ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರಲ್ಲಿ ಮಹಿಳೆಯರ ರಕ್ಷಣೆಗೆ ಮನೇಕಾ ಗಾಂಧಿ ಒತ್ತಾಯ

By Nayana
|
Google Oneindia Kannada News

ಬೆಂಗಳೂರು, ಜು.13: ಬೆಂಗಳೂರಿನ ಎಚ್‌ಆರ್‌ ಲೇಔಟ್‌ನಲ್ಲಿ ಇತ್ತೀಚೆಗೆ ಮಹಿಳೆಯೊಬ್ಬರ ಜತೆ ಊಬರ್‌ ಕ್ಯಾಬ್‌ ಚಾಲಕ ಅನುಚಿತವಾಗಿ ವರ್ತಿಸಿರುವ ಘಟನೆ ಕುರಿತು ಕೇಂದ್ರ ಸಚಿವೆ ಮನೇಕಾ ಗಾಂಧಿ ಕಳವಳ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದ್ದಾರೆ.

ಈ ಕುರಿತು ಟ್ವೀಟ್‌ ಮಾಡಿರುವ ಅವರು ಕರ್ನಾಟಕ ಸರ್ಕಾರ ಮಹಿಳಾ ಸುರಕ್ಷತೆಯನ್ನು ಬೆಂಗಳೂರಿನಲ್ಲಿ ಕಡೆಗಣಿಸುತ್ತಿದೆ, ಸಿಎಂ ಕುಮಾರಸ್ವಾಮಿ ಅವರು ಕೂಡಲೇ ಈ ಕುರಿತು ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ಓಮದು ತಿಂಗಳಲ್ಲಿ ಇಂತಹ ಮೂರು ಪ್ರಕರಣಗಳು ನಡೆದಿವೆ.

ಬೆಂಗಳೂರು ನಗರ ಪೊಲೀಸ್‌ ಆಯುಕ್ತರು ಓಲಾ ಹಾಗೂ ಊಬರ್‌ ನಂತಹ ಕ್ಯಾಬ್‌ ಸೇವೆಗಳ ಮೇಲೆ ಇಂಥಹ ಘಟನೆಗಳು ನಡೆದರೆ ಅಪರಾಧಿಕ ಉತ್ತರದಾಯಿತ್ವ ಹೊರಿಸಬೇಕು ಎಂದು ಸೂಚಿಸಿದ್ದಾರೆ.

ನಿಲ್ಲದ ಟ್ಯಾಕ್ಸಿ ಚಾಲಕರ ಆಟಾಟೋಪ: ಮಹಿಳಾ ಟಿಕ್ಕಿ ಮೇಲೆ ದೌರ್ಜನ್ಯ ನಿಲ್ಲದ ಟ್ಯಾಕ್ಸಿ ಚಾಲಕರ ಆಟಾಟೋಪ: ಮಹಿಳಾ ಟಿಕ್ಕಿ ಮೇಲೆ ದೌರ್ಜನ್ಯ

ಘಟನೆ ಏನು?: ಮಹಿಳಾ ಟೆಕ್ಕಿಯ ಜೊತೆಗೆ ಊಬರ್‌ ಚಾಲಕ ಅನುಚಿತವಾಗಿ ವರ್ತಿಸಿದ ಘಟನೆ ಬೆಂಗಳೂರಿನ ಎಚ್‌ಎಸ್‌ಆರ್‌ ಲೇಔಟ್‌ ಬಳಿ ನಡೆದಿದೆ. ಮಹಿಳೆಯು ಬೆಳ್ಳಂದೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ, ಕಚೇರಿಗೆ ತೆರಳಲು ಊಬರ್‌ ಬುಕ್‌ ಮಾಡಿದ್ದಾರೆ.

Maneka Gandhi seeks women safety in Bengaluru

ಎಚ್‌ಆರ್‌ಲೇಟ್‌ನಿಂದ ಕಂಪನಿಗೆ ಹೋಗುವ ವೇಳೆ ಚಾಲಕ ಮಾರ್ಗ ಬದಲಾಯಿಸಿದ್ದಾನೆ, ಯಾಕೆ ಮಾರ್ಗ ಬದಲಾಯಿಸಿದ್ದು ಎಂದು ಕೇಳಿದಾಕ್ಷಣ ಆಕೆಯ ಜತೆಗೆ ಅನುಚಿತವಾಗಿ ವರ್ತಿಸಿದ್ದಾನೆ.ಈಗಲೇ ಟ್ರಿಪ್‌ ಕ್ಯಾನ್ಸಲ್‌ ಮಾಡುತ್ತೇನೆ, ನೀವು ಏನು ಬೇಕಾದರೂ ಮಾಡಿಕೊಳ್ಳಿ ಎಂದು ಚಾಲಕ ಹೇಳಿದ್ದಾನೆ, ಅಷ್ಟೇ ಅಲ್ಲದೆ ಅವಾಚ್ಯ ಶಬ್ದಗಳಿಂದ ಆಕೆಯನ್ನು ನಿಂತಿದಿಸಿದ್ದಾನೆ, ಟೆಕ್ಕಿಯನ್ನು ಮಾರ್ಗ ಮಧ್ಯೆಯೇ ಬಿಟ್ಟು ಹೋಗಿದ್ದಾನೆ.

ಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕಯುವತಿಗೆ ಚಪ್ಪಲಿಯಿಂದ ಹೊಡೆಯಲು ಮುಂದಾದ ಓಲಾ ಚಾಲಕ

ಮಹಿಳಾ ಟೆಕ್ಕಿ ಕ್ಯಾಬ್‌ ಕೆಎ 42, ಎ 4692 ಇಟಿಯೋಸ್‌ನಲ್ಲಿ ಕಂಪನಿಗೆ ತೆರಳುತ್ತಿದ್ದರು. ಟೆಕ್ಕಿ ಟ್ವಿಟ್ಟರ್‌ ಮೂಲಕ ನಗರ ಪೊಲೀಸ್‌ ಆಯುಕ್ತರಿಗೆ ದೂರು ನೀಡಿದ್ದಾರೆ. ಈ ಹಿಂದೆ ಜೀವನ್‌ ಭೀಮಾ ನಗರ, ಚಿಕ್ಕಜಾಲ, ಏರ್‌ಪೋರ್ಟ್‌ ರಸ್ತೆಯಲ್ಲಿ ಇಂಥದ್ದೇ ಪ್ರಕರಣಗಳು ನಡೆದಿತ್ತು.

English summary
Union minister Maneka Gandhi has sought women safety measures in Bengaluru after molestation of woman in uber taxi recently. She was tweeted CM Karnataka and COP Bengaluru yesterday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X