ಮಹದಾಯಿಗಾಗಿ ಆಗ್ರಹಿಸಿ ಸಂಸದರ ಮನೆ ಮುಂದೆ ಎಎಪಿ ಧರಣಿ

Posted By:
Subscribe to Oneindia Kannada

ಉತ್ತರ ಕರ್ನಾಟಕ ಭಾಗದ ಜನರ ಕುಡಿಯುವ ನೀರಿನ ದಶಕಗಳ ಒತ್ತಾಸೆಯ ಆಶಾಕಿರಣವಾಗಿರುವ ಮಹಾದಾಯಿ ಯೋಜನೆಯು ಕರ್ನಾಟಕದ ಜನಪ್ರತಿನಿಧಿಗಳ ಬೇಜವಾಬ್ದಾರಿತನದಿಂದಾಗಿ ಕೈತಪ್ಪುವ ಹಂತದಲ್ಲಿದ್ದು, ಈ ಕುರಿತು ರಾಜ್ಯದ ಸಂಸದರು ತತಕ್ಷಣವಾಗಿ ಈ ವಿಷಯದಲ್ಲಿ ತಮ್ಮ ಜವಾಬ್ದಾರಿ ಪ್ರದರ್ಶಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಇಂದು ಎಲ್ಲಾ ಸಂಸದರಿಗೆ ವಿನಂತಿಸಿಕೊಳ್ಳುತ್ತದೆ.

ಇಂದು ರಾಜ್ಯಾದ್ಯಂತ ನಡೆದ ಪ್ರತಿಭಟನೆಯಲ್ಲಿ, ಆಮ್ ಆದ್ಮಿ ಪಾರ್ಟಿ-ಕರ್ನಾಟಕದ ಕಾರ್ಯಕರ್ತರು ಎಲ್ಲಾ 28 ಸಂಸದರ ಮನೆ ಮುಂದೆ ಮೌನ ಪ್ರತಿಭಟನೆ ನಡೆಸಿ, ಮಹಾದಾಯಿ ನದಿ ವಿವಾದದಲ್ಲಿ ಪ್ರಧಾನಮಂತ್ರಿಗಳ ಮಧ್ಯಪ್ರವೇಶಕ್ಕೆ ಒತ್ತಾಯಿಸಬೇಕೆಂದು ಮನವಿ ಪತ್ರವನ್ನು ಸಲ್ಲಿಸಿದರು. [ಗ್ಯಾಲರಿ: ಮಹದಾಯಿ ತೀರ್ಪು ಖಂಡಿಸಿ ರೈತರ ಆಕ್ರೋಶ]

ಇಡೀ ಮುಂಬೈ ಕರ್ನಾಟಕ ಭಾಗವೇ ಮಹಾದಾಯಿ ಕಿಚ್ಚಿನಿಂದ ಹೊತ್ತಿ ಉರಿಯುತ್ತಿರುವ ಸಂಧರ್ಭದಲ್ಲಿ, ನಮ್ಮ ರಾಜ್ಯದಿಂದ ಕೇಂದ್ರಕ್ಕೆ ಆಯ್ಕೆಯಾಗಿರುವ 28 ಸಂಸದರು ಪ್ರಧಾನ ಮಂತ್ರಿಗಳೊಡನೆ ಚರ್ಚಿಸಿ, ವಿನಂತಿಸಿಯೋ ಅಥವಾ ಒತ್ತಡ ಹೇರಿಯೋ ಅಥವಾ ರಾಜೀನಾಮೆಯ ಅಸ್ತ್ರ ಹಿಡಿದೋ ನ್ಯಾಯಾಧೀಕರಣದ ಹೊರಗೆ ಇದನ್ನು ಇತ್ಯರ್ಥಗೊಳಿಸುವಂತೆ ಪ್ರಯತ್ನಿಸಬಹುದಿತ್ತು. [ಮಹದಾಯಿ ನೀರು ಹಂಚಿಕೆ : ಕಥೆ ವ್ಯಥೆ ಟೈಮ್ ಲೈನ್]

ಆದರೆ ನಮ್ಮ ರಾಜ್ಯದ ಸಂಸದರು ಇದಕ್ಕೆ ಯತ್ನಿಸದಿರುವುದು ಖಂಡನೀಯ. ಈಗಲಾದರೂ ಸಂಸದರು ಎಚ್ಚೆತ್ತು ತಮ್ಮ ಕರ್ತವ್ಯ ನಿರ್ವಹಿಸಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ರಾಜ್ಯ ಎಲ್ಲಾ 28 ಸಂಸದರಿಗೆ ಆಗ್ರಹಿಸಿದೆ.

ಕರ್ನಾಟಕದ ಜನತೆ ಮುಂದೆ ಎರಡು ಆಯ್ಕೆಯಿದೆ

ಕರ್ನಾಟಕದ ಜನತೆ ಮುಂದೆ ಎರಡು ಆಯ್ಕೆಯಿದೆ

ಮಹಾದಾಯಿ ವಿಷಯ ಇತ್ಯರ್ಥವಾಗಬೇಕೆಂದರೆ, ಕರ್ನಾಟಕದ ಜನತೆ ಮುಂದೆ ಎರಡು ಆಯ್ಕೆಯಿದೆ. ಒಂದು, ಮಹಾದಾಯಿ ನ್ಯಾಯಾಧಿಕರಣದಲ್ಲಿ ಪ್ರಕರಣ ಇತ್ಯರ್ಥಕ್ಕೆ ಕಾಯುವುದು ಅಥವಾ ಈ ಪ್ರಕರಣದಲ್ಲಿ ಪ್ರಧಾನ ಮಂತ್ರಿಗಳ ಮಧ್ಯಸ್ಥಿಕೆ ವಹಿಸಿ ವಿವಾದವನ್ನು ಇತ್ಯರ್ಥಗೊಳಿಸುವುದು.

ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ಸಾಧ್ಯತೆ ಕಡಿಮೆ

ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ಸಾಧ್ಯತೆ ಕಡಿಮೆ

ಸದ್ಯದ ಪರಿಸ್ಥಿತಿಯನ್ನು ನೋಡುತ್ತಿದ್ದರೆ, ಪ್ರಧಾನಮಂತ್ರಿಗಳು ಮಧ್ಯಸ್ಥಿಕೆ ವಹಿಸಿ ಗೋವಾ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಧ್ಯೆ ಮಾತುಕತೆ ಮೂಲಕ ವಿವಾದದ ಇತ್ಯರ್ಥಕ್ಕೆ ಪ್ರಯತ್ನಿಸಿದರೆ, ಮಹಾದಾಯಿ ಯೋಜನೆಗೆ ತೊಡಕು ಆದಷ್ಟು ಬೇಗ ನಿವಾರಣೆಯಾಗುವ ಸಾಧ್ಯತೆಯಿದೆ.

ಪ್ರಧಾನಿಗಳ ಮೇಲೆ ಒತ್ತಡ ತರಬೇಕು

ಪ್ರಧಾನಿಗಳ ಮೇಲೆ ಒತ್ತಡ ತರಬೇಕು

ಆದ್ದರಿಂದ ರಾಜ್ಯದ 28 ಜನ ಸಂಸದರು, ಒಂದು ವಾರದೊಳಗೆ ಪಕ್ಷಬೇಧ ಮರೆತು ಸಾಮೂಹಿಕವಾಗಿ ಪ್ರಧಾನಿಗಳ ಮೇಲೆ ಒತ್ತಡ ತಂದು ಮಹಾದಾಯಿ ವಿಷಯದಲ್ಲಿ ಮಧ್ಯಪ್ರವೇಶಿಸುವಂತೆ, ಕರ್ನಾಟಕಕ್ಕೆ ನ್ಯಾಯ ದೊರಕಿಸುವಂತೆ ಒತ್ತಡ ಹೇರಬೇಕಿದೆ.

ರಾಜೀನಾಮೆ ನೀಡುವ ಬೆದರಿಕೆಯನ್ನಾದರೂ ಒಡ್ಡಿ

ರಾಜೀನಾಮೆ ನೀಡುವ ಬೆದರಿಕೆಯನ್ನಾದರೂ ಒಡ್ಡಿ

ಒಂದು ವಾರದೊಳಗೆ ಈ ಕ್ರಮದಲ್ಲಿ ಸಫಲವಾಗದಿದ್ದಲಿ ಎಲ್ಲಾ 28 ಸಂಸದರು ತಮ್ಮ ರಾಜೀನಾಮೆ ನೀಡಿ ಅವರ ಮೇಲೆ ಒತ್ತಡವನ್ನು ತೀವ್ರಗೊಳಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ ಆಗ್ರಹಿಸುತ್ತದೆ.

ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ

ರಾಜಕೀಯ ನಿವೃತ್ತಿ ತೆಗೆದುಕೊಳ್ಳಿ

ಜನಪರ ಕೆಲಸ ಮಾಡಲು, ಜನರ ಕೂಗಿಗೆ ಸ್ಪಂದಿಸಲು ನಿಮಗೆ ಆಗದಿದ್ದಲ್ಲಿ, ತಮ್ಮನ್ನು ತಾವು ಅಸಮರ್ಥರೆಂದು ಪರಿಗಣಿಸಿ ರಾಜಕೀಯ ನಿವೃತ್ತಿ ತೆಗೆದುಕೊಳ್ಳಬೇಕೆಂದು ಆಮ್ ಆದ್ಮಿ ಪಾರ್ಟಿ-ಕರ್ನಾಟಕ, ರಾಜ್ಯದ ಎಲ್ಲಾ ಜನಪ್ರತಿಧಿಗಳಿಗೆ ಈ ಮೂಲಕ ಆಗ್ರಹಿಸಿದೆ.

ಒಂದು ವೇಳೆ ಈ ನಂತರವೂ ಸಂಸದರು ತಮ್ಮ ಕರ್ತವ್ಯ ಲೋಪವನ್ನು ಮುಂದುವರೆಸಿದರೆ, ಆಮ್ ಆದ್ಮಿ ಪಾರ್ಟಿ-ಕರ್ನಾಟಕ ರಾಜ್ಯದ ಎಲ್ಲಾ ಜನರೊಂದಿಗೆ ಸೇರಿ ನಿಮ್ಮ ವಿರುದ್ಧ ಉಗ್ರ ಹೋರಾಟಕ್ಕೆ ಇಳಿಯುವುದಾಗಿಯೂ ಇಂದು ಎಚ್ಚರಿಕೆ ನೀಡಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mahadayi Dispute: AAP Karnataka members today(August 3) protested in front of house and Office of 28 MPs and demanded them to raise their voices in the parliament.
Please Wait while comments are loading...