್ಗ ನಿರ್ಮಿಸುವ ಅನಿವಾರ್ಯತೆ ಎದುರಾಗಿದೆ.ನಾಯಂಡಹಳ್ಳಿ ಬಳಿ ಮೆಟ್ರೋ ಹಾಗೂ ಮೇಲು ರಸ್ತೆಗಳಿವೆ.

ಇಲ್ಲಿ 42 ಮೀ ಎತ್ತರದಲ್ಲಿ ಎಲಿವೇಟೆಡ್ ಮಾರ್ಗ ನಿರ್ಮಿಸಲು ತೀರ್ಮಾನಿಸಲಾಗಿದೆ. ಹಾಗೆಯೇ ಮಲ್ಲೇಶ್ವರದ ಮಂತ್ರಿ ಮಾಲ್ ಬಳಿ ಮೆಟ್ರೋ ಮಾರ್ಗವಿರುವುದರಿಂದ 36 ಮೀ ಎತ್ತರದಲ್ಲಿ ಎಲಿವೇಟೆಡ್ ಮರ್ಗ ನಿರ್ಮಿಸಬೇಕಾಗಿದೆ. ಈ ಬಗ್ಗೆ ಕಾರ್ಯಸಾಧ್ಯತಾ ವರದಿಯಲ್ಲಿ ತಿಳಿಸಲಾಗಿದೆ.

ಮೂರು ವರ್ಷಗಳಲ್ಲಿ ಸಬ್ ಅರ್ಬನ್ ರೈಲು ಓಡಲಿದೆ!

12 ಸಾವಿರ ಕೋಟಿ ರೂ. ವೆಚ್ಚದಲ್ಲಿ142 ಕಿ.ಮೀ ಉದ್ದ ಉಪನಗರ ರೈಲು ಮರ್ಗಾ ನಿರ್ಮಿಸಲಾಗುವುದು. ಭೂಸ್ವಾಧೀನ ಸಮಸ್ಯೆ ಎದುರಾಗಿರುವುದರಿಂದ ಅರ್ಧದಷ್ಟು ಮಾರ್ಗವನ್ನು ಎತ್ತರದಲ್ಲಿ ನಿರ್ಮಿಸಲಾಗುವುದು. ಆದರೆ ಇಲ್ಲಿಯೂ ಮೆಟ್ರೊ ಹಾಗೂ ಮೇಲುರಸ್ತೆಗಳು ಅಡ್ಡಿಯಾಗುತ್ತಿವೆ. ಅಂತಹ ಸನ್ನಿವೇಶದಲ್ಲಿ ಅತಿ ಎತ್ತರದಲ್ಲಿ ರೈಲು ಮಾರ್ಗ ನಿರ್ಮಿಸಲಾಗುವುದು. ಎತ್ತರದ ಮಾರ್ಗ ನಿರ್ಮಾಣಕ್ಕೆ ಹೆಚ್ಚು ಕಾಲಾವಕಾಶ ಬೇಕಾಗಬಹುದು ಎಂದು ನೈಋತ್ಯ ರೈಲ್ವೆ ವ್ಯವಸ್ಥಾಪಕ ಆರ್.ಎಸ್. ಸಕ್ಸೇನಾ ತಿಳಿಸಿದ್ದಾರೆ.

Many obstacles for Suburban railway elevated lanes

ವಿಸ್ತೃತ ಯೋಜನಾ ವರದಿ ರೂಪಿಸಲು ಸಾಮಾನ್ಯವಾಗಿ 9 ರಿಂದ 10 ತಿಂಗಳು ಬೇಕಾಗುತ್ತದೆ. ಯೋಜನೆ ಬೇಗನೆ ಅನುಷ್ಠಾನವಾಗಬೇಕಾಗಿರುವುದರಿಂದ 3 ರಿಂದ 4 ತಿಂಗಳಲ್ಲಿ ಡಿಪಿಆರ್ ರೂಪಿಸಲು ಸೂಚನೆ ನೀಡಲಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Suburban railway project getting many Obstacles in the city due to Metro lane and Flyovers. So railway department planning for elevated lanes for this and they are expecting DPR within 4 months.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ