'ಮಾಗಡಿಯಲ್ಲಿ ಬಾಲಕೃಷ್ಣ ವಿರುದ್ಧ ಜೆಡಿಎಸ್ ನಿಂದ ಎ ಮಂಜು ಕಣಕ್ಕೆ'

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 10 : ಮಾಗಡಿ ಜಿಲ್ಲಾ ಪಂಚಾಯಿತಿ ಸದಸ್ಯ ಎ. ಮಂಜು (ಮಂಜುನಾಥ್‌) ಕಾಂಗ್ರೆಸ್ ತೊರೆದು ಅಧಿಕೃತವಾಗಿ ಶುಕ್ರವಾರ ಜೆಡಿಎಸ್ ಗೆ ಸೇರಿದರು.

ಮಾಗಡಿಯಲ್ಲಿ ಕಾಂಗ್ರೆಸ್ ಗೆ ಟಾಂಗ್ ನೀಡಿದ ಜೆಡಿಎಸ್, ಎ.ಮಂಜುಗೆ ಗಾಳ

ಬೆಂಗಳೂರಿನ ಶೇಷಾದ್ರಪುರಂನಲ್ಲಿರುವ ಜೆಡಿಎಸ್ ನ ಜೆಪಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಎಚ್. ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಎ. ಮಂಜು ಜೆಡಿಎಸ್ ಗೆ ಸೇರ್ಪಡೆಯಾದರು.

Magadi Congress ZP member A Manju Joined JDS today at JP Bhavan Bengaluru

ಈ ವೇಳೆ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, "ಜೆಡಿಎಸ್ ಅಮಾನತು ಶಾಸಕ ಮಾಗಡಿ ಬಾಲಕೃಷ್ಣ ವಿರುದ್ಧ ಜೆಡಿಎಸ್ ನಿಂದ ಈ ಬಾರಿ ಎ.ಮಂಜುನಾಥ್ (ಎ.ಮಂಜು) ಸ್ಪರ್ಧೆ ಮಾಡಲಿದ್ದಾರೆ" ಎಂದು ಘೋಷಿಸಿದರು.

ಮಂಜು ಕಾಂಗ್ರೆಸ್ ತೊರೆದು ಇಂದು ಜೆಡಿಎಸ್ ಸೇರಿದ್ದಾರೆ. ಮಾಗಡಿಯಲ್ಲಿ ಎ.ಮಂಜುನಾಥ್ ಬೃಹತ್ ಸಮಾವೇಶ ನಡೆಸಲಿದ್ದಾರೆ ಎಂದರು.

ಕೈ ಪಾಳಯಕ್ಕೆ ಜಿಗಿದಿರುವ ಜೆಡಿಎಸ್ ಭಿನ್ನಮತೀಯ ಶಾಸಕ ಬಾಲಕೃಷ್ಣ ಅವರಿಗೆ ಸೆಡ್ಡು ಹೊಡೆಯಲು ಕಾಂಗ್ರೆಸ್ ನ ಜಿಲ್ಲಾ ಪಂಚಾಯಿತಿ ಸದಸ್ಯ ಎ.ಮಂಜು ಅವರನ್ನು ಜೆಡಿಎಸ್ ಸೆಳೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Magadi Congress ZP member A Manju Joined JDS today at JP Bhavan Bengaluru. A Manju is th JDS Candidate of 2018 assembly election JDS state president HD Kumaraswamy announced today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ