ವಿವಿಧ ಬಗೆಯ ಮಾವು, ಹಲಸು ಸವಿಯಲು ಲಾಲ್ ಬಾಗ್‌ಗೆ ಬನ್ನಿ

Posted By:
Subscribe to Oneindia Kannada

ಬೆಂಗಳೂರು, ಮೇ 31 : ವಿವಿಧ ಬಗೆಯ ಮಾವು ಮತ್ತು ಹಲಸಿನ ಹಣ್ಣಿನ ರುಚಿ ನೋಡಲು ಆಸಕ್ತಿ ಇದ್ದವರು ಲಾಲ್ ಬಾಗ್‌ಗೆ ಬರಬಹುದು. ಒಂದು ತಿಂಗಳ ಕಾಲ ನಡೆಯುವ ಮಾವು ಮತ್ತು ಹಲಸಿನ ಮೇಳಕ್ಕೆ ಮಂಗಳವಾರ ಚಾಲನೆ ಸಿಕ್ಕಿದೆ.

ತೋಟಗಾರಿಕಾ ಇಲಾಖೆ, ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಆಯೋಜಿಸಿರುವ ಮಾವು ಮತ್ತು ಹಲಸು ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಗ್ಗೆ ಉದ್ಘಾಟಿಸಿದರು. ಮೇ 31 ರಿಂದ ಜೂನ್ 29ರ ತನಕ ಲಾಲ್ ಬಾಗ್‌ನಲ್ಲಿ ಮಾವು-ಹಲಸು ಮೇಳ ನಡೆಯಲಿದೆ. [ಅಳಿವಿನಂಚಿನತ್ತ ಮಲೆನಾಡಿನ ಕಾಡುಮಾವು]

mango

ಮೇಳದಲ್ಲಿ ಒಟ್ಟು 80 ತಳಿಯ ಮಾವಿನ ಹಣ್ಣುಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ. 20 ತಳಿಗಳ ಮಾವಿನ ಹಣ್ಣಿನ ಮಾರಾಟ ನಡೆಯುತ್ತಿದೆ. 85 ಮಳಿಗೆಗಳನ್ನು ತೆರೆಯಲಾಗಿದ್ದು, ವ್ಯಾಪಾರಿಗಳಿಗೆ ಉಚಿತವಾಗಿ ಅವುಗಳನ್ನು ನೀಡಲಾಗಿದೆ. [ಕರ್ನಾಟಕದ ಮಾವು ನೇರ ರಫ್ತಿಗಾಗಿ ಕೇಂದ್ರಕ್ಕೆ ಮನವಿ]

'ರಾಜ್ಯದ ಮಾವಿನ ಹಣ್ಣುಗಳನ್ನು ವಿದೇಶಗಳಿಗೆ ರಫ್ತು ಮಾಡಿ, ಬೆಳೆಗಾರರಿಗೆ ಉತ್ತೇಜನ ನೀಡಲು ಚಿಂತಾಮಣಿಯ ಮಾಡಿಕೆರೆ ಎಂಬಲ್ಲಿ ಬಯೋಪಾರ್ಕ್ ನಿರ್ಮಾಣ ಕಾರ್ಯ ಆರಂಭಗೊಂಡಿದೆ' ಎಂದು ಮಾವು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಎಂ.ಕಮಲಾಕ್ಷಿ ರಾಜನ್ ಹೇಳಿದರು.

'ಲಾಲಾ ಬಾಗ್‌ನಲ್ಲಿ ಒಂದು ತಿಂಗಳ ಕಾಲ ಮಾವು ಮತ್ತು ಹಲಸು ಮೇಳ ನಡೆಯಲಿದೆ. ಒಟ್ಟು 1,200 ರಿಂದ 1,500 ಟನ್ ಮಾವು ಮಾರಾಟದ ಗುರಿ ಹೊಂದಲಾಗಿದೆ. ಈ ಮೇಳದಿಂದ ಸುಮಾರು 10 ಕೋಟಿ ಆದಾಯ ಬರುವ ನಿರೀಕ್ಷೆ ಇದೆ' ಎಂದು ರಾಜನ್ ತಿಳಿಸಿದರು.

-
-
-
-

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Month long mango, jackfruit mela organized by The horticulture department kick-started on May 31, 2016 at Lalbagh.
Please Wait while comments are loading...