ವಚನಭ್ರಷ್ಟ ಯಡಿಯೂರಪ್ಪ, ಆತನ ವಂಶ ನಿರ್ವಂಶ ಆಗಲಿ: ರೈತರ ಆಕ್ರೋಶ

Posted By:
Subscribe to Oneindia Kannada
   ಬೆಂಗಳೂರಿನಲ್ಲಿ ಮಹದಾಯಿ ಪ್ರತಿಭಟನೆ : ಯಡಿಯೂರಪ್ಪ ವಿರುದ್ಧ ರೈತರು ಆಕ್ರೋಶ | Oneindia Kannada

   ಬೆಂಗಳೂರು, ಡಿಸೆಂಬರ್ 26: ಕಳೆದ ನಾಲ್ಕು ದಿನಗಳಿಂದ ಬೆಂಗಳೂರು ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿದ್ದ ಮಹದಾಯಿ ಹೋರಾಟದ ಸ್ಥಳಕ್ಕೆ ಕೊನೆಗೂ ಬಿ ಎಸ್ ಯಡಿಯೂರಪ್ಪ ಭೇಟಿ ನೀಡಿದ್ದು, ಸಂಧಾನ ಸಭೆ ವಿಫಲವಾಗಿದೆ. ಮಹದಾಯಿ ಹೋರಾಟಗಾರರ ಮನವೊಲಿಸಲು ಯಡಿಯೂರಪ್ಪ ಸರ್ಕಸ್ ನಡೆಸಿದರೂ ಪ್ರಯೋಜನಾವಾಗಿಲ್ಲ.

   ಮಹದಾಯಿ ವಿವಾದ : ಸಭೆಯಲ್ಲಿ ಭಾವುಕರಾದ ಯಡಿಯೂರಪ್ಪ

   ಈ ಬಗ್ಗೆ ಮಾತನಾಡಿದ ಮಹದಾಯಿ ಹೋರಾಟ ಸಮಿತಿ ಅಧ್ಯಕ್ಷ ವೀರೇಶ್ ಸೊಬರದಮಠ, "ಬಿ ಎಸ್ ಯಡಿಯೂರಪ್ಪ ವಚನ ಭ್ರಷ್ಟಾರಾಗಿದ್ದಾರೆ. ಮಾತನ್ನು ಉಳಿಸಿಕೊಳ್ಳಲು ಯಡಿಯೂರಪ್ಪಗೆ ಸಾಧ್ಯವಾಗಿಲ್ಲ, ಆತನ ವಂಶ ನಿರ್ವಂಶ ಆಗಲಿ" ಎಂದು ಆಕ್ರೋಶ ವ್ಯಕ್ತಪಡಿಸಿದರು.

   Mahadayi protesters decide to continue agitation overnight at BJP office in Malleswaram

   ನಾನು ಗೋವಾ ಸಿಎಂ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಜೊತೆ ಮಾತನಾಡಿ ಮಹದಾಯಿ ಸಮಸ್ಯೆಯನ್ನು ಸಂಪೂರ್ಣವಾಗಿ ಇತ್ಯಾರ್ಥಗೊಳಿಸುವುದಾಗಿ ಹೇಳಿದ್ದ ಯಡಿಯೂರಪ್ಪ ಇದೀಗ ಹೇಳಿಲ್ಲ ಎನ್ನುತ್ತಿದ್ದಾರೆ. ಬಿಎಸ್ ವೈ ವಚನ ಭ್ರಷ್ಟಾರಾಗಿದ್ದಾರೆ ಎಂದು ವೀರೇಶ್ ಸೊಬರದಮಠ ವಾಗ್ದಾಳಿ ನಡೆಸಿದರು.

   ತೀವ್ರ ರಾಜಕೀಯ ಸ್ವರೂಪ ಪಡೆಯುತ್ತಿರುವ ಮಹದಾಯಿ

   ಯಡಿಯೂರಪ್ಪ ಅವರ ಮಾತಿಗೆ ಬಗ್ಗದ ರೈತರು ಬಿಜೆಪಿ ಕಚೇರಿ ಮುಂದೆಯೇ ಅಹೋರಾತ್ರಿ ಧರಣಿ ಮಾಡುವುದಾಗಿ ವೀರೇಶ್ ಸೊಬರದಮಠ ಹೇಳಿದರು.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Mahadayi protesters decide to continue agitation overnight. Prtoests to continue in front of BJP office in Malleswaram Bengaluru. Decision comes in the wake of BS Yeddyurappa failed talks with the agitated protesters.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ