ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೀವವೈವಿಧ್ಯ ಉದ್ಯಾನವಾಗಿ ಮಾರ್ಪಾಡಾದ ಮಡಿವಾಳ ಕೆರೆ ಪ್ರದೇಶ

By Nayana
|
Google Oneindia Kannada News

ಬೆಂಗಳೂರು, ಜೂನ್‌ 25: ನಗರದ ಮಡಿವಾಳ ಕೆರೆ ಪರಿಸರದಲ್ಲಿ ಜೀವವೈವಿದ್ಯ ಉದ್ಯಾನ ನಿರ್ಮಾಣವಾಗಿದ್ದು ಶೀಘ್ರ ಉದ್ಘಾಟನೆಗೊಳ್ಳಲಿದೆ. 2016ರಿಂದ ಮಡಿವಾಳ ಸುತ್ತಮುತ್ತಲಿನ ಪ್ರದೇಶದಲ್ಲಿ ಸಾಕಷ್ಟು ಅಭಿವೃದ್ಧಿಯಾಗಿದೆ.

ಬಿಟಿಎಂ ಲೇಔಟ್‌ ನಲ್ಲಿರುವ ಕೆರೆ ಪ್ರದೇಶ 272 ಮಡಿವಾಳ ಕೆರೆ ಪ್ರದೇಶವಿದೆ ಆ ಪ್ರದೇಶದಲ್ಲಿ ಜೀವವೈವಿಧ್ಯ ಉದ್ಯಾನವನ್ನು ಅಭಿವೃದ್ಧಿಪಡಿಸಲಾಗಿದೆ.

ಕರ್ನಾಟಕ ಜ್ಞಾನ ಆಯೋಗ ಅಧ್ಯಕ್ಷ ಡಾ. ಕೆ. ಕಸ್ತೂರಿ ರಂಗನ್ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರನ್ನು ಭೇಟಿಯಾಗಿ ಉದ್ಯಾನದ ಉದ್ಘಾಟನೆಗೆ ಕೇಳಿಕೊಂಡಿದ್ದಾರೆ. ಇದೀಗ ಅರಣ್ಯ ಇಲಾಖೆ ನಿರ್ವಹಿಸುತ್ತಿರುವ ಉದ್ಯಾನದ ಒಂದು ಭಾಗ ಮಾತ್ರ ಸಾರ್ವಜನಿಕರಿಗೆ ಮುಕ್ತವಾಗಿದೆ.

ಬೆಂಗಳೂರಿನ ಕೆರೆ ಒತ್ತುವರಿ ಪರಿಶೀಲಿಸಿದ ಡಿಸಿಎಂ ಜಿ.ಪರಮೇಶ್ವರ್ಬೆಂಗಳೂರಿನ ಕೆರೆ ಒತ್ತುವರಿ ಪರಿಶೀಲಿಸಿದ ಡಿಸಿಎಂ ಜಿ.ಪರಮೇಶ್ವರ್

ಅಲ್ಲಿ ಬಟರ್‌ಫ್ಲೈ ಪಾರ್ಕ್, ಆರ್ಕಿಡ್‌ ಕಾರ್ನಿವೋರಸ್‌ ಸಸ್ಯಗಳು, ಮಣ್ಣಿನ ನಡಿಗೆ ಪಥ, ಸೈಕಲ್‌ ಟ್ರ್ಯಾಕ್‌, ಚಿಟ್ಟೆಗಳನ್ನು ಆಕರ್ಷಿಸುವ, ವಿದೇಶಗಳಿಂದ ಬರುವ ಪಕ್ಷಿಗಳ ಸಂತಾನೋತ್ಪತ್ತಿಗೆ ಸಹಾಯ ಆಗುವಂತೆ ಪೊದೆ, ಗಿಡಗಳನ್ನು ಬೆಳೆಸಲಾಗುತ್ತದೆ. ಮುಖ್ಯವಾಗಿ ಸ್ಥಳೀಯ ಪ್ರದೇಶಗಳಲ್ಲಿನ ಗಿಡಮರಗಳನ್ನು ಬೆಳೆಸುವ ಯೋಜನೆ ರೂಪಿಸಲಾಗಿದೆ.

Madiwala lake transforms into biodiversity park

ಹೊಂಗೆ, ಬೇವು, ಹಲಸಿನ ಮರಗಳನ್ನು ಈ ಉದ್ಯಾನದಲ್ಲಿ ಬೆಳೆಸುವುದಿಲ್ಲ. ಬದಲಾಗಿ ವಲಸೆ ಪಕ್ಷಿಗಳನ್ನು ಆಕರ್ಷಿಸುವಂತ ಗಿಡ, ಮರಗಳನ್ನು ಆಯ್ಕೆಮಾಡಲಾಗಿದೆ. ನವದೆಹಲಿಯಲ್ಲಿರುವ ಯಮುನಾ ಜೀವವೈವಿಧ್ಯ ಉದ್ಯಾನ ಮಾದರಿಯಲ್ಲಿ ಈ ಉದ್ಯಾನ ನಿರ್ಮಾಣವಾಗುತ್ತಿದ್ದು, ಮಡಿವಾಳ ಕೆರೆ ಪರಿಸರದ 70 ಎಕರೆ ಜಾಗದಲ್ಲಿ 40 ಎಕರೆ ಜಾಗವನ್ನು ಇದಕ್ಕಾಗಿ ಮೀಸಲಿಡಲಾಗಿದೆ. ಒಟ್ಟು 132 ಬಗೆಯ ಸಸ್ಯಗಳನ್ನು ನೆಡಲಾಗಿದೆ. 40 ರೀತಿಯ ಚಿಟ್ಟೆಗಳನ್ನು ಸಂರಕ್ಷಿಸಲಾಗಿದೆ. ಹಣ್ಣು ಬಿಡುವಂತಹ 100 ಗಿಡಗಳನ್ನು ನೆಡಲಾಗಿದೆ.

ಉದ್ಯಾನದ ಮಣ್ಣಿನ ಗುಣಮಟ್ಟಕ್ಕೆ ಹೊಂದುವಂಥ ಮರಗಳನ್ನು ಆಯ್ಕೆ ಮಾಡಲು ರಾಜ್ಯದ ಅರಣ್ಯ ಪ್ರದೇಶಗಳಲ್ಲಿ ಸಮೀಕ್ಷೆ ಮಾಡಲಾಗುತ್ತದೆ. ನಗರದಲ್ಲಿ ವಾಯುಮಾಲಿನ್ಯ ಕಡಿಮೆ ಮಾಡುವ ಉದ್ದೇಶದಿಂದ ಅಮ್ಲಜನಕವನ್ನು ಹೆಚ್ಚು ಬಿಡುಗಡೆ ಮಾಡುವ ಮರಗಳನ್ನು ಆಯ್ಕೆ ಮಾಡಲಾಗಿದೆ.

ಉದ್ಯಾನದ ನಿರ್ವಹಣೆಗಾಗಿ ಪ್ರತ್ಯೇಕ ಮಂಡಳಿಯನ್ನು ರಚನೆ ಮಾಡಬೇಕು ಎಂದು ಜ್ಞಾನ ಆಯೋಗ ಒತ್ತಾಯಿಸಿದೆ.

English summary
From just another lake in the city with a walking path along the bund to a biodiversity park, Madiwala lake has undergone a massive transformation over the last two years. The 272-acre park in BTM Layout, which was under development since the end of 2016, is now home to many native species of flora and fauna. It is set to be inaugurated in the coming months.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X