60 ಕೆರೆಗಳನ್ನು ಬಿಬಿಎಂಪಿಗೆ ವರ್ಗಾಯಿಸಿದ ಬಿಡಿಎ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 23: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ( ಬಿಡಿಎ) ಅರವತ್ತು ಕೆರೆಗಳನ್ನು ಹಣದ ಕೊರತೆ ಹಿನ್ನೆಲೆ ಬಿಬಿಎಂಪಿಗೆ ವರ್ಗಾಯಿಸಿದೆ.

ಈ ವರ್ಗವಾದ ಕೆರೆಗಳಲ್ಲಿ ಬೆಳಂದೂರು ಮತ್ತು ವರ್ತೂರು ಕೆರೆಗಳೂ ಸೇರಿವೆ.ಬೆಂಗಳೂರು ವಲಯಕ್ಕೆ ಸೇರುವ ಒಟ್ಟು 91 ಕೆರೆಗಳ ಅಭಿವೃದ್ದಿಗಾಗಿ ರು 2000 ಕೋಟಿಗೂ ಅಧಿಕ ಹಣ ವ್ಯಯವಾಗುತ್ತದೆ ಎಂಬ ಕಾರಣವನ್ನು ಬಿಡಿಎ ಹೇಳಿದೆ.

Maintenance of 60 B'luru lakes BDA transferred to BBMP

ವರದಿಯ ಪ್ರಕಾರ ನಾಲ್ಕು ವರ್ಷಗಳ ಹಿಂದೆ ಬಿಡಿಎಗೆ ಸೇರಿದ 117 ಕೆರೆಗಳಲ್ಲಿ 26 ಕೆರೆಗಳನ್ನು ಬಿಬಿಎಂಪಿಗೆ ವರ್ಗಾಯಿಸಲಾಗಿತ್ತು. ಈಗ ಉಳಿದ 91 ಕೆರೆಗಳಲ್ಲಿ 60 ಕೆರೆಗಳನ್ನು ಬಿಬಿಎಂಪಿಗೆ ಬಿಡಿಎ ವರ್ಗಾಯಿಸಿದೆ.[1000 ಕೋಟಿ ಮೌಲ್ಯದ 189 ಎಕರೆ ಭೂಮಿ ಒತ್ತುವರಿ ತೆರವು]

ಉಕ್ಕಿನ ಸೇತುವೆಯಂತಹ ದೊಡ್ಡ ಯೋಜನೆಗಳಿಗೆ ಕೈ ಹಾಕುವ ಬಿಡಿಎ ಕೆರೆಗಳ ನಿರ್ವಹಣೆಯಲ್ಲಿ ಹಿಂದೆ ಬೀಳುತ್ತಿರುವುದು ಸಾಮಾನ್ಯರ ಹುಬ್ಬೇರಿಸುವಂತೆ ಮಾಡಿದೆ.

ಬಿಡಿಎ ಅಧಿಕಾರಿಗಳು ಹೇಳುವ ಪ್ರಕಾರ ಅಪಾರ್ಟ್ ಮೆಂಟ್ ಗಳು, ಲೇಔಟ್ ಗಳನ್ನು ನಿರ್ಮಾಣ ಮಾಡವ ಅಭಿವೃದ್ಧಿ ಕಾರ್ಯದಲ್ಲಿ ಬಿಡಿಎ ತೊಡಗಿಕೊಂಡಿದೆ. ಹಾಗೆಯೇ ಉಕ್ಕಿನ ಸೇತುವೆ ಸಹ ಅದರಲ್ಲಿದೆ. ಆದರೆ ಕೆರೆಗಳ ನಿರ್ವಹಣೆ ಮಾಡುವುದು ಹೆಚ್ಚಿನ ಹೊರೆ ಜೊತೆಗೆ ಹೆಚ್ಚು ಹಣವೂ ಬೇಕಾಗಿರುವುದರಿಂದ ಬಿಬಿಎಂಪಿಗೆ ವರ್ಗಾವಣೆ ಮಾಡಿದೆ ಎಂದಿದ್ದಾರೆ.

ಇನ್ನು ಬಿಬಿಎಂಪಿಗೆ ಸರ್ಕಾರ ಕೊಡವ ಅನುದಾನದಲ್ಲೇ ಕೆರೆ ನಿರ್ವಹಣೆ, ಕರೆಂಟ್, ಕುಡಿಯುವ ನೀರು ಒದಗಿಸುವ ಅನೇಕ ಕೆಲಸಗಳನ್ನು ಮಾಡಬೇಕಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Bangalore Development Authority (BDA) has transferred the maintenance of as many as 60 lakes to BBMP, as the BDA maintains that it does not have sufficient money to do so.
Please Wait while comments are loading...