ಅತ್ಯಾಚಾರಿಯನ್ನು ಉಳಿಸಲು ಆಸ್ಪತ್ರೆ ದಾಖಲೆಗೆ ಕನ್ನ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್, 17: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿರುವ ಆರೋಪಿಯ ರಕ್ಷಣೆಗಾಗಿ ಅವನ ಸ್ನೇಹಿತನೊಬ್ಬ ಆಸ್ಪತ್ರೆಯ ದಾಖಲೆಗಳನ್ನು ಕದ್ದು ಪೊಲೀಸ್ ಬಂಧನಕ್ಕೆ ಒಳಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ತಾನೇ ಹೆತ್ತ ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿ, ಅತ್ಯಾಚಾರ ಎಸಗಿದ ತನ್ನ ನೀಚ ಸ್ನೇಹಿತನನ್ನು ಶಿಕ್ಷೆಯಿಂದ ಪಾರು ಮಾಡಲು ಸೈಯದ್ ಅಕ್ಬರ್ ಜುಬೇರ್ ಎಂಬ ವ್ಯಕ್ತಿ ಪ್ರಯತ್ನಿಸಿದ್ದಾನೆ. [ಬೆಂಗಳೂರು: 6 ತಿಂಗಳಿಂದ ಬಾಲಕಿ ಮೇಲೆ ನಿರಂತರ ಅತ್ಯಾಚಾರ]

Man steals hospital records to save his friend accused of rape

ಕಳ್ಳತನ ಮತ್ತು ಸಾಕ್ಷ್ಯ ನಾಶ ಮಾಡಿರುವ ಆರೋಪದ ಮೇಲೆ ಸೈಯದ್ ಅಕ್ಬರ್ ಜುಬೇರ್ ಗೆ ನ್ಯಾಯಲಯ ನವೆಂಬರ್ಇದೇ ನವೆಂಬರ್ 7ರಂದು ನ್ಯಾಯಾಂಗ ಬಂಧನ ವಿಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಿತ್ತು.

ತನ್ನ ಮಗಳ ಮೇಲೆ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ಜುಬೇರ್ ಸ್ನೇಹಿತನ ವಿರುದ್ಧ ಕಳೆದ ಅಕ್ಟೋಬರ್ ನಲ್ಲಿ ಫೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪೊಲೀಸರು ಬಂಧಿಸಿದ್ದರು.

ಸಂತ್ರಸ್ತ ಬಾಲಕಿಯನ್ನು ನಗರದ ಬೌರಿಂಗ್, ಮತ್ತು ಲೇಡಿ ಕರ್ಜನ್ ಆಸ್ಪತ್ರೆಯಲ್ಲಿ ತಪಾಸಣೆಗೆ ಒಳಪಡಿಸಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಆಸ್ಪತ್ರೆ ಸಿಬ್ಬಂದಿ ಸಿದ್ಧತೆ ನಡೆಸಿದ್ದರು.

ಹೇಗಾದರೂ ಮಾಡಿ ದಾಖಲೆಯನ್ನು ಅಳಿಸಿ ತನ್ನ ಸ್ನೇಹಿತನನ್ನು ಶಿಕ್ಷೆಯಿಂದ ಪಾರು ಮಾಡಬೇಕೆಂದು ಯೋಚಿಸಿದ ಜುಬೇರ್ ಕಳೆದ ಅಕ್ಟೋಬರ್ ನಲ್ಲಿ ಮುಖ್ಯ ವೈದ್ಯಕೀಯ ಅಧಿಕಾರಿ ಕೊಠಡಿಯಲ್ಲಿದ್ದ ದಾಖಲೆಗಳನ್ನು ಕದ್ದು ತನ್ನ ಸಂಬಂಧಿಕರ ಮನೆಯಲ್ಲಿ ಜುಬೇರ್ ಬಚ್ಚಿಟ್ಟಿದ್ದ.

ಮರುದಿನ ದಾಖಲೆಗಳು ಕಾಣಿಸದೇ ಹೋದಾಗ ಆಸ್ಪತ್ರೆಯ ಸಿಬ್ಬಂದಿ ಪೊಲೀಸರಿಗೆ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಫುಟೇಜ್ ಕ್ಯಾಮೆರಾ ಪರಿಶೀಲಿಸಿದ ಪೊಲೀಸರಿಗೆ ಜುಬೇರ್ ದಾಖಲೆಗಳನ್ನು ಕದಿಯುತ್ತಿರುವುದು ಸ್ಪಷ್ಟವಾಗಿ ಗೋಚರಿಸಿತ್ತು. ಆರೋಪಿ ಕೊಠಡಿಯಿಂದ ಎರಡು ಪುಸ್ತಕಗಳನ್ನು ಕದ್ದು ತೆಗೆದುಕೊಂಡು ಹೋಗುತ್ತಿರುವುದು ರೆಕಾರ್ಡ್ ಆಗಿತ್ತು.

ಕಳ್ಳತನ ಮತ್ತು ಸಾಕ್ಷ್ಯ ನಾಶ ಆರೋಪದ ಮೇಲೆ ಜುಬೇರ್ ನನ್ನು ಆತನ ನಿವಾಸದಲ್ಲಿ ಫ್ರೇಜರ್ ಟೌನ್ ಪೊಲೀಸರು ಬಂಧಿಸಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Syed Akbar Zuber was arrested on November 7 for stealing the medical records-medico legal case register and police intimation book- from Bowring & Lady Curzon Hospital in Shivajinagar, in order to save his friend who was accused of raping his 15-year-old daughter.
Please Wait while comments are loading...