5 ದಿನಗಳ ಪ್ರತಿಭಟನೆ ಅಂತ್ಯ, ತವರಿನತ್ತ ಮಹದಾಯಿ ಹೋರಾಟಗಾರರು

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 27: ಮಹದಾಯಿ ಸಮಸ್ಯೆಯನ್ನು ಬಗೆಹರಿಸಬೇಕೆಂದು ಬೆಂಗಳೂರಿನಲ್ಲಿ ಕಳೆದ ಐದು ದಿನಗಳಿಂದ ಮಹದಾಯಿ ಹೋರಾಟಗಾರರು ನಡೆಸುತ್ತಿದ್ದ ಪ್ರತಿಭಟನೆಯನ್ನು ಇಂದಿಗೆ (ಡಿ.27) ಅಂತ್ಯಗೊಳಿಸಿ, ತವರಿಗೆ ಹೊರಡಲು ನಿರ್ಧರಿಸಿದ್ದಾರೆ.

ಬೆಂಗಳೂರಿನಲ್ಲಿ ಮಹದಾಯಿ ಕಿಚ್ಚು: HDDಗೆ ಮನವಿ ಸಲ್ಲಿಸಿದ ರೈತರು

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಮಹದಾಯಿ ಸಮಸ್ಯೆಯನ್ನು ಪರಿಹರಿಸುವುದಾಗಿ ಹೇಳಿ ಮಾತು ತಪ್ಪಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿ 400ಕ್ಕೂ ಅಧಿಕ ರೈತರು ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಿಂದ ಆಗಮಿಸಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಕಳೆದ 5 ದಿನಗಳ ವರೆಗೆ ಧರಣಿ ಕುಳಿತ್ತಿದ್ದರು.

 Mahadayi issue: Farmers withdraw protest in Bengaluru after 5 days

ನಾಲ್ಕನೇ ದಿನದಂದು ಧರಣಿ ಸ್ಥಳಕ್ಕೆ ಯಡಿಯೂರಪ್ಪ ಆಗಮಿಸಬೇಕೆಂದು ಮಹದಾಯಿ ಹೋರಾಟ ಸಮಿತಿಯ ಅಧ್ಯಕ್ಷ ವೀರೇಶ್ ಸೊಬರದಮಠ ಅವರ ನೇತೃತ್ವದಲ್ಲಿ ಬಿಜೆಪಿ ಕಚೇರಿ ಮುಂದೆ ಧರಣಿ ನಡೆಸಿದ್ದರು.

ನನ್ನ ಪ್ರಯತ್ನ ನಾನು ಮಾಡಿದ್ದೇನೆ ಈಗ ಸಿದ್ದರಾಮಯ್ಯ ಅವರು ಮಾಡಬೇಕು ಎಂದು ಅಸಡ್ಡೆ ಮಾತುಗಳನ್ನು ಆಡಿದ್ದರು. ಇದರಿಂದ ಆಕ್ರೋಶಗೊಂಡ ರೈತರು ಯಡಿಯೂರಪ್ಪ ನಡೆಗೆ ಆಕ್ರೋಶ ವ್ಯಕ್ತಪಡಿಸಿ, ಐದನೇ ದಿನ ಇಂದು (ಬುಧವಾರ) ರಾಜಭವನ, ರಾಜ್ಯ ಚುನಾವಣೆ ಆಯೋಗ ಕಚೇರಿ, ಸಿಎಂ ನಿವಾಸ ಹಾಗೂ ಮಾಜಿ ಪ್ರಧಾನಿ ದೇವೇಗೌಡ ಅವರ ನಿವಾಸಕ್ಕೆ ಪಾದಯಾತ್ರೆ ಮೂಲಕ ತೆರಳಿ ಸಮಸ್ಯಗೆ ಸ್ಪಂದಿಸುವಂತೆ ಮನವಿ ಮಾಡಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mahadayi issue: Farmers withdraw protest in Bengaluru. The farmers have decided to return to their home towns after 5 days of protest in BJP office Bengaluru.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ