4ನೇ ಮದುವೆಗೆ ಯತ್ನಿಸಿದವನಿಗೆ ಹಿಗ್ಗಾಮುಗ್ಗಾ ಗೂಸಾ!

Posted By:
Subscribe to Oneindia Kannada

ಬೆಂಗಳೂರು, ಜೂನ್ 24 : ಮೂವರು ಪತ್ನಿಯರಿಗೆ ಕೈ ಕೊಟ್ಟು 4ನೇ ಮದುವೆಯಾಗಲು ಹೊರಟಿದ್ದ ಭೂಪನಿಗೆ ಹಿಗ್ಗಾಮುಗ್ಗಾ ಗೂಸಾ ಬಿದ್ದಿದೆ. 3ನೇ ಪತ್ನಿ ಮತ್ತು ಆಕೆಯ ಸಂಬಂಧಿಕರು ಮದುವೆಯನ್ನು ತಪ್ಪಿಸಿದ್ದಾರೆ. ಹಲವರಿಗೆ ವಂಚಿಸಿದ ಭೂಪ ಈಗ ಪೊಲೀಸರ ವಶದಲ್ಲಿದ್ದಾನೆ.

ಮೂರು ಮದುವೆಯಾಗಿದ್ದ ವಜ್ರೇಶ್ ಎಂಬುವವನಿಗೆ ಬೆಂಗಳೂರಿನ ನಾಗರಭಾವಿಯ ಬಿಡಿಎ ಕಾಂಪೆಕ್ಸ್‌ ಬಳಿ ಶುಕ್ರವಾರ ಗೂಸಾ ಬಿದ್ದಿದೆ. ಸ್ಥಳಕ್ಕೆ ಆಗಮಿಸಿದ ಜ್ಞಾನ ಭಾರತಿ ಪೊಲೀಸರು ವಜ್ರೇಶ್‌ನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. [ಪ್ರೇಯಸಿಗಾಗಿ ಐಸಿಐಸಿಐ ಬ್ಯಾಂಕ್‌ಗೆ 79 ಕೋಟಿ ಪಂಗನಾಮ!]

vajresh

ವಜ್ರೇಶ್ ಮೊದಲ ಪತ್ನಿಗೆ ವಿಚ್ಛೇದನ ನೀಡಿದ್ದ. ಎರಡನೇ ಪತ್ನಿಯಿಂದ ದೂರವಿದ್ದ. ಈಗ ಮೂರನೇ ಹೆಂಡತಿಯನ್ನು ಬಿಟ್ಟು 4ನೇ ಮದುವೆಗೆ ಸಿದ್ದವಾಗಿದ್ದ. ವಜ್ರೇಶ್ ಮದುವೆಯಾಗುವ ವಿಚಾರವನ್ನು ತಿಳಿದ ಮೂರನೇ ಪತ್ನಿ ಹದಿನೈದು ದಿನಗಳ ಹಿಂದೆ ಆತನ ಮನೆ ಬಳಿ ಹೋಗಿ ಗಲಾಟೆ ಮಾಡಿದ್ದಳು. [ಬೆಂಗಳೂರು ಗಾಂಧಿನಗರದಲ್ಲಿ ಭದ್ರಾವತಿ ವಂಚಕಿಯರು!]

ಆದರೆ, ವಜ್ರೇಶ್ ಮನೆಯ ನಾಯಿಯನ್ನು ಛೂ ಬಿಟ್ಟು ಆಕೆಗೆ ಕಚ್ಚಿಸಿದ್ದ. ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಆಕೆಯನ್ನು ವಾಪಸ್ ಕಳಿಸಿದ್ದ. ಈ ಕುರಿತು ಆಕೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ಕೊಟ್ಟಿದ್ದಳು. ಶುಕ್ರವಾರ 4ನೇ ಮದುವೆಗೆ ಸಿದ್ಧವಾಗುವಾಗ 3ನೇ ಹೆಂಡತಿ ಮತ್ತು ಆಕೆಯ ಸಂಬಂಧಿಕರು ವಜ್ರೇಶ್‌ಗೆ ಥಳಿಸಿದ್ದಾರೆ. [ಅತ್ತೆ ಜೊತೆಗಿನ ಪತಿಯ ಅನೈತಿಕ ಸಂಬಂಧ: ಬಲಿಯಾದಳು ಪತ್ನಿ!]

ಗೋಪಾಲನ್ ಮಾಲ್ ಬಳಿ ಶಾಪಿಂಗ್‌ಗೆ ಬರುತ್ತಿದ್ದ ಯುವತಿಯನ್ನು ಈತ ಮರುಳು ಮಾಡಿ ಬುಟ್ಟಿಗೆ ಹಾಕಿಕೊಳ್ಳುತ್ತಿದ್ದ. ಈಗಾಗಲೇ 3 ಮದುವೆಯಾಗಿರುವ ವಜ್ರೇಶ್‌ಗೆ 8ಕ್ಕೂ ಅಧಿಕ ಗೆಳೆತಿಯರಿದ್ದಾರೆ. ಪೊಲೀಸರು ಆತನ ವಿಚಾರಣೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A man was thrashed near Nagarbhavi BDA complex, Bengaluru for allegedly cheating wife. Vajresh who planning for 4th marriage, After marrying three women and cheating them.
Please Wait while comments are loading...