ಯುವತಿ ಜತೆ ಚಕ್ಕಂದ ಆಡಲು ಹೋಗಿ, ಆಸ್ಪತ್ರೆ ಸೇರಿದ 'ರೋಮಿಯೋ'

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10: ತನ್ನ ಕಚೇರಿಯ ಸಹೋದ್ಯೋಗಿ ಮಹಿಳೆಯೊಬ್ಬರ ಅಪಾರ್ಟ್ ಮೆಂಟ್ ನೊಳಕ್ಕೆ ನುಗ್ಗಿ ಆಕೆಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದ ಯುವಕನೊಬ್ಬ ಸುತ್ತಲೂ ಜನ ಸೇರಿದಾಗ ಅಲ್ಲಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಅಪಾರ್ಟ್ ಮೆಂಟ್ ನ 4ನೇ ಮಹಡಿಯಿಂದ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾನೆ. ಪ್ರಕರಣ ನಡೆದ ಪ್ರಾಂತ್ಯ, ದೌರ್ಜನ್ಯಕ್ಕೊಳಗಾದ ಯುವತಿಯ ವಿವರ ದೊರಕಿಲ್ಲ.

75ರ ಹರೆಯ 'ಕಾಮ'ಪೂಜಾರಿ ಬಂಧನ

ವರದಿಗಳ ಪ್ರಕಾರ, ಆ ಯುವಕನ ಹೆಸರು ಅಭಿಷೇಕ್. ವಯಸ್ಸು 27. ಖಾಸಗಿ ಬ್ಯಾಂಕ್ ಒಂದರಲ್ಲಿ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಒಂದು ತಿಂಗಳ ಹಿಂದಷ್ಟೇ ಅದೇ ಬ್ಯಾಂಕಿಗೆ ನೇಮಕಗೊಂಡಿದ್ದ ಮಹಿಳಾ ಸಹೋದ್ಯೋಗಿಯೊಬ್ಬರ ಪರಿಚಯ ಮಾಡಿಕೊಂಡಿದ್ದ ಆತ ಕಚೇರಿಯಲ್ಲೇ ಆಕೆಯ ಬಳಿ ವಿಚಿತ್ರವಾಗಿ ವರ್ತಿಸಲು ಆರಂಭಿಸಿದ್ದ.

Man who made illegal entry into woman's house, fell from 4th floor in Bengaluru

ಪರಿಚಯವಾದಾಗ ಆಕೆಯಿಂದ ಪಡೆದಿದ್ದ ಮೊಬೈಲ್ ಸಂಖ್ಯೆಯನ್ನು ಇಟ್ಟುಕೊಂಡು, ಆ ಸಂಖ್ಯೆಗೆ ಸುಮ್ಮಸುಮ್ಮನೇ ಫೋನಾಯಿಸುವುದು, ಕಿರು ಸಂದೇಶ (ಮೆಸೇಜ್) ಕಳುಹಿಸುವುದು ಆತನ ನಿತ್ಯ ಕೆಲಸವಾಗಿತ್ತು. ಈತನ ಮನಸ್ಥಿತಿ ಅರಿತಿದ್ದ ಆ ಯುವತಿ ಬೇಗನೇ ಹುಷಾರಾಗಿ ಆತನಿಂದ ನಿರ್ದಿಷ್ಟ ಅಂತರ ಕಾಪಾಡಿಕೊಳ್ಳುತ್ತಿದ್ದರು.

ಅದೊಂದು ದಿನ ಆಕೆಯಿದ್ದ ಅಪಾರ್ಟ್ ಮೆಂಟ್ ನ ವಿಳಾಸ ಪತ್ತೆ ಮಾಡಿದ ಆತ, ಆಕೆ ಮನೆಯಲ್ಲಿದ್ದಾಗ ನೇರವಾಗಿ ಅಲ್ಲಿಗೇ ಹೋಗಿದ್ದಾನೆ. ಒಳಗಿನಿಂದ ಬಾಗಿಲು ಹಾಕಿದ್ದರೂ, ಪಕ್ಕದ ಕಿಟಕಿಯಿಂದ ಕೈ ತೂರಿಸಿ ಬಾಗಿಲಿನ ಚಿಕಲ ತೆಗೆದು ಒಳ ಪ್ರವೇಶಿಸಿ ಬಾಗಿಲು ಹಾಕಿ ಚಿಲಕ ಹಾಕಿಕೊಂಡಿದ್ದಾನೆ. ಆನಂತರ ಒಳ ಹೋಗಿ, ಹುಡುಗಿಯ ಮುಂದೆ ಪ್ರತ್ಯಕ್ಷವಾಗಿದ್ದಾನೆ.

ರಾಸಲೀಲೆಯಲ್ಲಿ ತಗಲಾಕ್ಕೊಂಡ ದೇಶದ ರಾಜಕಾರಣಿಗಳು

ಆತನನ್ನು ನೋಡಿ ಭಯಭೀತಳಾದ ಆಕೆ, ಹೇಗೆ ಬಂದೆ ಎಂದು ಕೇಳುವಷ್ಟರಲ್ಲೇ, ಆಕೆಯ ಬಳಿ ಅಸಭ್ಯವಾಗಿ ವರ್ತಿಸಲು ಮುಂದಾಗಿದ್ದಾನೆ. ಇದರಿಂದ ಮತ್ತಷ್ಟು ಭಯಭೀತಳಾದ ಆಕೆ ಕಿಟಾರನೆ ಕಿರುಚಾಡಿದ್ದಾಳೆ. ಆಕೆಯ ಕೂಗನ್ನು ಕೇಳಿದ ಅಕ್ಕಪಕ್ಕದ ಮನೆಯವರು ಬಂದಿದ್ದಾರೆ. ಇದನ್ನು ಗಮನಿಸಿ ಭೀತಿಗೊಂಡ ಆತ ತಕ್ಷಣವೇ ಅಲ್ಲಿಂದ ಪರಾರಿಯಾಗಲು ಯತ್ನಿಸಿ, ಆ ಭರದಲ್ಲಿ ಯುವತಿಯ ಮನೆಯಿದ್ದ ಅಪಾರ್ಟ್ ಮೆಂಟ್ ನ 4ನೇ ಮಹಡಿಯಿಂದ ಕೆಳಗೆ ಬಿದ್ದಿದ್ದಾನೆ.

BJP Leader Kissing A Woman In A Moving Bus In Maharashtra | Viral Video

ತೀವ್ರವಾಗಿ ಗಾಯಗೊಂಡಿದ್ದ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In Bengaluru, A 27-year-old bank employee fell from the 4th floor of a residential complex while trying to escape after breaking into his colleague’s house and trying to molest her. The accused is currently undergoing treatment at a hospital
Please Wait while comments are loading...