ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನೈಸ್ ರಸ್ತೆ ಟೋಲ್ ದರ ಏರಿಕೆ, ಎಲ್ಲೆಲ್ಲಿ? ಎಷ್ಟೆಷ್ಟು?

By Mahesh
|
Google Oneindia Kannada News

ಬೆಂಗಳೂರು, ಜುಲೈ 06: ನೈಸ್‌' ಮತ್ತು 'ಬಿಇಟಿಎಲ್‌' ಕಂಪೆನಿಗಳು ಟೋಲ್‌ ದರವನ್ನು (ರಸ್ತೆ ಶುಲ್ಕ ದರ) ಜುಲೈ 1ರಿಂದಲೇ ಅನ್ವಯವಾಗುವಂತೆ ಹೆಚ್ಚಳವಾಗಿದೆ.

ನೈಸ್‌ ಆಡಳಿತ ಮಂಡಳಿ ನೈಸ್‌ ರಸ್ತೆಯ ಟೋಲ್‌ ದರಗಳನ್ನು ಶೇ10ರಿಂದ 15ರಷ್ಟು ಹೆಚ್ಚಿಸಿದೆ. ಬಿಇಟಿಎಲ್ ಶುಲ್ಕ ಶೇ 5.8 ರಿಂದ ಶೇ 33.3 ರತನಕ ಏರಿಕೆ ಕಂಡಿದೆ. ನೈಸ್ ರಸ್ತೆ- ಹೊಸೂರು ರಸ್ತೆ, ಬನ್ನೇರುಘಟ್ಟ ರಸ್ತೆ, ಮೈಸೂರು ರಸ್ತೆ, ತುಮಕೂರು ರಸ್ತೆಗಳನ್ನು ಕೂಡಿಸುತ್ತದೆ. ಬಿಇಟಿಎಲ್- ಅತ್ತಿಬೆಲೆ- ಎಲೆಕ್ಟ್ರಾನಿಕ್ ಸಿಟಿ, ನೆಲಮಂಗಲ ರಸ್ತೆಗಳಲ್ಲಿ ಟೋಲ್ ಹೊಂದಿದೆ.

ಪ್ರತಿವರ್ಷ ಶೇ 10ರಷ್ಟು ದರ ಹೆಚ್ಚಳ ಮಾಡಬಹುದು. ಆದರೂ ಕಂಪೆನಿ ನಾಲ್ಕು ವರ್ಷಗಳಿಂದ ದರ ಹೆಚ್ಚಿಸಿರಲಿಲ್ಲ. ಅಂತರರಾಷ್ಟ್ರೀಯ ಗುಣಮಟ್ಟದ ಮೂಲಸೌಕರ್ಯಗಳ ನಿರ್ವಹಣಾ ವೆಚ್ಚ ಸರಿದೂಗಿಸಲು ದರ ಹೆಚ್ಚಳ ಅನಿವಾರ್ಯ' ಎಂದು ಸಂಸ್ಥೆಗಳು ಶುಲ್ಕ ಹೆಚ್ಚಳವನ್ನು ಸಮರ್ಥಿಸಿಕೊಂಡಿವೆ.

Major tollways NICE, BETL rates in Bengaluru city hiked

ಎಲೆಕ್ಟ್ರಾನಿಕ್‌ ಸಿಟಿ ಮತ್ತು ಅತ್ತಿಬೆಲೆಯಲ್ಲಿ ಟೋಲ್‌ ಪ್ಲಾಜಾ ನಿರ್ವಹಿಸುವ 'ಬೆಂಗಳೂರು ಟೋಲ್‌ ವೇ ಪ್ರೈವೇಟ್‌ ಲಿಮಿಟೆಡ್‌' (ಬಿಇಟಿಎಲ್‌) ಎಲ್ಲ ಮಾದರಿಯ ವಾಹನಗಳ ಟೋಲ್‌ ಶುಲ್ಕವನ್ನು ಪರಿಷ್ಕರಿಸಿದೆ.

* ದ್ವಿಚಕ್ರ ವಾಹನಗಳ ಶುಲ್ಕವನ್ನು ಪ್ರತಿ ಟ್ರಿಪ್‌ ಗೆ 15 ರಿಂದ 20 ರು.ಗೆ ಹೆಚ್ಚಿಸಲಾಗಿದೆ.
* ಕಾರುಗಳ ಶುಲ್ಕವನ್ನು 65 ರು ನಿಂದ 70 ರು ಗೆ ಹೆಚ್ಚಿಸಲಾಗಿದೆ.
* ದ್ವಿಚಕ್ರ ವಾಹನಗಳ ತಿಂಗಳ ಪಾಸ್‌ ದರ 515 ರಿಂದ 545 ರು

* ಕಾರುಗಳ ದರ 1,290 ರು ನಿಂದ 1,365 ರು ಗಳಿಗೆ ಹೆಚ್ಚಳವಾಗಿವೆ.

ಬೆಂಗಳೂರು - ನೆಲಮಂಗಲ ಹೆದ್ದಾರಿಯ ಟೋಲ್ ಗಳಲ್ಲಿ ಕಾರುಗಳಿಗೆ 20 ರು, ರಿಟರ್ನ್ ಟ್ರಿಪ್ ಇದ್ದರೆ 24 ಗಂಟೆಗಳಲ್ಲಿ 30 ರು ಶುಲ್ಕ ತೆರಬೇಕಾಗುತ್ತದೆ.

English summary
Nandi Infrastructure Corridor Enterprise Ltd. (NICEL) and Bangalore Elevated Tollway Pvt. Ltd have increased the toll price. BETL toll hike ranging between 5.8% and 33.3% and NICE toll hike ranging between 10 % and 15%.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X