ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೇ 27ಕ್ಕೆ ಮಾವು ಅಭಿವೃದ್ಧಿ ನಿಗಮದಿಂದ 'ಮ್ಯಾಂಗೊ ಪಿಕ್ಕಿಂಗ್ ಟೂರಿಸಂ'

By Nayana
|
Google Oneindia Kannada News

ಬೆಂಗಳೂರು, ಮೇ 21: ಮಾವು ತೋಟಗಳಿಗೆ ಭೇಟಿ ನೀಡಿ ರೈತರಿಂದ ನೇರವಾಗಿ ಹಣ್ಣುಗಳನ್ನು ಖರೀದಿಸುವ ಅವಕಾಶವನ್ನು ಮಾವು ಅಭಿವೃದ್ಧಿ ನಿಗಮ ಕಲ್ಪಿಸಿದೆ. ಈ ವರ್ಷದ ಮ್ಯಾಂಗೊ ಪಿಕ್ಕಿಂಗ್ ಪ್ರವಾಸ ಮೇ 27ರಂದು ನಡೆಯಲಿದೆ.

ಮಾವು ಬೆಳೆಗಾರರಿಗೆ ಮಾರುಕಟ್ಟೆ ಸೌಲಭ್ಯ ಕಲ್ಪಿಸುವ ದೃಷ್ಟಿಯಿಂದ ಈ ಪ್ರವಾಸವನ್ನು ನಿಗಮ ಆಯೋಜಿಸುತ್ತಿದೆ. ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಂಜು ಮತ್ತು ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕಿನ ಕೆ. ಮುನಿರಾಜು ಅವರ ಮಾವು ತೋಟಕ್ಕೆ ಈ ಬಾರಿಯ ಪ್ರವಾಸ ನಿಗದಿಯಾಗಿದೆ.

ಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳಲಾಲ್‌ಬಾಗ್‌ನಲ್ಲಿ ಮೇ 25ರಿಂದ ಮಾವು-ಹಲಸು ಮೇಳ

4 ಬಸ್‌ಗಳಲ್ಲಿ 220 ಗ್ರಾಹಕರನ್ನು ಕರೆದೊಯ್ಯಲು ನಿರ್ಧರಿಸಲಾಗಿದೆ. ಮೇ 21 ರಿಂದ ವೆಬ್‌ಸೈಟ್‌ ಮೂಲಕ ನೋಂದಣಿ ಪ್ರಕ್ರಿಯೆ ಪ್ರಾರಂಭವಾಗಿದ್ದು, ಆಸಕ್ತರು ಶೀಘ್ರ ಗ್ರಾಹಕರು ವಂತಿಗೆ ಪಾವತಿಸಿ ನೋಂದಣಿ ಮಾಡಿಕೊಳ್ಳಬೇಕು ಎಂದು ನಿಗಮದ ವ್ಯವಸ್ಥಾಪಕ ನಿರ್ದೇಶಕ ಡಾ. ಸಿ.ಜೆ. ನಾಗರಾಜು ತಿಳಿಸಿದ್ದಾರೆ.

Mango picking tourism on May 27

ಮೇ 27ರಂದು ಬೆಳಗ್ಗೆ 8 ಗಂಟೆಗೆ ಕಬ್ಬನ್ ಪಾರ್ಕ್ ಆವರಣದಿಂದ ಬಸ್ ಹೊರಡಲಿದ್ದು, ಮೊದಲು ನೋಂದಣಿ ಮಾಡಿಸಿಕೊಂಡವರಿಗೆ ಆದ್ಯತೆ ಎಂದು ಆಯೋಜಕರು ತಿಳಿಸಿದ್ದಾರೆ. ವಿವರಗಳನ್ನು ಇ ಮೇಲ್ ಮೂಲಕ ನಿಗಮಕ್ಕೆ ಕಳುಹಿಸಬೇಕು. ವೆಬ್‌ಸೈಟ್‌: www.ksmdmcl.org, ಹಾಗೂ ಇ-ಮೇಲ್: [email protected] ಸಂಪರ್ಕಿಸಬಹುದು.

English summary
Karnataka Mango Development Corporation is organizing a trip for 220 costumers under Mango Picking Tourism as costumers can purchase mangoes direct in farms. Interested costumers can register for entry through online, corporation said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X