ಬೆಂಗಳೂರಿನಲ್ಲಿ ರೈತರ ಪ್ರತಿಭಟನಾ ಪಾದಯಾತ್ರೆ: ಟ್ರಾಫಿಕ್ ಜಾಮ್

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 27 : ಮಹಾದಾಯಿ, ಕಳಸಾ-ಬಂಡೂರಿ ಇತ್ಯರ್ಥಕ್ಕಾಗಿ ಉತ್ತರ ಕರ್ನಾಟಕ ಹೊತ್ತಿ ಉರಿಯುತ್ತಿದೆ. ಇದರ ಕಾವು ಬೆಂಗಳೂರನ್ನೂ ತಾಕಿದೆ. ಬಿಜೆಪಿ ಕಚೇರಿಯಿಂದ ರಾಜಭವನದ ವರೆಗೆ ರೈತರು ಪಾದಯಾತ್ರೆ ಹೊರಟಿದ್ದಾರೆ. ಇದರಿಂದ ನಗರದ ವಿವಿಧ ಕಡೆ ಸಂಚಾರ ದಟ್ಟಣೆ ಉಂಟಾಗಿದೆ.

Live: ಬೆಂಗಳೂರಿನಲ್ಲಿ ಮಹದಾಯಿ ಕಿಚ್ಚು: ರಾಜಭವನದತ್ತ ರೈತರು

ನಗರದ ಮಲ್ಲೇಶ್ವಂ, ಮಂತ್ರಿ ಮಾಲ್, ಕ್ವೀನ್ಸ್ ರಸ್ತೆ, ವಿಧಾನಸೌಧ, ಚಾಲುಕ್ಯ ವೃತ್ತ, ಶಿವಾನಂದ ವೃತ್ತ, ಫ್ರೀಡಂ ಪಾರ್ಕ್, ಟೌನ್ ಹಾಲ್ ಬಳಿ, ಕಬ್ಬನ್ ಪಾರ್ಕ್ , ಶಿವಾಜಿನಗರ, ಮೇಕ್ರಿ ಸರ್ಕಲ್ ಬಳಿ ತೀವ್ರ ಸಂಚಾರ ದಟ್ಟಣೆ ಉಂಟಾಗಿದೆ. ಮಹಿಳೆಯರು, ಮಕ್ಕಳು ಸೇರಿದಂತೆ ನೂರಾರು ಮಹದಾಯಿ ರೈತರ ಜಾಥಾ ಮಲ್ಲೇಶ್ವರಂನಿಂದ ಚಾಲುಕ್ಯ ಸರ್ಕಲ್ ಮೂಲಕ ರಾಜಭವನಕ್ಕೆ ಹೊರಟಿದೆ.

Mahadayi rally hits Bengaluru traffic

ಜಾಥಾದಲ್ಲಿ ಸಾಹಿತಿ ದೇವನೂರು ಮಹಾದೇವ ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು ಸಾಥ್ ನೀಡಿವೆ. ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಅವರ ನೇತೃತ್ವದ ರೈತರು ಬಿಜೆಪಿ ಕಚೇರಿಯಿಂದ ರಾಜಭವನದತ್ತ ಪಾದಯಾತ್ರೆ ಹೊರಟಿದ್ದಾರೆ.

ಮಹಾದಾಯಿ ವಿಷಯದಲ್ಲಿ ಯಾವುದೇ ರಾಜಿಯಿಲ್ಲ: ಗೋವಾ ಸಚಿವ ವಿನೋದ್ ಸಂದರ್ಶನ

ಜಾತಾದಿಂದ ಟ್ರಾಫಿಕ್ ಸಮಸ್ಯೆ ಉಲ್ಬಣಿಸುತ್ತದೆ ಎಂದು ವಾಹನದ ಮೂಲಕ ತೆರಳುವಂತೆ ರೈತರಿಗೆ ಪೊಲೀಸ್ ಅಧಿಕಾರಿಗಳು ಮನವಿ ಮಾಡಿದರು. ಆದರೆ, ಇದಕ್ಕೆ ಪ್ರತ್ಯುತ್ತರ ಎನ್ನದ ರೈತರು ಪಾದಯಾತ್ರೆ ಮೂಲಕ ರಾಜಭವನದತ್ತ ಹೆಜ್ಜೆ ಹಾಕಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While hundreds of Farmers taken out rally for Mahadayi issue from BJP office to Rajbhavan hit Bengaluru traffic in various places.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ