'ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ದೂರು ಸಮಿತಿ ಕಡ್ಡಾಯ'

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10: ಕೆಲಸ ಮಾಡುವ ಸ್ಥಳಗಳಲ್ಲಿ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳ ತಡೆಯಲು ಎಲ್ಲ ಸರಕಾರಿ ಕಚೇರಿಗಳಲ್ಲಿ, ಸಂಸ್ಥೆಗಳಲ್ಲಿ ದೂರು ಸಮಿತಿ ಕಡ್ಡಾಯವಾಗಿ ಕೆಲಸ ನಿರ್ವಹಿಸಬೇಕು ಎಂದು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ತಿಳಿಸಿದರು.

ಯುವತಿಗೆ ಲೈಂಗಿಕ ಕಿರುಕುಳ, ಬೆಂಗಳೂರಿನ ಖಾಸಗಿ ಕಂಪನಿ ಸಿಇಒ ಬಂಧನ

ತಮ್ಮ ಕಚೇರಿಯಲ್ಲಿ ಶುಕ್ರವಾರ ಸ್ಥಾಪಿಸಲಾದ ರಾಜ್ಯ ಮಟ್ಟದ ಸಕ್ಷಮ ಪ್ರಾಧಿಕಾರದ ಸಮಿತಿ ಸಭೆಯಲ್ಲಿ ಮಾತನಾಡಿ, ಮಹಿಳೆಯರು ಅದರಲ್ಲೂ ಕೆಲಸ ನಿರ್ವಹಿಸುವ ಮಹಿಳೆಯರಿಗೆ ಭದ್ರತೆ ಒದಗಿಸಬೇಕು. ಅವರು ಉದ್ಯೋಗದಲ್ಲ್ಲಿದ್ದಾಗ ಯಾವುದೇ ಮಾನಸಿಕ, ದೈಹಿಕ ಕಿರುಕುಳ ದೌರ್ಜನ್ಯ ಎಸಗಿರುವುದು ಕಂಡುಬಂದಲ್ಲಿ ಅವರು ಸಮಿತಿಗೆ ದೂರು ನೀಡಬಹುದು ಎಂದರು.

Mandatory to set up committee in all company and firms against sexual harassment

ಎಲ್ಲ ಸರಕಾರಿ ಕಚೇರಿ, ಐ.ಟಿ. ಸಂಸ್ಥೆಗಳು, ಸಂಘ- ಸಂಸ್ಥೆಗಳಲ್ಲಿ ಕೆಲಸ ನಿರ್ವಹಿಸುವ ಮಹಿಳೆಯರು ತಮಗಾದ ಕಿರುಕುಳದ ಬಗ್ಗೆ ದೂರು ಪ್ರಾಧಿಕಾರಕ್ಕೆ ದೂರನ್ನು ಸಲ್ಲಿಸಬಹುದು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ವತಿಯಿಂದ ಸಾಮಾಜಿಕ ಜಾಲತಾಣ, ಇಲಾಖೆಯ ವೆಬ್ ಸೈಟ್, ಮುಖ್ಯಮಂತ್ರಿಗಳ ಕಚೇರಿ ಅಪ್ಲಿಕೇಷನ್ ಗಳಲ್ಲಿ ವ್ಯಾಪಕ ಪ್ರಚಾರ ನೀಡಬೇಕು ಎಂದು ಹೇಳಿದರು.

ದಿನಪತ್ರಿಕೆ, ಟಿ.ವಿ. ಮಾಧ್ಯಮದಲ್ಲೂ ಈ ಕುರಿತು ಅರಿವು ಮೂಡಿಸಬೇಕು. ದೂರು ಪ್ರಾಧಿಕಾರದ ಕುರಿತು ನಾಮಫಲಕದಲ್ಲಿ ಎಲ್ಲ ಕಚೇರಿಗಳಲ್ಲಿ ಹಾಕುವ ಮೂಲಕ ಮಹಿಳೆಯರಲ್ಲಿ ಧೈರ್ಯ, ಆತ್ಮವಿಶ್ವಾಸ ಮೂಡಿಸಬಹುದು. ಎಲ್ಲಕ್ಕಿಂತಲೂ ಮುಖ್ಯವಾಗಿ ಮಹಿಳೆಯರ ಮೇಲಿನ ದೌರ್ಜನ್ಯ ನಡೆಯದಂತೆ ತಡೆಯುವುದು ಎಲ್ಲರ ಹೊಣೆ ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳಾದ ಉಮಾ ಮಹದೇವನ್, ಸರಕಾರದ 72 ಇಲಾಖೆಗಳ ಪೈಕಿ 34ರಲ್ಲಿ ಮಹಿಳೆಯರ ಮೇಲಿನ ಲೈಂಗಿಕ ಕಿರುಕುಳ ತಡೆಯಲು ಸಮಿತಿಗಳನ್ನು ರಚಿಸಲಾಗಿದೆ. 30 ಜಿಲ್ಲೆಗಳಲ್ಲೂ ಸ್ಥಳೀಯ ಮಹಿಳಾ ದೂರು ಸಮಿತಿ ರಚನೆಯಾಗಿದೆ ಎಂದರು.

73 ಐ.ಟಿ. ಕಂಪೆನಿಗಳಲ್ಲಿ ಮಹಿಳಾ ದೂರು ಸಮಿತಿ ರಚಿಸಲಾಗಿದೆ. ಈ ಕುರಿತು ಅರಿವು ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಸಮಿತಿಯು ತರಬೇತಿ ಕಾರ್ಯಾಗಾರವನ್ನು ಸಹ ಮುಂಬರುವ ದಿನಗಳಲ್ಲಿ ಹಮ್ಮಿಕೊಳ್ಳುತ್ತದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳು, ಪೋಸ್ಟರ್ ಇತ್ಯಾದಿಗಳ ಮೂಲಕ ಮಹಿಳೆಯರಿಗೆ ಈ ಕುರಿತು ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
It is mandatory to set up committee in all company and firms against sexual harassment, said by Karnataka government additional secretary Ratnaprabha in Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ