ಫೇಶಿಯಲ್ ನೆಪದಲ್ಲಿ ಯುವತಿಗೆ ಲೈಂಗಿಕ ದೌರ್ಜನ್ಯ
ಬೆಂಗಳೂರು, ಮಾರ್ಚ್ 26: ನಗರದಲ್ಲಿ ಬ್ಯೂಟಿ ಪಾರ್ಲರ್ ಗಳಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯಗಳು ಹೆಚ್ಚಾಗುತ್ತಿದೆ. ಫೇಶಿಯಲ್ ಮಾಡುವಾಗ ಯುವತಿ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಆರೋಪದ ಮೇಲೆ ಹರಿಯಾಣ ಮೂಲದ ಯುವಕನನ್ನು ಯಶವಂತಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಬ್ಯೂಟಿ ಪಾರ್ಲರ್ ಗೆ ತೆರಳಿದ್ದ ಸೌದಿ ಅರೇಬಿಯಾ ಮೂಲದ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈಕೆ ಕೊಟ್ಟ ದೂರಿನ ಮೇಲೆ ಆರೋಪಿ ಲಕ್ಕಿಸಿಂಗ್ ನನ್ನು ಕಾನೂನು ಕ್ರಮಕ್ಕೆ ಒಳಪಡಿಸಿದ್ದಾರೆ. ಮಾ.21ರಂದು ಈ ಘಟನೆ ನಡೆದಿದ್ದು, ಸಂತ್ರಸ್ತ ಯುವತಿ ಮತ್ತಿಕೆರೆಯ ಎಂಎಸ್ ರಾಮಯ್ಯ ಕಾಲೇಜಿನ ವಿದ್ಯಾರ್ಥಿನಿಯಾಗಿದ್ದಾರೆ.
ಜೆಪಿ ಪಾರ್ಕ್ನಲ್ಲಿ ಅತ್ಯಾಚಾರ ಯತ್ನ: ಬಸ್ ಚಾಲಕನ ಬಂಧನ
ಜಾವೇದ್ ಹಬೀದ್ ಹರಿಯಾಣದಿಂದ ಬಂದು ರಾಮಯ್ಯ ಕಾಲೇಜಿನ ಬಳಿ ಇರುವ ಬ್ಯೂಟಿ ಪಾರ್ಲರ್ ಗೆ ಸಹಾಯಕನಾಗಿ ಸೇರಿದ್ದ . ಇದೇ ಪಾರ್ಲರ್ ಗೆ ಸಂತ್ರಸ್ತ ಯುವತಿ ಮಾ.21ರಂದು ಫೇಶಿಯಲ್ ಮಾಡಿಸಲು ಹೋಗಿದ್ದರು.ಉಳಿದ ಬ್ಯೂಟಿಷಿಯನ್ ಗಳು ಬ್ಯುಸಿ ಇದ್ದುದರಿಂದ ಲಕ್ಕಿಸಿಂಗ್ ತಾನೇ ಫೇಶಿಯಲ್ ಮಾಡುವುದಾಗಿ ಹೇಳಿದ್ದ.
ನಂತರ ಫೇಶಿಯಲ್ ಮಾಡುವ ಸಂದರ್ಭದಲ್ಲಿ ಆಕ್ಎಯ ದೇಹವನ್ನು ಮುಟ್ಟಿ ದೌರ್ಜನ್ಯವೆಸಗಿದ್ದ. ಸ್ಥಳದಲ್ಲೇ ಪ್ರತಿಭಟಿಸಲು ಧೈರ್ಯ ಸಾಲದ ಯುವತಿ ಕಾಲೇಜಿನಲ್ಲಿ ಸ್ನೇಹಿತರ ಬಳಿ ಹೇಳಿಕೊಂಡಿದ್ದರು. ಸ್ನೇಹಿತರೆಲ್ಲ ಸೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಒಂದು ತಿಂಗಳ ಹಿಂದೆ ಬ್ಯೂಟಿ ಪಾರ್ಲರ್ ನಲ್ಲಿ ಉದ್ಯಮಿಯೊಬ್ಬರು ಯುವತಿಗೆ ಲೈಂಗಿಕ ದೌರ್ಜನ್ಯ ನೀಡಿದ ಪ್ರಕರಣ ಬೆಳಕಿಗೆ ಬಂದಿತ್ತು.