ಬೆಂಗಳೂರು: ಜಿಟಿ ಮಾಲ್ ಲಿಫ್ಟ್ ನಲ್ಲಿ ಸಿಲುಕಿ ಕಾರ್ಮಿಕ ಸಾವು

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 20: ನಗರದ ಮಾಗಡಿ ರಸ್ತೆಯಲ್ಲಿರುವ ಜಿ.ಟಿ ವರ್ಲ್ಡ್ ಮಾಲ್ ​ನಲ್ಲಿ ಲಿಫ್ಟ್​ ಗೆ ಸಿಲುಕಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಮೂವರನ್ನು ರಕ್ಷಿಸಲಾಗಿದೆ.

ಮೃತಪಟ್ಟವರನ್ನು ಶ್ರೀನಿವಾಸ್​ (40) ಎಂದು ಗುರುತಿಸಲಾಗಿದೆ. ಶುಕ್ರವಾರ ಮಾಲ್​ ನಲ್ಲಿರುವ ಬಿಗ್​ ಬಜಾರ್​ ನಲ್ಲಿ ಮೆಟೀರಿಯಲ್​ ಅನ್​ಲೋಡ್​ ಮಾಡುತ್ತಿದ್ದ ವೇಳೆ ಏಕಾಏಕಿ ಲಿಫ್ಟ್ ಕೆಟ್ಟು ನಿಂತಿದೆ. ಶೀಘ್ರವೇ ಲಿಫ್ಟ್​ ದುರಸ್ತಿ ಕಾರ್ಯ ನಡೆಯದ ಕಾರಣ ಶ್ರೀನಿವಾಸ್​ ಮೃತಪಟ್ಟಿದ್ದಾರೆ.

Man dies in lift shaft while loading goods at GT mall in Bengaluru

ಇದೇ ಲಿಫ್ಟ್ ನಲ್ಲಿ ಸಿಲುಕಿದ್ದ ಮೂವರನ್ನು ಅಗ್ನಿಶಾಮಕದ ಸಿಬ್ಬಂದಿ ರಕ್ಷಿಸಿದ್ದಾರೆ. ಸ್ಥಳಕ್ಕೆ ಕೆಪಿ ಅಗ್ರಹಾರ ಪೊಲೀಸರು ಭೇಟಿ ನೀಡಿದ್ದು, ಮಾಹಿತಿ ಕಲೆ ಹಾಕುತ್ತಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Man dies in lift shaft while loading goods at Magadi road GT mall in Bengaluru, on October 20. Ddeceased identified as Srinivas (35).

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ