ರಾಜಧಾನಿ ಬೆಂಗಳೂರಲ್ಲಿ ಕರ್ನಾಟಕ ಬಂದ್ ಬಿಸಿ ಹೇಗಿತ್ತು?

Written By:
Subscribe to Oneindia Kannada

ಬೆಂಗಳೂರು, ಜುಲೈ 30: ಮಹದಾಯಿ ಮಧ್ಯಂತರ ತೀರ್ಪು ವಿರೋಧಿಸಿ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಬೆಂಗಳೂರಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ರಾಜ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಹೋರಾಟ ಇಲ್ಲಿಗೆ ನಿಲ್ಲಲ್ಲ, ನೀರು ಸಿಗುವವರೆಗೂ ಹೋರಾಟ ಮುಂದುವರಿಯಲಿದೆ. ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳದಿದ್ದರೆ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ರಾಜೀನಾಮೆ ಕೊಟ್ಟು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದರು.

ನಮ್ಮನ್ನು ನೋಡಿ ರಾಜಕಾರಣಿಗಳು ತಮಾಷೆ ಮಾಡುತ್ತಿದ್ದಾರೆ. ನಾವು ಜೋಕರ್ ಗಳಲ್ಲ. ದೆಹಲಿಗೆ ತೆರಳಿ ಹೋರಾಟ ಮುಂದುವರಿಸಬೇಕು ಎಂದು ನಟ ಶಿವರಾಜ್ ಕುಮಾರ್ ಹೇಳಿದರು.

ಬೆಳಗ್ಗೆಯಿಂದಲೇ ಬಿಎಂಟಿಸಿ ಬಸ್ ಸಂಚಾರ ಬಂದ್ ಆಗಿತ್ತು. ಶಾಲಾ ಕಾಲೇಜುಗಳು ತೆರೆದಿರಲಿಲ್ಲ. ಮೆಜೆಸ್ಟಿಕ್, ಕೆಆರ್ ಮಾರುಕಟ್ಟೆ, ಶಾಂತಿನಗರ ಬಸ್ ನಿಲ್ದಾ, ಕೆಜಿ ರಸ್ತೆ ಎಲ್ಲ ಕಡೆ ಜನ ಸಂಚಾರ ವಿರಳವಾಗಿತ್ತು.['ನೋಡಿ ಮುಸಿಮುಸಿನಗಲು ನಾವೇನು ಜೋಕರ್ ಗಳಲ್ಲ']

ಪುರಭವನದಿಂದ ಶನಿವಾರ ಬೆಳಗ್ಗೆ 11 ಗಂಟೆಗೆ ಆರಂಭವಾದ ಕನ್ನಡ ಹೋರಾಟಗಾರ ಮೆರವಣಿಗೆ 1 ಗಂಟೆಗೆ ಸ್ವಾತಂತ್ರ್ಯ ಉದ್ಯಾನ ತಲುಪಿತು ಕನ್ನಡ ಹೋರಾಟಗಾರರನ್ನು ಉದ್ದೇಶಿಸಿ ವಾಟಾಳ್ ನಾಗರಾಜ್, ಶಿವರಾಜ್ ಕುಮಾರ್, ಸಾರಾ ಗೋವಿಂದು, ನೆನಪಿರಲಿ ಪ್ರೇಮ್, ಯಶ್, ಸಾಧು ಕೋಕಿಲ ಸೇರಿದಂತೆ ಅನೇಕರು ಮಾತನಾಡಿದರು.[ನೀರಿಗಾಗಿ ಎಂಥ ಹೋರಾಟಕ್ಕೂ ಸಿದ್ಧ ಎಂದ ಕನ್ನಡ ತಾರೆಯರು]

ಬೆಂಗಳೂರಿನಲ್ಲಿ ಕರ್ನಾಟಕ ಬಂದ್ ಪರಿಣಾಮ ಹೇಗಿತ್ತು? ಚಿತ್ರಗಳಲ್ಲಿ ನೋಡಿಕೊಂಡು ಬನ್ನಿ...

ಶ್ವಾನ ಮಹಾರಾಜ

ಶ್ವಾನ ಮಹಾರಾಜ

ಬಂದ್ ನ ಯಾವ ಗೊಂದಲ-ಗೋಜಲುಗಳು ಇಲ್ಲದೇ ಕೇಂಪೇಗೌಡ ನಿಲ್ದಾಣದಲ್ಲಿ ವಿರಾಜಮಾನವಾಗಿ ಮಲಗಿದ ಶ್ವಾನ ಮಹಾರಾಜ!

 ಬಸ್ ಇಲ್ಲಣ್ಣೋ!

ಬಸ್ ಇಲ್ಲಣ್ಣೋ!

ಮೆಜೆಸ್ಟಿಕ್ ನಿಂದ ನಗರದ ವಿವಿಧೆಡೆಗೆ ತೆರಳಬೇಕಿದ್ದವರಿಗೆ ಬಸ್ ಸಿಗದ ಪರಿಣಾಮ ನಿಲ್ದಾಣದ ಕಲ್ಲು ಹಾಸಿನ ಮೇಲೆ ನಿದ್ದೆ.

ಚಿತ್ರ ಪ್ರದರ್ಶನ ಇಲ್ಲ

ಚಿತ್ರ ಪ್ರದರ್ಶನ ಇಲ್ಲ

ಮಹಾದಾಯಿ ಹೋರಾಟದ ಬಂದ್ ಗೆ ಚಿತ್ರಮಂದಿರಗಳು ಬೆಂಬಲ ನೀಡಿದ್ದವು.

ಕೆಆರ್ ಮಾರುಕಟ್ಟೆ

ಕೆಆರ್ ಮಾರುಕಟ್ಟೆ

ಬೆಂಗಳೂರಿನ ಕೆ ಆರ್ ಮಾರುಕಟ್ಟೆಯಲ್ಲಿ ಶನಿವಾರ ಮುಂಜಾನೆ ವ್ಯಾಪಾರ ವಹಿವಾಟು ಇತ್ತು. ಆದರೆ ಮಧ್ಯಾಹ್ನವಾದಂತೆ ಕನ್ನಡ ಪರ ಹೋರಾಟಗಾರರು ಅಂಗಡಿ ಬಾಗಿಲನ್ನು ಮುಚ್ಚಿಸಿದರು.

ವಾಣಿ ವಿಲಾಸ ಆಸ್ಪತ್ರೆ

ವಾಣಿ ವಿಲಾಸ ಆಸ್ಪತ್ರೆ

ಆಸ್ಪತ್ರೆ, ಔಷಧಿ ಅಂಗಡಿಗಳಿಗೆ ಬಂದ್ ನಿಂದ ವಿನಾಯಿತಿ ನೀಡಲಾಗಿತ್ತು. ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಯಲ್ಲಿ ಕಂಡು ಬಂದ ಶನಿವಾರದ ದೃಶ್ಯ,

ಕ್ರಿಕೆಟ್ ಮೈದಾನವಾದ ಮೆಜೆಸ್ಟಿಕ್

ಕ್ರಿಕೆಟ್ ಮೈದಾನವಾದ ಮೆಜೆಸ್ಟಿಕ್

ಬಂದ್ ಹಿನ್ನೆಲೆಯಲ್ಲಿ ಬಸ್ ಸಂಚಾರ ಇಲ್ಲವಾದ್ದರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣ ಕ್ರಿಕೆಟ್ ಮೈದಾನವಾಗಿ ಬದಲಾಗಿತ್ತು.

ಸಾಲುಗಟ್ಟಿ ನಿಂತ ಬಸ್ ಗಳು

ಸಾಲುಗಟ್ಟಿ ನಿಂತ ಬಸ್ ಗಳು

ಬೆಂಗಳೂರಿನಿಂದ ವಿವಿಧೆಡೆಗೆ ತರಳಬೇಕಿದ್ದ ಎಲ್ಲ ಬಸ್ ಗಳ ಸಂಚಾರ ಬಂದ್ ಆಗಿದ್ದು ಮೆಜೆಸ್ಟಿಕ್ ನಲ್ಲಿ ಸಾಲುಗಟ್ಟಿ ನಿಂತಿದ್ದವು.

ಮಾಲ್ ಗಳು ಖಾಲಿ

ಮಾಲ್ ಗಳು ಖಾಲಿ

ಕೆಜಿ ರಸ್ತೆಯ ಅಕ್ಕಪಕ್ಕದ ಮಾಲ್ ಗಳು ಬಾಗಿಲು ಮುಚ್ಚಿದ್ದವು.

ರಸ್ತೆಗೆ ವಿಶ್ರಾಂತಿ

ರಸ್ತೆಗೆ ವಿಶ್ರಾಂತಿ

ಸದಾ ವಾಹನಗಳ ಓಡಾಟದಿಂದ ತುಂಬಿರುತ್ತಿದ್ದ ಬೆಂಗಳೂರಿನ ರಸ್ತೆಗಳು ಶನಿವಾರ ಖಾಲಿ ಹೊಡೆದವು.

ಮೆಜೆಸ್ಟಿಕ್

ಮೆಜೆಸ್ಟಿಕ್

ಶನಿವಾರದ ಮೆಜೆಸ್ಟಿಕ್ ಚಿತ್ರ. ಇದಕ್ಕೆ ವಿವರಣೆ ಬೇಕಿಲ್ಲ.

ಗಾಂಧಿ ಬಝಾರ್

ಗಾಂಧಿ ಬಝಾರ್

ಸದಾ ಜನರಿಂದ ಗಿಜಿಗುಡುತ್ತಿದ್ದ ಗಾಂಧಿಬಝಾರ್ ಶನಿವಾರ ಕಂಡಿದ್ದು ಹೀಗೆ.

ವ್ಯಾಪಾರ ಇಲ್ಲಣ್ಣೋ

ವ್ಯಾಪಾರ ಇಲ್ಲಣ್ಣೋ

ಕಬ್ಬಿನ ಅಂಗಡಿ ಮಾಲೀಕರೊಬ್ಬರು ವ್ಯಾಪಾರವಿಲ್ಲದೇ ತಲೆ ಮೇಲೆ ಕೈ ಹೊತ್ತು ಕುಳಿತ ದೃಶ್ಯ.

ಮೆಟ್ರೋ ಬಂದ್

ಮೆಟ್ರೋ ಬಂದ್

ಮೆಟ್ರೋ ಸಂಚಾರ ಸಹ ಶನಿವಾರ ಬಂದ್ ಆಗಿತ್ತು. ಕುವೆಂಪು ರಸ್ತೆ ನಿಲ್ದಾಣದ ದೃಶ್ಯ.

 ಅವೆನ್ಯೂ ರಸ್ತೆ

ಅವೆನ್ಯೂ ರಸ್ತೆ

ವ್ಯಾಪಾರ ವಹಿವಾಟಿನ ಕೇಂದ್ರ ಅವೆನ್ಯೂ ರಸ್ತೆಯಲ್ಲಿ ಜನ ಸಂಚಾರ ವಿರಳವಾಗಿತ್ತು.

ಕೆಎಸ್ ಆರ್ ಟಿಸಿ ಸಿಬ್ಬಂದಿ

ಕೆಎಸ್ ಆರ್ ಟಿಸಿ ಸಿಬ್ಬಂದಿ

ಮುಷ್ಕರ ಮಾಡಿ ನಿನ್ನೆ ತಾನೇ ಕೆಲಸ ಆರಂಭಿಸಿದ್ದ ಕೆಎಸ್ ಆರ್ ಟಿಸಿ ಸಿಬ್ಬಂದಿ ಶನಿವಾರ ಮೆಜೆಸ್ಟಿಕ್ ನಿಲ್ದಾಣದಲ್ಲಿ ದಿನಪತ್ರಿಕೆ ಓದುವುದರಲ್ಲಿ ನಿರತರಾಗಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
There was a mixed response to the bandh (strike) call given by pro-Kannada activists and the Karnataka Film Chamber of Commerce to protest the interim verdict of the Mayadeyi Water Dispute Tribunal. While the bandh was total in Bengaluru and some parts of North Karnataka, other parts witnessed a lukewarm response. In Bengaluru, the capital of Karnataka, protestors took out a march and also forced shops to shut down.
Please Wait while comments are loading...