ಮಕರ ಸಂಕ್ರಾಂತಿ : ಬೆಂಗಳೂರಿನಲ್ಲಿನ ಕಾರ್ಯಕ್ರಮಗಳ ವಿವರ

Posted By:
Subscribe to Oneindia Kannada

ಬೆಂಗಳೂರು, ಜನವರಿ 14 : ಮಕರ ಸಂಕ್ರಾಂತಿ ಆಚರಣೆಗೆ ಎಲ್ಲರೂ ಸಿದ್ಧರಾಗುತ್ತಿದ್ದಾರೆ. ಹಬ್ಬದ ಅಂಗವಾಗಿ ಅಕ್ಕ-ಪಕ್ಕದ ಮನೆಗಳಿಗೆ ತೆರಳಿ ಎಳ್ಳು ಬೆಲ್ಲ ಹಂಚುವುದು ಸಂಪ್ರದಾಯವಾಗಿದೆ. ಎಳ್ಳಿನ ಜೊತೆಗೆ ಸಕ್ಕರೆ ಅಚ್ಚುಗಳು, ಹಣ್ಣು ಮತ್ತು ಕಬ್ಬಿನ ತುಂಡುಗಳನ್ನು ಸಹ ನೀಡಲಾಗುತ್ತದೆ.

ಉದ್ಯಾನ ನಗರಿ ಬೆಂಗಳೂರಿನಲ್ಲಿಯೂ ಸಂಕ್ರಾಂತಿಯನ್ನು ಅದ್ದೂರಿಯಾಗಿ ಆಚರಣೆ ಮಾಡಲಾಗುತ್ತದೆ. ಮಲ್ಲೇಶ್ವರದ ಹಳ್ಳಿಮನೆ ಹೋಟೆಲ್‌ನಲ್ಲಿ ಸಂಕ್ರಾಂತಿ ಹಬ್ಬದೂಟವಿರುತ್ತದೆ. ಈ ಬಾರಿ ಅವರೆ ಕಾಳು ಅಕ್ಕಿರೊಟ್ಟಿ, ಅವರೆ ಕಾಳು ಗಸಿ, ಅವರೆ ಕಾಳು ಮಸಾಲೆ ವಡೆ, ಅವರೆ ಚಿತ್ರಾನ್ನ ಹೀಗೆ ವಿಧ-ವಿಧದ ಭಕ್ಷ್ಯಗಳ ಭೋಜನವನ್ನು ಸವಿಯಬಹುದಾಗಿದೆ. [ಬೆಂಗಳೂರು: ಸಂಕ್ರಾಂತಿಗೆ ಹಳ್ಳಿಮನೆ ಹಬ್ಬದೂಟ]

ವಿವಿಧ ಸಂಘ-ಸಂಸ್ಥೆಗಳು ಸಂಕ್ರಾಂತಿ ಪ್ರಯುಕ್ತ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಿರುತ್ತವೆ. ಜನವರಿ 15ರ ಶುಕ್ರವಾರ ಬೆಂಗಳೂರಿನಲ್ಲಿ ನಡೆಯುವ ಕಾರ್ಯಕ್ರಮಗಳ ವಿವರಗಳು ಇಲ್ಲಿವೆ......[ಸ್ನೇಹ, ಪ್ರೀತಿಯ ಸಂಕೇತ ನಾಡಿನ ಮಕರ ಸಂಕ್ರಾಂತಿ]

* ಕರ್ನಾಟಕ ರಕ್ಷಣಾ ವೇದಿಕೆ ಬನಶಂಕರಿ 3ನೇ ಹಂತದಲ್ಲಿರುವ ಭುವನೇಶ್ವರಿ ನಗರದಲ್ಲಿ ಸಂಕ್ರಾಂತಿ ಸಂಭ್ರಮ ಕಾರ್ಯಕ್ರಮ ಆಯೋಜಿಸಿದೆ. ಮಹಾಲಕ್ಷ್ಮೀ ದೇವಾಲಯದಲ್ಲಿ ದಿನವಿಡೀ ಕಾರ್ಯಕ್ರಮವಿರುತ್ತದೆ. ಸಂಜೆ 5 ಗಂಟೆಗೆ ಖ್ಯಾತ ಕಲಾವಿದರಿಂದ ಜಾನಪದ ಗೀತೆ ಗಾಯನವಿರಲಿದೆ. ಸಂಜೆ 6 ಗಂಟೆಗೆ ಗಡಿಗೆ ಒಡೆಯುವ ಸ್ಪರ್ಧೆ ಏರ್ಪಡಿಸಲಾಗಿದೆ. ರಾತ್ರಿ 8 ಗಂಟೆಗೆ ಎತ್ತುಗಳಿಗೆ ಕಿಚ್ಚು ಹಾಯಿಸುವ ಕಾರ್ಯಕ್ರಮವಿದೆ.

* ಪಾರಂಪರಿಕ ಭಾರತೀಯ ಗೋ ವಂಶದ ಸಂರಕ್ಷಣೆ, ಸಂವರ್ಧನೆಗಾಗಿ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಸ್ವಾಮೀಜಿಗಳು ರೂಪಿಸಿದ ಕಾಮದುಘಾ ಯೋಜನೆಯ ವಾರ್ಷಿಕೋತ್ಸವವನ್ನು ಶುಕ್ರವಾರ ಆಚರಣೆ ಮಾಡಲಾಗುತ್ತದೆ. ಬೆಳಗ್ಗೆ 8ರಿಂದ ರಾತ್ರಿ 8 ಗಂಟೆಯ ತನಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ವಿಜಯನಗರದ ಭಾರತೀ ವಿದ್ಯಾಲಯದಲ್ಲಿ ಈ ಕಾರ್ಯಕ್ರಮಗಳು ನಡೆಯಲಿವೆ.

* ಕೆಂಗೇರಿ ಹೋಬಳಿ ನೈಸ್ ಕಾರಿಡಾರ್ ವೃತ್ತದ ಸೋಂಪುರದಲ್ಲಿ ಶುಕ್ರವಾರ ಕಡಲೆಕಾಯಿ ಪರಿಷೆ ನಡೆಯಲಿದೆ. ಶ್ರೀ ಬಸವೇಶ್ವರ ದೇವಾಲಯದ ಆವರಣದಲ್ಲಿ ಕಡೆಲೆಕಾಯಿ ಪರಿಷೆ ನಡೆಯಲಿದೆ. ಲಕ್ಷಾಂತರ ಮಂದಿ ಪರಿಷೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದ್ದು, ಬಿಎಂಟಿಸಿ ಬಸ್ ವ್ಯವಸ್ಥೆಯನ್ನು ಮಾಡಲಾಗಿದೆ. ಕೆಂಗೇರಿ ಕಡೆಯಿಂದ 224 ಎ,ಬಿ,ಸಿ,ಡಿ ಮಾರ್ಗದ ಬಸ್ಸುಗಳು ಸೋಂಪುರಕ್ಕೆ ತೆರಳಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Makara Sankranti is a major harvest festival celebrated in various parts of India. Makara sankranti 2016 will be celebrated on Friday, January 16. Here is cultural events list in Bengaluru city.
Please Wait while comments are loading...