ಕೃಷಿ ಮೇಳದಲ್ಲಿ ವಸ್ತು ಪ್ರದರ್ಶನವೇ ಹೈಲೆಟ್

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 16 : ಇಂದು (ನವೆಂಬರ್ 16) 2017ರ ಕೃಷಿ ಮೇಳ ಉದ್ಘಾಟನೆಗೊಂಡಿದೆ. 1963 ರಲ್ಲಿ ಸಾಮಾನ್ಯ ಕ್ಷೇತ್ರೋತ್ಸವವಾಗಿ ಪ್ರಾರಂಭವಾಗಿ ನಂತರದ ವರ್ಷಗಳಲ್ಲಿ ಭಾರಿ ಸಂಖ್ಯೆಯಲ್ಲಿ ಜನರನ್ನು ತನ್ನತ್ತ ಆಕರ್ಷಿಸಿ ಕೃಷಿ ಮೇಳವಾಗಿ ಪರಿವರ್ತನೆಗೊಂಡಿರುವುದು ಸಾಧನೆಯೇ ಸರಿ.

In Pics: ಜಿಕೆವಿಕೆಯಲ್ಲಿ ಕೃಷಿ ಮೇಳದಲ್ಲಿ ಹಳ್ಳಿ ಸೊಗಡು, ಸೊಬಗು

ಆಧುನಿಕ ಕೃಷಿ ತಂತ್ರಜ್ಞಾನ, ಕೃಷಿ ಸಂಶೋಧಕರ ಸಲಹೆ, ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ರಾಜ್ಯದ ವಿವಿಧ ರೈತರನ್ನು ಒಂದೆಡೆ ಸೇರಿಸಿ ಸಂವಾದ ಸೃಷ್ಠಿಸುವುದು ಹೀಗೆ ಕೃಷಿ ಮೇಳದ ಉದ್ದೇಶಗಳ ಸಾಲು ಉದ್ದವಾಗುತ್ತಾ ಹೋಗುತ್ತದೆ.

ಕೃಷಿ ಮೇಳದಲ್ಲಿ ಮುದ್ದೆ, ಕಾಳು ಸಾರಿಗೆ ಮುಗಿಬಿದ್ದ ಜನ

ಹಿಂದಿನಂತೆ ಈ ಭಾರಿಯು ಕೃಷಿ ಪ್ರದರ್ಶನವೇ ಕೃಷಿ ಮೇಳದ ಪ್ರಮುಖ ಆಕರ್ಷಣೆ. ಸುಮಾರು 10 ಕ್ಕೂ ಹೆಚ್ಚು ವಿವಿಧ ವಿಭಾಗಗಳಲ್ಲಿ ಕೃಷಿ ಜಗತ್ತಿನ ಅನಾವರಣ ಮಡುತ್ತಿದೆ ಕೃಷಿ ಮೇಳದ ಕೃಷಿ ವಸ್ತು ಪ್ರದರ್ಶನ.

ನದಿ ನೀರು ಯಾವ ಸರ್ಕಾರದ ಸ್ವತ್ತೂ ಅಲ್ಲ : ರಾಜ್ಯಪಾಲ ವಜುಭಾಯಿ ವಾಲಾ

ಕೃಷಿಗೆ ಅವಶ್ಯಕವಾಗಿರುವ ಸಣ್ಣ ಕುಡಗೋಲಿನಿಂದ ಹಿಡಿದು ದೊಡ್ಡ ದೊಡ್ಡ ಟ್ರಾಕ್ಟರ್, ಜೆ.ಸಿ.ಬಿಗಳ ವರೆಗೂ ಕೃಷಿ ಮೇಳದಲ್ಲಿ ಪ್ರದರ್ಶನಕ್ಕಿವೆ. ಆಸಕ್ತ ರೈತರು ಅಲ್ಲಿಯೇ ಮಾಹಿತಿ ಪಡೆದು ವ್ಯಾಪಾರ ಮಾಡಿ ಮನೆಗೆ ಕೊಂಡೊಯ್ದುಬಿಡಬಹದು. ನೆನಪಿರಲಿ ಸಾಲ ಸೌಲಭ್ಯವೂ ಮೇಳದಲ್ಲಿಯೇ ದೊರಕುತ್ತದೆ.

ಟ್ರಾಕ್ಟರ್ ಏರಿ ಖುಷಿ ಪಟ್ಟ ರೈತರು

ಟ್ರಾಕ್ಟರ್ ಏರಿ ಖುಷಿ ಪಟ್ಟ ರೈತರು

ವಸ್ತುಪ್ರದರ್ಶನ ಮೇಳದಲ್ಲಿ ಅತೀ ಹೆಚ್ಚು ರೈತರನ್ನು ಆಕರ್ಷಿಸಿದ್ದು ಕೃಷಿ ಯಂತ್ರೋಪಕರಣ ಪ್ರದರ್ಶನ ಮಳಿಗೆಗಳು. ಹಲವು ಅಂತರರಾಷ್ಟ್ರೀಯ ಖ್ಯಾತಿಯ ಕಂಪೆನಿಗಳು ಮೇಳದಲ್ಲಿ ಮಳಿಗೆ ಹಾಕಿ ರೈತರಿಗೆ ಅವರೇ ಸ್ವತಃ ಪ್ರಾತ್ಯಕ್ಷಿತೆ ನೋಡುವಂತೆ ತಮ್ಮ ಯಂತ್ರಗಳನ್ನು ನೀಡಿಬಿಟ್ಟಿದ್ದವು. ರೈತರು ಟ್ರ್ಯಾಕ್ಟರ್ ಏರಿ, ಇಂಧನ ಚಾಲಿತ ಕುಂಟೆ ಚಲಾಯಿಸಿ, ಟಿಲ್ಲರ್ ಓಡಿಸಿ, ಬೆಳೆ ಕಟಾವು ಯಂತ್ರಗಳನ್ನು ಇಂಚಿಂಚೂ ಪರೀಕ್ಷಿಸಿ ನೋಡಿದರು.

ರೈತರ ಶ್ರಮವನ್ನು ಹಾಡಿ ಹೊಗಳಿದ ವಜುಭಾಯಿ ವಾಲಾ

ಬೆಲೆ ಸ್ವಲ್ಪ ಜಾಸ್ತೀನೇ

ಬೆಲೆ ಸ್ವಲ್ಪ ಜಾಸ್ತೀನೇ

ಪೈಪ್ ಮತ್ತು ಮೋಟಾರ್ ಮಳಿಗೆಗಳತ್ತಲೂ ರೈತರು ಕುತೂಹಲದ ಕಣ್ಣು ಹಾಯಿಸಿದರು. ಅದರಲ್ಲಿಯೂ ಡ್ರಿಪ್ ಇರಿಗೇಶನ್ ಪದ್ಧತಿಗೆ ಬೇಕಾದ ಪೈಪ್ ಗಳನ್ನು ಮಾರುತ್ತಿದ್ದ ಮಳಿಗೆಗಳಲ್ಲಂತೂ ರೈತರು ಅನುಮಾನಗಳನ್ನು ಕೇಳಿ, ಎಲ್ಲ ಪೈಪ್ ಗಳನ್ನು, ಸ್ಪಿಂಕ್ಲರ್ ಗಳನ್ನು ಪರೀಕ್ಷಿಸಿ ನೋಡುತ್ತಿದ್ದರು.

ಎಷ್ಟು ಅಡಿ ಬಾವಿಗೆ ಎಷ್ಟು ಎಚ್.ಪಿ ಮೋಟಾರ್ ಹಾಕದಿರೆ ಉತ್ತಮ. ಆ ಕಂಪೆನಿಯ ಮಾಟಾರಿನ ಬೆಲೆ ಎಷ್ಟು? ಇದರದ್ದೆಷ್ಟು?, ಕರೆಂಟ್ ಬಿಲ್ ಎಷ್ಟು ಬರುತ್ತೆ?, ವಾರಂಟಿ ಕೊಡ್ತೀರಾ ತಾನೆ? ಅಯ್ಯೋ ರೇಟು ಜಾಸ್ತಿ ಆಯ್ತಪ್ಪ, ರೈತರು ತಮಗೆ ಬರುವ ಅಲ್ಪ ಆದಾಯವನ್ನು ಜಾಗರೂಕತೆಯಿಂದ ತೊಡಗಿಸಲೆಂದು ಇಷ್ಟೊಂದು ಪ್ರಶ್ನೆಗಳನ್ನು ಕೇಳುತ್ತಿದುದು ಸುಲಭವಾಗಿ ಗೋಚರವಾಗುತ್ತಿತ್ತು.

ರೈತನ ಮಿತ್ರ

ರೈತನ ಮಿತ್ರ

ಪಶುಸಂಗೋಪನೆ ಪ್ರದರ್ಶನದಲ್ಲೂ ಭಾರಿ ಜನಸಮೂಹವೇ ಇತ್ತು. ರೈತ ತನ್ನ ಅನಾದಿ ಕಾಲದ ಮಿತ್ರ ಪಶುಗಳ ಬಗ್ಗೆ ಗಮನ ಕೊಡದಿದ್ದರೆ ಹೇಗೆ ಹಾಗಾಗಿಯೇ ಇಲ್ಲಿ ರೈತರು ಹೆಚ್ಚಿಗೆ ನೆರೆದಿದ್ದರು. ನಮ್ಮ ಹಸುವಿಗೆ ಏನೊ ಗಡ್ಡೆಯಾಗಿದೆ?, ಹಾಲು ಗಟ್ಟಿ ಬರ್ತಿಲ್ವಲ್ಲ ಏನ್ ಮಾಡೋದು? ಇದು ಯಾವ ತಳಿಯ ಹಸು, ರೈತರ ಪ್ರಶ್ನೆಗಳಿಗೆ ಕೊನೆಯೇ ಇರಲಿಲ್ಲ. ದೇಶದ ಬೆನ್ನೆಲುಬು ಆತ. ಆತನ ಪ್ರಶ್ನೆಗೆ ಸಮಾಧಾನವಾಗಿಯೇ ಉತ್ತರ ಕೊಡುತ್ತಿದ್ದರು ಪಶುಸಂಗೋಪನಾ ಇಲಾಖೆ ಅಧಿಕಾರಿಗಳು.

ಪಶುಸಂಗೋಪನಾ ವಿಭಾಗದಲ್ಲಿಯೇ, ಮೀನು ಸಾಕಾಣೆ, ಕುರಿ, ಕೋಳಿ, ಹಂದಿ ಸಾಕಣೆಯ ಬಗ್ಗೆಯೂ ಪ್ರಾತ್ಯಕ್ಷಿತೆ ನೀಡಲಾಗುತ್ತಿತ್ತು.

ಮಹಿಳೆಯರೇ ಹೆಚ್ಚು

ಮಹಿಳೆಯರೇ ಹೆಚ್ಚು

ಸಿರಿಧಾನ್ಯ ಮತ್ತು ಸಾವಯವ ಕೃಷಿ ಪ್ರದರ್ಶನ ಮಳಿಗೆಯಲ್ಲಿ ಮಹಿಳೆಯರೇ ಹೆಚ್ಚಿದ್ದರು. ಸಿರಿಧಾನ್ಯಗಳ ಉಪಯೋಗ, ಬೆಳೆಯುವ ವಿಧಾನ, ಮಾರುಕಟ್ಟೆ ಅವಕಾಶಗಳ ಬಗ್ಗೆ ಮಾಹಿತಿ ಪಡೆದುಕೊಂಡರು. ಅಷ್ಟಲ್ಲದೆ ಕಡಿಮೆ ಸ್ಥಳದಲ್ಲಿ ಸಾವಯವ ಕೃಷಿ ಮಾಡುವ ವಿಧಾನದ ಬಗ್ಗೆಯೂ ಅಲ್ಲಿ ಪ್ರಾತ್ಯಕ್ಷತೆ ಇತ್ತು.

ಹೆಚ್ಚು ವ್ಯಾಪಾರವಾದದ್ದು ಇಲ್ಲೇ

ಹೆಚ್ಚು ವ್ಯಾಪಾರವಾದದ್ದು ಇಲ್ಲೇ

ಕೃಷಿ ಸಲಕರಣೆಗಳು ಮತ್ತು ಪರ್ಟಿಲೈಜರ್ಸ್ ವಿಭಾಗದಲ್ಲಿ ಬಹುಶಃ ಹೆಚ್ಚು ವ್ಯಾಪಾರವಾದದ್ದು, ಕೃಷಿ ಮೇಳದಲ್ಲಿ ಊಟದ ನಂತರ ಸ್ವಲ್ಪ ಕಡಿಮೆ ದರದ ವಸ್ತುಗಳೇನಾದರು ಇದ್ದರೆ ಅವು ಕೃಷಿ ಸಲಕರಣೆಗಳೇ. ಪ್ಲಾಸ್ಟಿಕ್ ಬುಟ್ಟಿ, ಕುಡಗೋಲು, ಬಕೆಟ್, ಬುಟ್ಟಿ ಇಂತಹಾ ದಿನ ಬಳಕೆ ಕೃಷಿ ವಸ್ತುಗಳನ್ನು ರೈತರು ಖುಷಿಯಿಂದ ಕೊಂಡರು.
ಕೃಷಿ ಔಷದಿಗಳನ್ನೂ ರೈತರು ಅಂಗಡಿಯವರ ಬಳಿಯೇ ವಿಚಾರಿಸಿ ಅಳೆದು ತೂಗಿ ಕೊಂಡೊಯ್ದರು.

ಉತ್ಸಾಹವೇ ಇರಲಿಲ್ಲ ಇಲ್ಲಿ

ಉತ್ಸಾಹವೇ ಇರಲಿಲ್ಲ ಇಲ್ಲಿ

ಕೃಷಿ ವಿಶ್ವವಿದ್ಯಾಲಯ ಮತ್ತು ಸಂಸ್ಥೆಗಳು, ಸಾಲ ವಿಭಾಗ, ವಿಚಾರಣೆ ವಿಭಾಗ, ಸಲಹೆ ಮತ್ತು ಸೂಚನೆ ಈ ವಿಭಾಗಗಳಲ್ಲಿ ಜನರೇ ಇರಲಿಲ್ಲ. ಸಾಲ ವಿಭಾಗದಲ್ಲಿ ಅಲ್ಪ ಸ್ವಲ್ಪ ಜನರಿದ್ದರೂ ಸಹ ಅದು ಅತ್ಯಂತ ಕಡಿಮೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Agriculture products exhibition in Agri fest is the main attraction to people. farmers engaging them in buying, inspecting the agriculture products.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ