ಬೆಂಗಳೂರು: ಹಸಿರೀಕರಣ ಜಾಗೃತಿಗಾಗಿ ಮಾಧ್ವ ವಾಕಥಾನ್

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 13: ನಗರದ ಹಲವಾರು ಮಾಧ್ವ ಸಂಘಟನೆಗಳ ಸಹಯೋಗದಲ್ಲಿ ಬೆಂಗಳೂರಿನಲ್ಲಿ ನೆಲೆಸಿರುವ ಮಾಧ್ವರಿಗಾಗಿ ಮಾಧ್ವ ವಾಕಥಾನ್ ಹಾಗೂ ಮಿನಿ ಮ್ಯಾರಥಾನ್ ಓಟವನ್ನು ಏಪ್ರಿಲ್ 15 ರಂದು ನಗರದ ರಾಜರಾಜೇಶ್ವರಿ ನಗರ ಆಯೋಜಿಸಲಾಗಿದೆ.

ಒಗ್ಗಟ್ಟೇ ಒಲವು ಹಾಗೂ ಪರಸ್ಪರ ಸಹ ಬಾಳ್ವೆಯಿಂದ ಮಾತ್ರ ಉತ್ತಮ ಜೀವನ ನಡೆಸಲು ಸಾಧ್ಯ ಎಂಬ ಧ್ಯೇಯ ಹಿನ್ನೆಲೆಯಲ್ಲಿ ಮಾಧ್ವರಿಗಾಗಿ ವಾಕಥಾನ್ ಏರ್ಪಡಿಸಲಾಗಿದ್ದು, ಕೇವಲ ಆರೋಗ್ಯದ ದೃಷ್ಟಿಯಿಂದ ಮಾತ್ರವಲ್ಲದೆ ಬೆಂಗಳೂರಿನಲ್ಲಿ ಹಸಿರೀಕರಣ ಕುರಿತು ಜಾಗೃತಿ ಮೂಡಿಸಲು ಸಲುವಾಗಿ ಮಾಧ್ವ ವಾಕಥಾನ್ ಏರ್ಪಡಿಸಿದೆ.

ನೀರಿನ ಮಹತ್ವ ಸಾರಲು ವಾಕಥಾನ್ ಏರ್ಪಡಿಸಿದ ಎಂಟರ ಬಾಲೆ

ಸುಮಾರು ಐದು ಕಿ.ಮೀ ದೂರದ ವಾಕಥಾನ್ ಅಲ್ಲಿ ಮಿನಿ ಮ್ಯಾರಥಾನ್ ಕೂಡ ಇರಲಿದ್ದು ಆಸಕ್ತರು ವಾಕಥಾನ್ ಜತೆಗೆ ಮಿನಿ ಮ್ಯಾರಥಾನ್ ನಲ್ಲಿ ಭಾಗವಹಿಸಲು ಕೂಡ ಅವಕಾಶ ನೀಡಲಾಗಿದೆ. ನಗರದ ರಾಜರಾಜೇಶ್ವರಿನಗರದಿಂದ ಈ ವಾಕಥಾನ್ ಆರಂಭಗೊಳ್ಳಲಿದೆ.

Madhwas walkathon for green awareness

ಏ.15ರಂದು 6.15ಕ್ಕೆ ರಾಜರಾಜೇಶ್ವರಿ ನಗರದ ಮುನಿವೆಂಕಟಯ್ಯ ಮೈದಾನದಿಂದ ಆರಂಭಗೊಂಡು ಮೋನಿಷ್ ಕಾರ್ನರ್, 43ನೇ ಮುಖ್ಯರಸ್ತೆ, ಇಂಟರ್ ಸೆಕ್ಷನ್ ಇ ಕ್ರಾಸ್ ರಸ್ತೆ, ನೆಹರು ರಸ್ತೆ, ಬಾಲಕೃಷ್ಣ ರಂಗಮಂದಿರ, ಕನಕದಾಸ ಸರ್ಕಲ್, 80 ಅಡಿ ರಸ್ತೆ, ಕೆಂಚೇನಹಳ್ಲಿ ರಸ್ತೆ, ಜಯಣ್ಣ ರಸ್ತೆ, ಐಡಿಯಲ್ ಹೋಮ್ಸ್, ಬಂಗಾರಪ್ಪ ಮುಖ್ಯರಸ್ತೆಯಿಂದ ಐಡಿಯಲ್ ಹೋಮ್ಸ್ ತಲುಪಲಿದೆ.

ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಬಿಜೆಪಿ ಅಭ್ಯರ್ಥಿಗಳ ಮೊದಲ ಅಧಿಕೃತ ಪಟ್ಟಿ ಪ್ರಕಟ

ಯುವಕರು ಮಹಿಳೆಯರು ಮತ್ತು ಮಕ್ಕಳು ವಾಕಥಾನ್ ನಲ್ಲಿ ಪಾಲ್ಗೊಳ್ಳಬಹುದಾಗಿದ್ದು, ವಯೋವೃದ್ಧರೂ ಕೂಡ ತಮಗೆ ಸಾಧ್ಯವಾದ್ಷಟು ದೂರದವರೆಗೆ ವಾಕಥಾನ್ ನಲ್ಲಿ ಅವರ ಇಚ್ಛೆಯನುಸಾರ ಭಾಗವಹಿಸಬಹುದಾಗಿದೆ.

Madhwas walkathon for green awareness

5 ಕಿ.ಮೀ ಉದ್ದದ ಮಾಧ್ವ ವಾಕಥಾನ್ ಗೆ ಉತ್ತರಾದಿಮಠದ ಶ್ರೀ ಸತ್ಯಾತ್ಮತೀರ್ಥ ಸ್ವಾಮೀಜಿ ಚಾಲನೆ ನೀಡಲಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ಮಾಧ್ವರಿಗೆ ಮಾತ್ರ ಈ ವಾಕಥಾನ್ ನಲ್ಲಿ ಪಾಲ್ಗೊಳ್ಳಲು ಅವಕಾಶ ದೊರೆಯಲಿದೆ.

ವಾಕಥಾನ್ ನಲ್ಲಿ ಭಾಗವಹಿಸುವವರು ತಮಗೆ ಇಷ್ಟವಾದ ಡ್ರೆಸ್ ಗಳನ್ನು ಹಾಕಿಕೊಳ್ಳಬಹುದಾಗಿದ್ದು, ಪ್ಯಾಂಟ್ ಶರ್ಟ್, ದೋತಿ, ಶಲ್ಯ, ಚೂಡಿದಾರ್, ಸೀರೆ ಅವರಿಗೆ ಸರಿಯನಿಸುವ ಬಟ್ಟೆಗಳನ್ನು ಧರಿಸಿ ಪಾಲ್ಗೊಳ್ಳಬಹುದಾಗಿದೆ. ಮಾಧ್ವ ವಾಕಥಾನ್ ಜತೆಗೆ ಇದೇ ವೇಳೆ ನೂರಾರು ಮಾಧ್ವರು ಸಸಿ ನೆಡುವ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Madhwas who residing in Bengaluru will go for a walkathon and mini marathon on April 15 at Rajarajeshwari nagar to create awareness among Bengaloreans about greenery and environment.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ