ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ಮಶಾನದಲ್ಲಿ ಶಿವರಾತ್ರಿ ಆಚರಿಸುತ್ತಿರುವ ಯುವಾ ಬ್ರಿಗೆಡ್

|
Google Oneindia Kannada News

ಬೆಂಗಳೂರು, ಫೆಬ್ರವರಿ 13: ದೇಶದಾದ್ಯಂತ ಇಂದು(ಫೆ.13) ಮಹಾ ಶಿವರಾತ್ರಿಯ ಸಂಭ್ರಮ ಮನೆ ಮಾಡಿದೆ. ಮಸಣವಾಸಿಯಾದ ಶಿವನನ್ನು ಆರಾಧಿಸಲು ಯುವಾ ಬ್ರಿಗೇಡ್ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡಿದೆ.

ಫೆ.13 ಮಂಗಳವಾರದಂದು ರಾಜಾಜಿನಗರದ ಹರಿಶ್ಚಂದ್ರ ಘಾಟ್ ಸ್ಮಶಾನದಲ್ಲಿ ಅಪರಾಹ್ನ 4 ಗಂಟೆಗೆ 'ವೀರಬಾಹು' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಪ್ರಖರ ವಾಗ್ಮಿ, ಯುವಾ ಬ್ರಿಗೆಡ್ ಮುಖ್ಯಸ್ಥ ಚಕ್ರವರ್ತಿ ಸೂಲಿಬೆಲೆ ಅವರ ಮಾರ್ಗದರ್ಶನದಲ್ಲಿ ಕಾರ್ಯಕ್ರಮ ನಡೆಯಲಿದೆ.

Maha Shivaratri in cemetery: Yuva Brigade's different programme

ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?ಅಭಿಷೇಕ ಪ್ರಿಯನಾದ ಶಿವನನ್ನು ಹೇಗೆ ಪೂಜಿಸಿದರೆ ಶ್ರೇಷ್ಠ?

ಶಿವ ಸ್ಮಶಾನವಾಸಿ. ನಮ್ಮ ಬದುಕಿನ ಯಾತ್ರೆಯ ಆರಂಭಕ್ಕೆ ಅವನೇ ಕಾರಣ. ಹೀಗಾಗಿ ಅಂತ್ಯವು ಕೂಡ ಅವನೊಳಗೇ. ಹಾಗೆಂದೇ ಸ್ಮಶಾನ ಯಾತ್ರೆ ಅತ್ಯಂತ ಮಹತ್ವವಾದದ್ದು. ನಮ್ಮೊಳಗಿನ ಭಯವನ್ನು ತೆಗೆದುಹಾಕುವಂತದ್ದು. ಅದಕ್ಕೆಂದೇ ಈ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವಾ ಬ್ರಿಗೇಡ್ ತಿಳಿಸಿದೆ.

Maha Shivaratri in cemetery: Yuva Brigade's different programme

ಕಾರ್ಯಕ್ರಮದಲ್ಲಿ ಏನೆಲ್ಲ ಇರಲಿದೆ...?

* ಅಂದು ಬೆಳಿಗ್ಗೆ ಶಿವನ ದೇವಸ್ಥಾನಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಶಿವನ ಆರಾಧಕರಾದ್ದರಿಂದ ಅವರು ಗೋಭಕ್ತರು ಆಗಿರುತ್ತಾರೆ ಆ ಮಂದಿರಗಳ ಹೊರಗೆ ನಿಂತು ಗೋವನ್ನ ಉಳಿಸುವ ಅಭಯಾಕ್ಷರ ಸಹಿಸಂಗ್ರಹಿಸಿ ಯಾವೊಬ್ಬ ಶಿವಭಕ್ತನೂ ಗೋರಕ್ಷಣೆಯ ಸಂಕಲ್ಪದಿಂದ ಹೊರಗಿಲ್ಲದಂತೆ ಮಾಡುವುದು.
* ಸಂಜೆ ಸುಮಾರು ನಾಲ್ಕು ಗಂಟೆಯ ವೇಳೆಗೆ ಆಯ್ಕೆಮಾಡಿದ ಸ್ಮಶಾನದಲ್ಲಿ ಸ್ವಚ್ಛತಾ ಕಾರ್ಯ.

* ಸ್ವಚ್ಛತಾ ಕಾರ್ಯ ನಂತರ ಶಿವ ಪಟವನ್ನಿಟ್ಟು ಪೂಜೆ, ಭಜನೆ, ಸಾಧ್ಯವಾದರೆ ರುದ್ರಪಠಣದಂತ ಕಾರ್ಯಕ್ರಮ, ಉಪನ್ಯಾಸ, ವೀರಬಅಹುವಿಗೆ ನೃತ್ಯ, ಪ್ರಸಾದ ವಿತರಣೆ. ಪೂಜೆ ಮುಗಿಸಿ ಭಕ್ತರು ಮನೆಗೆ ಹೊರಡಬಹುದು. ಅಥವಾ ಯಾವುದಾದರು ಮಂದಿರದ ಹೊರಗೆ ಅಭಯಾಕ್ಷರದ ಸಂಗ್ರಹಕ್ಕೆ ನಿಲ್ಲಬಹುದು.

English summary
Yuva Brigade an organisation with writer Chakravarti Sulibele's guidance has organised a different programme to celebrate Maha Shivaratri on Feb 13th. Shiva bhakts will be celebrate this auspicious festival in Harishchandra Ghat, a cemetery in Rajajinagar, Bengaluru at 4 pm.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X