ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮದುವೆಯಾಗ್ತೀನಿ ಎಂದು ನಂಬಿಸಿ ವಿಧವೆಯರಿಗೆ ಮೋಸ ಮಾಡ್ತಿದ್ದ ವ್ಯಕ್ತಿ ಸೆರೆ

|
Google Oneindia Kannada News

ಬೆಂಗಳೂರು, ಜನವರಿ 16: ಮದುವೆಯಾಗುವುದಾಗಿ ನಂಬಿಸಿ 16 ವಿಧವೆಯರಿಗೆ ಹಾಗೂ ವಿಚ್ಛೇದಿತೆಯರಿಗೆ ಮೋಸ ಮಾಡಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.

ಡಿಎಂ ರಾಮಕೃಷ್ಣ(46) ಬಂಧಿತ, ವಿಧವೆಯರು, ವಿಚ್ಛೇದಿತೆಯರನ್ನು ಮದುವೆಯಾಗುವುದಾಗಿ ನಂಬಿಸಿ, ಕೆಲವರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ, ಬಳಿಕ ಅವರಿಂದ ಹಣವನ್ನು ದೋಚಿ ಪರಾರಿಯಾಗುತ್ತಿದ್ದ. ಈಗಾಗಲೇ 16ಕ್ಕೂ ಹೆಚ್ಚು ಮಹಿಳೆಯರಿಗೆ ಈತ ಮೋಸ ಮಾಡಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಮೃತಭಿಕ್ಷುಕನ ಕೃತಕ ಕಾಲಿನಲ್ಲಿತ್ತು 96 ಸಾವಿರ ಮೃತಭಿಕ್ಷುಕನ ಕೃತಕ ಕಾಲಿನಲ್ಲಿತ್ತು 96 ಸಾವಿರ

2006ರಿಂದ ರಾಮಕೃಷ್ಣ ಈ ದಂದೆಗೆ ಇಳಿದಿದ್ದ. ರಾಜ್ಯದ ವಿವಿಧ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಪ್ರಕರಣ ದಾಖಲಾಗಿದೆ. ಚಿಕ್ಕಮಗಳೂರು, ಬೆಂಗಳೂರು, ಹುಬ್ಬಳ್ಳಿ-ಧಾರವಾಡದ ಮಹಿಳೆಯರಿಗೆ ಈತ ಮದುವೆಯಾಗುವುದಾಗಿ ನಂಬಿಸಿದ್ದ. ಇಷ್ಟೇ ಅಲ್ಲದೆ ವಧು ಬೇಕಾಗಿದ್ದಾರೆ ಎಂದು ದಿನಪತ್ರಿಕೆಗಳಲ್ಲಿ ಜಾಹೀರಾತು ಕೂಡ ನೀಡುತ್ತಿದ್ದ ಎಂದು ತಿಳಿದುಬಂದಿದೆ.

Man arrested for cheating 16 widows and divorcees

ಕೊಪ್ಪಳದಲ್ಲಿ ವಧುವಿಲ್ಲದೇ ಮದುವೆ ನೋಂದಣಿ ಮಾಡಿಸಿದ ಭೂಪ ಕೊಪ್ಪಳದಲ್ಲಿ ವಧುವಿಲ್ಲದೇ ಮದುವೆ ನೋಂದಣಿ ಮಾಡಿಸಿದ ಭೂಪ

ಸುಳ್ಳು ದಾಖಲೆ ಸೃಷ್ಟಿಸಿ ಹೊಸ ಸಿಮ್ ಕಾರ್ಡ್‌ಗಳನ್ನು ಖರೀದಿ ಮಾಡುತ್ತಿದ್ದ. ಬಳಿಕ ವಿಚ್ಛೇದಿತೆಯರು, ವಿಧವೆಯರ ಬಳಿ ಹಣ ಪಡೆದು ಅಲ್ಲಿಂದ ಪರಾರಿಯಾಗಿ ಬೇರೆ ಸಿಮ್ ಖರೀದಿಸುತ್ತಿದ್ದ. ಸರ್ಕಾರಿ ಕೆಲಸ ಕೊಡಿಸುವುದಾಗಿ ಕೂಡ ವಂಚನೆ ಮಾಡುತ್ತಿದ್ದ. ತಾನು ಆರೋಗ್ಯ ಇಲಾಖೆಯ ಅಧಿಕಾರಿ ಎಂದು ಹೇಳಿ ಯಾಮಾರಿಸುತ್ತಿದ್ದ. ವಿವಿಧ ಉದ್ಯೋಗವನ್ನರಸಿ ಬರುತ್ತಿದ್ದವರನ್ನು ಯಾಮಾರಿಸಿ 22 ಲಕ್ಷಕ್ಕಿಂತಲೂ ಹೆಚ್ಚು ಹಣವನ್ನು ಅವರಿಂದ ಪಡೆದಿದ್ದ ಎನ್ನುವ ಮಾಹಿತಿ ಲಭ್ಯವಾಗಿದೆ.

English summary
Bengaluru Police arrested a man for luring and cheating at least 16 women, all widows and divorcees from across Karnataka by promising marriage. D M Ramakrishna, 46, not only cheated each woman of money but also had physical relationships with a few.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X