ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಣ್ಣಿದಾಂಡು ಗೋಲಿ ಬುಗುರಿ, ಆಡೋಣ ಬನ್ನಿ ಲಗೋರಿ!

ಮಡಿಕೆ ತಯಾರಿಸುವುದು, ಬಾಸ್ಕೆಟ್ ಹೆಣೆಯುವುದು, ಇಟ್ಟಿಗೆ ತಯಾರಿಸುವುದು, ರಾಗಿ ಬೀಸುವುದು, ಬೆಣ್ಣೆ ಕಡೆಯುವುದು ಮುಂತಾದ ಸಾಂಪ್ರದಾಯಿಕ ಆಟಗಳನ್ನು ಕೂಡ ಮಕ್ಕಳಿಗೆ ಮತ್ತು ದೊಡ್ಡವರಿಗೆ ಆಯೋಜಿಸಲಾಗಿದೆ.

By Prasad
|
Google Oneindia Kannada News

ಬೆಂಗಳೂರು, ನವೆಂಬರ್ 12 : ಲಗೋರಿ, ಬುಗುರಿ, ಗೋಲಿ, ಗಿಲ್ಲಿ ದಾಂಡು, ಚಾಟರ ಬಿಲ್ಲು, ಚೌಕಾ ಬಾರಾ, ಚಿಣ್ಣಿ ಮಣೆ, ಸೈಕಲ್ ಟೈರ್ ಸ್ಪರ್ಧೆ, ಪಗಡೆ, ಸ್ಕಿಪ್ಪಿಂಗ್, ಕುಂಟೆ ಬಿಲ್ಲೆ, ಆಣೆ ಕಲ್ಲು, ಕವಡೆ ಆಟಗಳು ನೆನಪಿವೆಯಾ? ಮರೆತುಹೋಗಿದ್ದರೆ, ಮಕ್ಕಳೊಂದಿಗೆ ಮಕ್ಕಳಾಗಿ ಆಡಲು ಇಲ್ಲೊಂದು ಸದವಕಾಶ ಕೂಡಿಬಂದಿದೆ.

ಮಕ್ಕಳ ದಿನಾಚರಣೆ ಪ್ರಯುಕ್ತ ಕಬ್ಬನ್ ಪಾರ್ಕಿನಲ್ಲಿ ನವೆಂಬರ್ 13 ಮತ್ತು 14ರಂದು ಎರಡು ದಿನಗಳ 'ಮಕ್ಕಳ ಹಬ್ಬ'ವನ್ನು ಯುನೈಟೆಡ್ ವೇ ಬೆಂಗಳೂರು ಸಂಸ್ಥೆ, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ವಿದ್ಯಾರಣ್ಯ ಎನ್‌ಜಿಓ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಿದ್ದು, ತರಹೇವಾರಿ ಆಟಗಳು ಮಕ್ಕಳಿಗಾಗಿ ಕಾದಿರುತ್ತವೆ.

ಚಾಚಾ ನೆಹರೂ ಹುಟ್ಟುಹಬ್ಬದಂದು ಇವಿಷ್ಟು ಆಟಗಳು ಮಾತ್ರವಲ್ಲ, ಮಡಿಕೆ ತಯಾರಿಸುವುದು, ಬಾಸ್ಕೆಟ್ ಹೆಣೆಯುವುದು, ಇಟ್ಟಿಗೆ ತಯಾರಿಸುವುದು, ರಾಗಿ ಬೀಸುವುದು, ಬೆಣ್ಣೆ ಕಡೆಯುವುದು ಮುಂತಾದ ಸಾಂಪ್ರದಾಯಿಕ ಆಟಗಳನ್ನು ಕೂಡ ಮಕ್ಕಳಿಗೆ ಮತ್ತು ದೊಡ್ಡವರಿಗೆ ಆಯೋಜಿಸಲಾಗಿದೆ. ಒಟ್ಟಿನಲ್ಲಿ ಎಲ್ಲರಿಗೂ ಖುಷಿಯೋಖುಷಿ. [ಸಮಾಜವೆಂಬ ಹೂವಿನ ಪಕಳೆಗಳು ಮಕ್ಕಳು]

Makkala Habba at Cubbon Park by United Way Bengaluru

ಇಷ್ಟು ಸಾಲದೆಂಬಂತೆ, ಎತ್ತಿನ ಬಂಡಿಯ ಸವಾರಿ, ಕುದುರೆ ಟಾಂಗಾ ಸವಾರಿ, ಅಜ್ಜಿಯರು ಮೊಮ್ಮಕ್ಕಳಿಗೆ ಕಥೆ ಹೇಳುವುದು, ತೆಂಗಿನ ಗರಿಯ ಮೇಲೆ ಕುಳಿತು ಸ್ಕೇಟಿಂಗ್ ಆಡುವುದು, ಚಿತ್ರ ಬಿಡಿಸುವುದು, ಬಣ್ಣ ಹಚ್ಚುವುದು... ಒಂದಕ್ಕಿಂತ ಒಂದು ಕಾರ್ಯಕ್ರಮಗಳು, ಆಟಗಳು ವಿಭಿನ್ನವಾಗಿವೆ. ಬೆಳಿಗ್ಗೆ 8 ಗಂಟೆಯಿಂದ ಆಟಗಳು ಶುರುವಾಗಲಿವೆ.

ಯುನೈಟೆಡ್ ವೇ ಬೆಂಗಳೂರು ಕಾರ್ಯನಿರ್ವಾಹಕ ಅಧ್ಯಕ್ಷರಾಗಿರುವ ಮನೀಶ್ ಮೈಕಲ್ ಅವರು ಹೇಳುವುದೇನೆಂದರೆ, "ಪಟ್ಟಣದ ಇಂದಿನ ಮಕ್ಕಳು ಆಧುನಿಕ ಜಗತ್ತಿನಲ್ಲಿ ಮುಳುಗಿ ಹೋಗಿದ್ದಾರೆ. ಅವರಿಗೆ ಸಾಂಪ್ರದಾಯಿಕ ಆಟಗಳ ಬಗ್ಗೆ, ಆಟಪಾಟ, ಕಲೆಯ ಬಗ್ಗೆ, ನಮ್ಮ ಸಂಸ್ಕೃತಿಯ ಶ್ರೀಮಂತಿಕೆಯ ಬಗ್ಗೆ ಅರಿವು ತುಂಬಾ ಕಡಿಮೆ. ಅವರಿಗೆ ಇದೆಲ್ಲದರ ಪರಿಚಯ ಮಾಡಿಸುವುದು, ಹಿರಿಯರೊಂದಿಗೆ ಭೂತಾಯಿಯೊಂದಿಗೆ ಬಾಂಧವ್ಯ ಬೆಸೆಯುವಂತೆ ಮಾಡುವುದು ನಮ್ಮ ಮೂಲ ಉದ್ದೇಶ." [ತಿರುಕನ ಕನಸು ಮತ್ತು ಹಾವಿನ ಹಾಡು]

ಬಾರ್ನ್ ಲರ್ನಿಂಗ್ : ಇದೆಲ್ಲದರ ಜೊತೆ, ಅಂಗನವಾಡಿಯಲ್ಲಿ ಓದುತ್ತಿರುವ ಮಕ್ಕಳನ್ನು ಮುಂದಿನ ಶಾಲೆಗೆ ತಯಾರು ಮಾಡುವ ಉದ್ದೇಶದಿಂದ 'ಬಾರ್ನ್ ಲರ್ನಿಂಗ್' ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಯುನೈಟೆಡ್ ವೇ ಬೆಂಗಳೂರು ಹಾಕಿಕೊಂಡಿದ್ದು, 3ರಿಂದ 6 ವರ್ಷದ ಮಕ್ಕಳಿಗೆ ತರಬೇತಿ ನೀಡಲಾಗುತ್ತದೆ. ಮೂರು ವರ್ಷದಲ್ಲಿ 1 ಲಕ್ಷಕ್ಕೂ ಹೆಚ್ಚು ಮಕ್ಕಳಿಗೆ ತರಬೇತಿ ನೀಡಿ ಪ್ರಶಂಸೆ ಗಳಿಸಿದೆ.

English summary
On the occasion of Children’s Day, United Way Bengaluru in association with the Department of Women and Child Development, and Vidyaranya, an NGO will organize the second edition of Makkala Habba, a two-day children’s carnival in Cubbon Park.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X