ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕದ್ದ ಫೋನಿನಲ್ಲಿ ಓಲಾ ಬುಕ್ ಮಾಡಿ, ಚಾಲಕನನ್ನೂ ದೋಚಿದ ಖದೀಮ!

|
Google Oneindia Kannada News

ಬೆಂಗಳೂರು, ಆಗಸ್ಟ್ 11: ಕದ್ದ ಫೋನಿನಲ್ಲಿ ಓಲಾ ಬುಕ್ ಮಾಡಿ, ನಂತರ ಆತನನ್ನು ಕರೆದೊಯ್ಯಲು ಬಂದಿದ್ದ ಓಲಾ ಚಾಲಕನನ್ನೇ ಬೆದರಿಸಿ, ಚಾಲಕನ ಬಳಿ ಇದ್ದ ಫೋನ್ ಮತ್ತು 5,000 ರೂ. ನಗದು ಹಣವನ್ನು ದೋಚಿದ ಖದೀಮನೊಬ್ಬನ ಬಂಧನಕ್ಕೆ ಪೊಲಿಸರು ಬಲೆಬೀಸಿದ್ದಾರೆ.

ಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆಬೆಂಗಳೂರಿನ ಕ್ಯಾಬ್ ಡ್ರೈವರ್ ಹೇಳಿಕೊಂಡ ಬದುಕು-ಬವಣೆ

ಕೋಲಾರದಲ್ಲಿ ಯುವತಿಯೊಬ್ಬರ ಫೋನ್ ಕದ್ದ ಈತ ಬೆಂಗಳೂರಿಗೆ ಬಂದು ಫೋನ್ ಸ್ವಿಚ್ ಆನ್ ಮಾಡಿದ್ದಾನೆ. ನಂತರ ಬೆಂಗಳೂರಿನ ಇನ್ಫಿನಿಟಿ ರಸ್ತೆಯಿಂದ ಫ್ರಾಸರ್ ಟೌನ್ ಕಡೆ ಹೋಗಬೇಕೆಂದು ಓಲಾ ಟ್ಯಾಕ್ಸಿ ಬುಕ್ ಮಾಡಿದ್ದ. ಆರೋಪಿಯು ತನ್ನನ್ನು ಬ್ಯಾಂಕ್ ಮ್ಯಾನೇಜರ್ ಎಂದು ಪರಿಚಯಿಸಿಕೊಂಡಿದ್ದು, ನಿಮಗೆ ಲೋನ್ ಬೇಕಿದ್ದರೆ ಕೇಳಿ ಎಂದು ಓಲಾ ಡ್ರೈವರ್ ಕುಮಾರ್ ಬಳಿ ಹೇಳಿದ್ದಾನೆ. ಆತನ ಮಾತನ್ನು ನಂಬಿದ ಕುಮಾರ್, ಶಿವಾಜಿ ನಗರದ ಬಳಿ ಟ್ಯಾಕ್ಸಿ ನಿಲ್ಲಿಸಿ ಲೋನ್ ಪಡೆಯುವುದಕ್ಕೆ ಅಗತ್ಯ ದಾಖಲೆಗಳನ್ನು ನೀಡುವಂತೆ ಕೇಳಿದ್ದಾನೆ. ತನ್ನ ಬಳಿ ಇದ್ದ ಡ್ರೈವಿಂಗ್ ಲೈಸೆನ್ಸ್ ಸೇರಿದಂತೆ ಇತರ ದಾಖಲೆಗಳ ನಕಲು ಪ್ರತಿ ಮಾಡಿಸಿ, ಕುಮಾರ್ ಆ ವ್ಯಕ್ತಿಗೆ ನೀಡಿದ್ದಾನೆ.

Man books Ola cab by stolen phone and robs driver in Bengaluru

ನಂತರ 10,000 ರೂ.ಮುಂಗಣ ಹಣ ನೀಡುವಂತೆ ಕೇಳಿದ್ದಾನೆ. ಇದನ್ನೂ ನಂಬಿದ ಕುಮಾರ್ ಹೆಚ್ಚು ಹಣವಿಲ್ಲದ ಕಾರಣ 5,000 ರೂ.ಗಳನ್ನು ಎಟಿಎಂ ಮೂಲಕ ಡ್ರಾ ಮಅಡಿ ನೀಡಿ, ಇನ್ನುಳಿದಿದ್ದನ್ನು ನಾಳೆ ನೀಡುತ್ತೇನೆಂದು ಹೇಳಿದ್ದದಾನೆ. ನಂತರ ನಿಮ್ಮ ಫೋನಿನಲ್ಲಿ ನಮ್ಮ ಬ್ಯಾಂಕ್ ನ ಆಪ್ ಡೌನ್ ಲೋಡ್ ಮಾಡಿಸುತ್ತೇನೆಂದು ಆತನ ಐಫೋನ್ ಅನ್ನು ತೆಗೆದುಕೊಂಡು ಅಲಿ ಅಸ್ಕರ್ ರಸ್ತೆಯ ಕಟ್ಟಡವೊಂದರ ಬಳಿ ಕ್ಯಾಬ್ ನಿಲ್ಲಿಸುವಂತೆ ಹೇಳಿ, ಇದೇ ತಮ್ಮ ಬ್ಯಾಂಕ್ ಎಂದು ಹೇಳಿ, ಕುಮಾರ್ ನನ್ನು ಅಲ್ಲಿಯೇ ನಿಲ್ಲಿಸಿ, ಒಳಹೋಗಿದ್ದಾನೆ.

ವರಮಹಾಲಕ್ಷ್ಮಿ ಹಬ್ಬದ ಮರುದಿನ ಮೈಸೂರಿನಲ್ಲಿ ಸರಣಿ ಕಳ್ಳತನವರಮಹಾಲಕ್ಷ್ಮಿ ಹಬ್ಬದ ಮರುದಿನ ಮೈಸೂರಿನಲ್ಲಿ ಸರಣಿ ಕಳ್ಳತನ

ಎರಡು ಗಂಟೆ ಕಾಯುತ್ತಿದ್ದ ಕುಮಾರ್ ಗೆ ಅನುಮಾನ ಬಂದು ತನ್ನ ಮತ್ತೊಂದು ಫೋನಿನಿಂದ ಐಫೋನ್ ಗೆ ಫೋನ್ ಮಾಡಿದರೆ ಫೋನ್ ಸ್ವಿಚ್ಡ್ ಆಫ್ ಆಗಿದೆ. ನಂತರ ವಿಧಾನಸೌಧ ಪೊಲೀಸರಿಗೆ ದೂರು ನೀಡಿದಾಗ ಆತ ಓಲಾ ಕ್ಯಾಬ್ ಬುಕ್ ಮಾಡುವುದಕ್ಕೆ ಬಳಸಿದ ನಂಬರ್ ಕೋಲಾರದ್ದು ಎಂಬುದು ತಿಳಿದಿ, ಆ ನಂಬರ್ ಹಿನ್ನೆಲೆ ಹುಡುಕಿದಾಗ ಅದು ಮಹಿಳೆಯೊಬ್ಬರ ಮೊಬೈಲ್ ಎಂಬುದು ತಿಳಿದುಬಂದಿದೆ.

ಒಟ್ಟಿನಲ್ಲಿ ಯಾರೋ ಅಪರಿಚಿತನನ್ನು ನಂಬಿ, ತನ್ನ ವೈಯಕ್ತಿಕ ದಾಖಲೆಗಳನ್ನೂ, ದುಬಾರಿ ಫೋನ್ ಅನ್ನೂ ನೀಡಿದ ಓಲಾಕ್ಯಾಬ್ ಡ್ರೈವರ್ ಪರಿತಪಿಸುತ್ತಿದ್ದು, ಆತನ ದೂರನ್ನು ದಾಖಲಿಸಿಕೊಂಡ ವಿಧಾನಸೌಧ ಪೊಲೀಸರು ಆರೋಪಿಯ ಬಂಧನಕ್ಕೆ ಬಲೆಬೀಸಿದ್ದಾರೆ.

English summary
A person stole a woman's mobile phone in Kolar, turned up in Benglauru and used it to book an Ola cab, before robbing the driver of Rs 5,000 and a cellphone. Vidhana Soudha police registered complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X