ತಮ್ಮ ಮುಖಾರವಿಂದ ಇಷ್ಟ ಪಡುವ ಎಲ್ಲರಿಗಾಗಿ ಈ ಲೇಖನ

Posted By:
Subscribe to Oneindia Kannada

ಇಡೀ ಲೋಕವೇ ಫ್ಯಾಷನ್ ಹಿಂದೆ ಬಿದ್ದಿದೆ. ಇದರಲ್ಲಿ ಪುರುಷರು, ಮಹಿಳೆಯರು, ಮಕ್ಕಳು ಎಂಬ ಭೇದವಿಲ್ಲ. ಒಂದು ದಿನ ಫ್ಯಾಷನ್ ಬಟ್ಟೆ ತೊಟ್ಟಿಲ್ಲವೆಂದರೆ, ಮುಖಕ್ಕೆ ಮೇಕಪ್ ಇಲ್ಲದಿದ್ದರೆ, ಮೈಗೆ ಘಮಘಮಿಸುವ ಸುಗಂಧ ಲೇಪಿಸದಿದ್ದರೆ, ಕಾಲಿಗೆ ದಿನಕ್ಕೊಂದರಂತೆ ನವೀನ ವಿನ್ಯಾಸದ ಚಪ್ಪಲಿಗಳನ್ನು ತೊಡದಿದ್ದರೆ, ಒಮ್ಮೆ ಕನ್ನಡಿ ಎದುರು ನಿಂತು ತಮ್ಮ ಸೌಂದರ್ಯವನ್ನು ತಾವೇ ಸವಿಯದಿದ್ದರೆ ಜೀವನದಲ್ಲಿ ಏನೋ ಕಳೆದುಕೊಂಡಂತೆ ವಿಲವಿಲನೆ ಒದ್ದಾಡಲಿಕ್ಕೆ ಶುರು ಮಾಡುತ್ತೇವೆ.

ಈ ಮೇಲಿನ ಎಲ್ಲಾ ಭಾವಗಳು ಹೆಚ್ಚಾಗುವುದು ಮನೆಯ, ನೆಂಟರಿಷ್ಟರ, ಸ್ನೇಹಿತರ ಸಭೆ-ಸಮಾರಂಭಗಳಲ್ಲಿ. ಈ ಫ್ಯಾಷನ್ ಲೋಕ ಜನರನ್ನು ಎಷ್ಟರ ಮಟ್ಟಿಗೆ ಬಾಧಿಸಿದೆ ಎಂದರೆ, ಮನೆಯಲ್ಲಿ ಫ್ಯಾಷನ್ ವಸ್ತುಗಳು ಇಲ್ಲದಿರುವುದು ಪ್ರತಿಷ್ಠೆಯ ಪ್ರಶ್ನೆ ಎನ್ನುವಷ್ಟರ ಮಟ್ಟಿಗೆ.

ಹೀಗೆ ಫ್ಯಾಷನ್ ಜಗತ್ತಿನ ಬಗ್ಗೆ ಇನ್ನಷ್ಟು ಮಾತುಗಳಾಡುತ್ತಾ ಹೋದರೆ ಇದರಲ್ಲಿ ಕರಗತರು ಯಾರು, ಫ್ಯಾಷನ್ ಮೋಹಕ್ಕೆ ಒಳಗಾಗುವವರು ಯಾರು ಎಂಬ ಪ್ರಶ್ನೆ ಕೇಳುವುದಕ್ಕೆ ಮೊದಲೇ ರೆಡಿ ಇರುತ್ತದೆ ಮಹಿಳೆಯರು ಎಂಬ ಉತ್ತರ. ಪುರುಷರು ಇದಕ್ಕೆ ಹೊರತಾಗಿಲ್ಲ ಎಂದರೂ ಸೌಂದರ್ಯದ ಮೇಲೆ ಹೆಚ್ಚು ನಿಗಾವಹಿಸುವವರು ಮಹಿಳೆಯರು ಎಂಬ ಮಾತನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು.[ಸೌತೆಕಾಯಿಯಲ್ಲಿದೆ ಲೆಕ್ಕವಿಲ್ಲದಷ್ಟು ಸೌಂದರ್ಯದ ಗುಟ್ಟು]

ಹೌದು ಫ್ಯಾಷನ್ ಲೋಕಕ್ಕೂ, ಮಹಿಳೆಗೂ, ಎಲ್ಲಿಲ್ಲದ ನಂಟು, ಅವಿನಾಭಾವ ಸಂಬಂಧ. ಕೆಲವೊಮ್ಮೆ ಆಕೆಯ ದಿನ ಶುರುವಾಗುವುದು ಯಾವ ಬಟ್ಟೆ , ಹೇರ್ ಸ್ಟೈಲ್, ಮೇಕಪ್, ಪರ್ಫ್ಯೂಮ್, ಲಿಪ್ ಸ್ಟಿಕ್ ಹೀಗೆ ಹನುಮಂತನ ಬಾಲದ ರೀತಿಯ ಪಟ್ಟಿ ಬೆಳೆದಿರುತ್ತದೆ. ಸಾಮಾನ್ಯ ದಿನವೇ ಹೀಗಿದ್ದರೆ, ಇನ್ನೂ ಕಾರ್ಯಕ್ರಮದ ಸಂದರ್ಭದಲ್ಲಿ?

ಸಮಾರಂಭಗಳಲ್ಲಿ ಮಹಿಳೆಯರು ಸೌಂದರ್ಯ ಗೃಹವಾದ ಬ್ಯೂಟಿ ಪಾರ್ಲರ್ ಗೆ ಹೋಗಲೇಬೇಕು. ಐಬ್ರೋಸ್, ಫೆಶಿಯಲ್, ಹೇರ್ ಕಟ್, ಹೇರ್ ಸ್ಟೈಲ್, ಸ್ಕಿನ್ ಕೇರ್ ಟ್ರೀಟ್ ಮೆಂಟ್, ವ್ಯಾಕ್ಸಿನ್, ಇವೆಲ್ಲವನ್ನು ಮಾಡಿಸಿಕೊಳ್ಳಲೇಬೇಕು. ಜೊತೆಗೆ ರಾಶಿರಾಶಿ ವಿವಿಧ ಬ್ರಾಂಡ್ ಗಳ ಮೇಕಪ್ ಸಾಮಾನುಗಳು ಅವರ ಬಳಿ ಇರಲೇಬೇಕು.[ವಿಶ್ವ ಫೋಟೋಗ್ರಫಿ ದಿನಕ್ಕೊಂದಿಷ್ಟು ವಿಶಿಷ್ಟ ಚಿತ್ರಗಳು]

ಮಹಿಳೆಯರ ಸೌಂದರ್ಯದ ಕಾಂತಿ ಹೆಚ್ಚಿಸಲು ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೆ ಬ್ಯೂಟಿಪಾರ್ಲರ್, ಮೇಕಪ್ ಸಾಮಾನು ಶಾಪ್ ಗಳ ಸಂಖ್ಯೆ ಎಗ್ಗಿಲ್ಲದೆ ಸಾಗುತ್ತಿದೆ. ಅದರಲ್ಲೂ ಎಲ್ಲಾ ಬಗೆಯ ಮೇಕಪ್ ಸಾಮಾನುಗಳಿರುವ ಶಾಪ್ ಜೊತೆಗೆ ಬ್ಯೂಟಿಪಾರ್ಲರ್ ಕೂಡ ಇರುವ ಒಂದು ಸಂಸ್ಥೆ ಬೆಂಗಳೂರಲ್ಲಿ ಸ್ಥಾಪನೆಯಾಗಿದೆ. ಯಾವುದು ಆ ಸಂಸ್ಥೆ, ಎಲ್ಲಿದೆ ಅದು? ಇಲ್ಲಿದೆ ಮಾಹಿತಿ.

ಹೊಸದಾಗಿ ಸ್ಥಾಪನೆಯಾದ ಆ ಸಂಸ್ಥೆ ಯಾವುದು?

ಹೊಸದಾಗಿ ಸ್ಥಾಪನೆಯಾದ ಆ ಸಂಸ್ಥೆ ಯಾವುದು?

ಹೊಸದಾಗಿ ಸ್ಥಾಪನೆಯಾದ ಆ ಸಂಸ್ಥೆ ಸೆಪೋರಾ. ಇದು ಬ್ಯೂಟಿ ಪಾರ್ಲರ್ ಕಮ್ ಮೇಕಪ್ ಐಟಂ ಶಾಪ್. ಇಲ್ಲಿ ಹೈ ಕ್ವಾಲಿಟಿಯ ಎಲ್ಲಾ ಬಗೆಯ ಸೌಂದರ್ಯವರ್ಧಕಗಳು ಇಲ್ಲಿ ಲಭ್ಯವಿದೆ.

ಸೆಪೋರಾದ ಬಗ್ಗೆ ನಿಮಗೆ ಗೊತ್ತಾ?

ಸೆಪೋರಾದ ಬಗ್ಗೆ ನಿಮಗೆ ಗೊತ್ತಾ?

ಇದು ಮೊದಲು ಸ್ಥಾಪನೆಯಾಗಿದ್ದು 1970ರಲ್ಲಿ. ಇದನ್ನು ಫ್ರಾನ್ಸಿನಲ್ಲಿ 1997ರಲ್ಲಿ ಪ್ಯಾರೀಸ್ ಮೂಲದ ಎಲ್ ವಿಎಮ್ ಎಚ್ ಸಂಸ್ಥೆಯ ಹೆನ್ನೆಸ್ಸಿ ಲೂಯಿಸ್ ವುಯ್ ಟನ್ ಸ್ಥಾಪನೆ ಮಾಡಿತು.

ಸೆಪೋರಾ ಬ್ಯೂಟಿ ಪಾರ್ಲರ್ ಇರುವುದು ಎಲ್ಲಿ?

ಸೆಪೋರಾ ಬ್ಯೂಟಿ ಪಾರ್ಲರ್ ಇರುವುದು ಎಲ್ಲಿ?

ಇದು ಬೆಂಗಳೂರಿನ ಪ್ರಮುಖ ನಗರವಾದ ಕೋರಮಂಗಲದಲ್ಲಿದೆ. ವಿಳಾಸ ಹೀಗಿದೆ ನೋಡಿ, ಫೋರಮ್ ಮಾಲ್, 21, ಹೊಸೂರು ರಸ್ತೆ, ಕೋರಮಂಗಲ.

ಸೆಪೋರಾ ಬ್ಯೂಟಿ ಪಾರ್ಲರ್ ನನ್ನು ಯಾರು ಉದ್ಘಾಟಿಸಿದರು?

ಸೆಪೋರಾ ಬ್ಯೂಟಿ ಪಾರ್ಲರ್ ನನ್ನು ಯಾರು ಉದ್ಘಾಟಿಸಿದರು?

ಸೆಪೋರಾ ಬ್ಯೂಟಿಪಾರ್ಲರ್ ಬೆಂಗಳೂರಲ್ಲಿ ಮಾರ್ಚ್ 5ರಂದು ಉದ್ಘಾಟನೆಗೊಂಡಿದ್ದು, ಇದನ್ನು ಹಿಂದಿ ಸಿನಿಮಾ ಪ್ರೇಮಿಗಳ ಮನಗೆದ್ದ ದಿಲ್ವಾಲೆ ಚಲನಸಿತ್ರದ ನಾಯಕಿ ಕ್ರಿತಿ ಸನೋನ್ ಉದ್ಘಾಟಿಸಿದರು.[ಬೆಡಗಿಯರ ಉಡುಗೆಯ ಕಲರವ, ಮೈಡೊಂಕಿನ ವೈಯಾರ!]

ಸೆಪೋರಾದ ವೈಶಿಷ್ಟ್ಯತೆ ಏನು?

ಸೆಪೋರಾದ ವೈಶಿಷ್ಟ್ಯತೆ ಏನು?

ಸೆಪೋರಾ ಇದು ಫ್ರೆಂವ್ ಬ್ಯೂಟಿ ಮತ್ತು ಕಾಸ್ಮೆಟಿಕ್ ಕಂಪನಿ. ಇದು ಈಗಾಗಲೇ ಮುಂಬೈ, ನವದೆಹಲಿಯಲ್ಲಿ ತನ್ನ ಪರ್ವ ಆರಂಭಿಸಿದೆ. ಬಹು ಮಹಿಳೆಯರ ಒತ್ತಾಯದ ಮೇರೆಗೆ ಬೆಂಗಳೂರಿಗೆ ಲಗ್ಗೆ ಇಟ್ಟಿದೆ.

ಸೆಪೋರಾಕ್ಕೆ ಯಾಕೆ ಹೋಗಬೇಕು?

ಸೆಪೋರಾಕ್ಕೆ ಯಾಕೆ ಹೋಗಬೇಕು?

ಸೆಪೋರಾದಲ್ಲಿ ಎಲ್ಲ ರೀತಿಯ ಮೇಕಪ್ ಗಳನ್ನು ಮಾಡಲಾಗುತ್ತದೆ. ಇಲ್ಲಿ ಸ್ಕಿನ್ ಕೇರ್ ಟ್ರೀಟ್ ಮೆಂಟ್, ಮಸಾಜ್ ನಿಂದ ಹಿಡಿದು, ಸೋಪು, ನೈಲ್ ಪಾಲೀಶ್, ಎಲ್ಲಾ ಬಗೆಯ ಕ್ರೀಮ್ ಹೀಗೆ ಮೇಕಪ್ ಗೆ ಸಂಬಂಧಿಸಿದ ಒಟ್ಟು 200 ಬ್ರಾಂಡ್ ಗಳು ಲಭ್ಯವಿದೆ.

ಸಂಪರ್ಕಿಸುವುದು ಹೇಗೆ?

ಸಂಪರ್ಕಿಸುವುದು ಹೇಗೆ?

ಸೆಪೋರಾ ತನ್ನದೇ ಆದ ಫೇಸ್ ಬುಕ್ (ಸೆಪೋರಾ) ಹಾಗೂ ಟ್ವಿಟರ್ ಪೇಜ್ ಹೊಂದಿದೆ. ಸೆಪೋರಾ ಸಂಸ್ಥೆ ಬಗ್ಗೆ ಟ್ವಿಟರ್ ಹಾಗೂ ಫೇಸ್ ಬುಕ್ ನಲ್ಲಿ ಭಾರೀ ಉತ್ತಮ ಮಾತುಗಳು ಹರಿದಾಡಿದ್ದು, ಮಹಿಳೆಯರು ನಾಮುಂದು ತಾ ಮುಂದು ಎಂದು ಲಗ್ಗೆ ಇಡುತ್ತಿದ್ದಾರೆ.

ಇಲ್ಲಿ ಯಾರು ಯಾರು ಹೋಗಬಹುದು?

ಇಲ್ಲಿ ಯಾರು ಯಾರು ಹೋಗಬಹುದು?

ಈ ಫ್ಯಾಷನ್ ಲೋಕಕ್ಕೆ ಮಹಿಳೆಯರು ಮಾತ್ರವಲ್ಲ. ಪುರುಷರು, ಮಕ್ಕಳು, ಹೀಗೆ ಎಲ್ಲರಿಗೂ ಇಷ್ಟವಾಗುವ ಅವರವರ ಬ್ರಾಂಡ್ ಎಲ್ಲ ಇಲ್ಲಿ ಲಭ್ಯವಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Makeup lovers paradise, Saphora launched in Bengaluru. Founded in 1970, Sephora is a visionary beauty-retail concept established in France and acquired in 1997 by Paris based LVMH Moet Hennessy Louis Vuitton- the world’s leading luxury products group. Yes, nude makeup is taking over.
Please Wait while comments are loading...