ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಯಲಹಂಕ ವಾಯುನೆಲೆಯಲ್ಲಿ ಅರೆಸ್ಟ್ ಅದವನ ಬಳಿ 9 ಸಿಮ್!

|
Google Oneindia Kannada News

ಬೆಂಗಳೂರು, ಫೆಬ್ರವರಿ 7: ಯಲಹಂಕ ಪೊಲೀಸರು ಫೆಬ್ರವರಿ 4ರಂದು 24 ವರ್ಷದ ವ್ಯಕ್ತಿಯೊಬ್ಬನನ್ನು ಯಲಹಂಕ ವಾಯುನೆಲೆ ಬಳಿ ವಶಕ್ಕೆ ಪಡೆದಿದ್ದಾರೆ. ಫೆ.14 ರಿಂದ 18ರ ತನಕ ಇಲ್ಲಿ ಏರೋ ಇಂಡಿಯಾ ಪ್ರದರ್ಶನ ಇದ್ದು, ಆ ವ್ಯಕ್ತಿಯ ಅನುಮಾನಾಸ್ಪದ ಚಲನವಲನದಿಂದ ಸಂಶಯಗೊಂಡು, ಬಂಧಿಸಿದ್ದಾರೆ.

ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಆತ ಏರ್ ಷೋದಲ್ಲಿ ಮಳಿಗೆಯನ್ನು ಹಾಕಲು ಬಂದಿದ್ದವರ ಪೈಕಿ ಒಬ್ಬ. "ಏರೋ ಇಂಡಿಯಾದಲ್ಲಿ ರಕ್ಷಣಾ ವಸ್ತುಗಳ ಪ್ರದರ್ಶನ ಮಳಿಗೆ ನಿರ್ಮಾಣ ಕಾರ್ಯಕ್ಕೆ ಅತ ಬಂದಿದ್ದ. ಫೆಬ್ರವರಿ 4ರಂದು ಎಲ್ಲ ಕೆಲಸಗಾರರು ತೆರಳಿದ ನಂತರ ಕೂಡ ಅಂದರೆ ರಾತ್ರಿ 9.30ರ ವೇಳೆಯಲ್ಲಿ ಆತ ಯಾರೊಂದಿಗೋ ಫೋನ್ ನಲ್ಲಿ ಮಾತನಾಡುತ್ತಿದ್ದ.[ಮಂಗಳೂರಿನಲ್ಲಿ ಕಳ್ಳತನ: ಲ್ಯಾಪ್ ಟಾಪ್ ಸಮೇತ ಸಿಕ್ಕ ಇಬ್ಬರು]

Man arrested for suspicious activity at Yelahanka Air Base

"ವಾಯು ನೆಲೆ ಅಧಿಕಾರಿಗಳ ಗಮನಕ್ಕೆ ಬಂದಿದ್ದ. ಅಧಿಕಾರಿಗಳು ಪ್ರಶ್ನಿಸಿದಾಗ, ಆತನ ಬಳಿ ಒಂಬತ್ತು ಸಿಮ್ ಕಾರ್ಡ್ ಇರುವುದು ಪತ್ತೆಯಾಗಿತ್ತು" ಎಂದು ಇನ್ ಸ್ಪೆಕ್ಟರ್ ತಿಳಿಸಿದ್ದಾರೆ. ಆ ನಂತರ ಅಧಿಕಾರಿಗಳು ಈ ವಿಚಾರವನ್ನು ಯಲಹಂಕ ಪೊಲೀಸರಿಗೆ ತಿಳಿಸಿದ್ದಾರೆ. ಬಳಿಕ ವಶಕ್ಕೆ ಪಡೆಯಲಾಗಿದೆ. ಈ ಬಗ್ಗೆ ವಿಚಾರಣೆ ನಡೆಯುತ್ತಿದೆ.[ನೊಬೆಲ್ ಪುರಸ್ಕೃತ ಕೈಲಾಸ್ ಸತ್ಯಾರ್ಥಿ ಮನೆಯಲ್ಲಿ ಕಳ್ಳತನ]

ಬಂಧನದ ಬಗ್ಗೆ ಬೆಂಗಳೂರು ಪೊಲೀಸ್ ಕಮಿಷನರ್ ಪ್ರವೀಣ್ ಸೂದ್ ಟ್ವೀಟ್ ಮಾಡಿದ್ದು, ಬಂಧಿತ ಭಯೋತ್ಪಾದನಾ ಚಟುವಟಿಕೆಯಲ್ಲಿ ಭಾಗಿಯಾಗಿದ್ದ ಎಂಬ ದೃಷ್ಟಿಕೋನದಲ್ಲಿ ತನಿಖೆ ನಡೆಸುತ್ತಿಲ್ಲ ಎಂದಿದ್ದಾರೆ. ಮಾಧ್ಯಮಗಳಲ್ಲಿ ಆತ ಶಂಕಿತ ಭಯೋತ್ಪಾದಕ ಎಂಬಂತೆ ವರದಿಯಾಗಿತ್ತು. ಅದನ್ನು ಕಮಿಷನರ್ ಸ್ಪಷ್ಟ ಶಬ್ದಗಳಲ್ಲಿ ನಿರಾಕರಿಸಿದ್ದಾರೆ.

English summary
The Yelahanka police arrested a 24-year-old man on February 4 at the Yelahanka Air Base for ‘suspicious activity’ just ahead of Aero India air show at the base.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X