ಹುಟ್ಟು ಹಬ್ಬದಂದು ಮಗಳನ್ನು ಕೊಂದ ಪಾಪಿ ತಂದೆ

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 26 : ಪತ್ನಿಯ ಶೀಲ ಶಂಕಿಸಿ ತಂದೆಯೊಬ್ಬ ಮಗಳನ್ನು ಹುಟ್ಟು ಹಬ್ಬದ ದಿನವೇ ಹತ್ಯೆ ಮಾಡಿದ್ದಾನೆ. ಬನಶಂಕರಿ ಠಾಣೆ ಪೊಲೀಸರು ಪಾಪಿ ತಂದೆಯನ್ನು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

5 ವರ್ಷದ ಲಕ್ಷ್ಮೀ ತಂದೆಯಿಂದ ಹತ್ಯೆಯಾದ ಮಗು. ಕೆಂಗೇರಿಯಲ್ಲಿರುವ ಬಿಜಿಎಸ್ ಆಸ್ಪತ್ರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಲಕ್ಷ್ಮೀ ಶವ ಪತ್ತೆಯಾಗಿದೆ. ತಾಯಿ ನೀಡಿದ ದೂರಿನ ಆಧಾರದ ಮೇಲೆ ಲಕ್ಷ್ಮೀ ತಂದೆ ಲೋಕೇಶ್‌ (31) ನನ್ನು ಪೊಲೀಸರು ಬಂಧಿಸಿದ್ದಾರೆ. [ಬೆಂಗಳೂರು : ಪೊಲೀಸ್ ಠಾಣೆಯಲ್ಲಿ ಆರೋಪಿ ಸಾವು, ಸಿಐಡಿ ತನಿಖೆ]

ಪದೇ-ಪದೇ ಗಲಾಟೆ ಮಾಡುತ್ತಿದ್ದ : ಬೆಂಗಳೂರಿನ ಬನಶಂಕರಿಯಲ್ಲಿ ವಾಸವಾಗಿದ್ದ ಚಾಮರಾಜನಗರ ಮೂಲದ ಲೋಕೇಶ್ ಪತ್ನಿ ಜೊತೆ ಪದೇ-ಪದೇ ಜಗಳವಾಡುತ್ತಿದ್ದ. ಪತ್ನಿಯ ಶೀಲದ ಬಗ್ಗೆ ಶಂಕೆ ವ್ಯಕ್ತಪಡಿಸುತ್ತಿದ್ದ ಲೋಕೇಶ್ ಈ ಮಗು ನನ್ನದಲ್ಲ ಎಂದು ಹೆಂಡತಿ ಜೊತೆ ಜಗಳವಾಡಿದ್ದ. [ಮದುವೆಗೆ ಒಪ್ಪದ ತಂದೆ-ತಾಯಿಯನ್ನು ಕೊಲ್ಲಿಸಿದ ಮಗ]

bangalore police

ಶನಿವಾರ ಲಕ್ಷ್ಮೀ ಹುಟ್ಟುಹಬ್ಬವಿತ್ತು. ಶುಕ್ರವಾರ ಸಂಜೆ ಹುಟ್ಟುಹಬ್ಬಕ್ಕೆ ಬಟ್ಟೆ ಕೊಡಿಸುವುದಾಗಿ ಮಗಳನ್ನು ಕರೆದುಕೊಂಡು ಹೋದ ಲೋಕೇಶ್, ಬಿಜಿಎಸ್ ಆಸ್ಪತ್ರೆ ಸಮೀಪದ ನಿರ್ಜನ ಪ್ರದೇಶದಲ್ಲಿ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ. [ರಿಯಲ್ ಎಸ್ಟೇಟ್ ಉದ್ಯಮಿ ಹತ್ಯೆಯಾಗಿದ್ದು ಮಗನಿಂದಲೇ!]

ಲಕ್ಷ್ಮೀ ತಾಯಿ ನೀಡಿದ ದೂರಿನ ಆಧಾರದ ಮೇಲೆ ತನಿಖೆ ನಡೆಸಿದ ಪೊಲೀಸರು ಲೋಕೇಶ್‌ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸ್ಥಳ ಪರಿಶೀಲನೆ ನಡೆಸಿದಾಗ ಲಕ್ಷ್ಮೀ ಶವ ಪತ್ತೆಯಾಗಿದೆ. ಬನಶಂಕರಿ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a tragic incident, a 31-year-old man Lokesh murdered his daughter Lakshmi (5) at Bengaluru, Banashankari police station limits. Lakshmi body found near BGS global hospital Kengeri on Saturday, March 26, 2016.
Please Wait while comments are loading...