ಬಿಟಿಎಂ ಲೇಔಟ್‌ನಲ್ಲಿ ಕುಡುಕ ಗಂಡ್ಮಕ್ಳ ತವರು ಮಧುಲೋಕ!

Posted By:
Subscribe to Oneindia Kannada

ಬೆಂಗಳೂರು, ಜನವರಿ, 19 : ಈ ಸಂಜೆ ಗುಂಡು ಪ್ರೇಮಿಗಳಿಗೆ ನೆನಪಿನಲ್ಲಿ ಉಳಿಯುವಂತಹದ್ದು! ಮದ್ಯಪ್ರಿಯರ ಮನತಣಿಸುವ ಸಲುವಾಗಿ ಮಧುಲೋಕ ಲಿಕರ್ ಬೊಟಿಕ್ ತನ್ನ ಎರಡನೇ ಮಳಿಗೆಯನ್ನು ನಗರದ ಬಿಟಿಎಂ ಲೇಔಟ್ ನಲ್ಲಿ ಮಂಗಳವಾರ ತೆರೆದಿದೆ. ಮಧುಪ್ರಿಯರಿಗೆ ಸ್ವಾಗತ, ಸುಸ್ವಾಗತ.

ಸಂಸ್ಥಾಪಕ ಕೆಎಸ್ ಲೋಕೇಶ್ ಅವರ ಕನಸಿನ ಕೂಸಾಗಿರುವ ಮಧುಲೋಕ ಲಿಕರ್ ಬೊಟಿಕ್‌ನ ಬಿಟಿಎಂನಲ್ಲಿರುವ ಎರಡನೇ ಮಳಿಗೆಯು ಭಾರತೀಯ ಹಾಗೂ ವಿದೇಶಿ ಮದ್ಯಗಳನ್ನು ರಿಟೈಲ್ ಆಗಿ ಒದಗಿಸಲಿದೆ. ಡಾ.ಕುಪೇಂದ್ರ ರೆಡ್ಡಿ, ಸಂಸತ್ ಸದಸ್ಯರು, ಮತ್ತು ಅನಿಲ್ ಕುಮಾರ್ ಶೆಟ್ಟಿ, ವಕೀಲರು ಬಿಟಿಎಂ ಲೇಔಟ್ ನ ಮಳಿಗೆಯನ್ನು ಉದ್ಘಾಟಿಸಿದರು. ಸಂಗೀತಗಾರ ಶಿವಮೊಗ್ಗ ಸುಬ್ಬಣ್ಣ ಕೂಡ ಹಾಜರಿದ್ದರು.

Madhuloka opens second branch in BTM Layout in Bengaluru

ಅನೇಕ ಲೇಬಲ್ ಗಳಷ್ಟೇ ಅಲ್ಲ, ವಿವಿಧ ಬ್ರಾಂಡ್ ಗಳನ್ನು ವಿತರಿಸಲಿರುವ ಮಧುಲೋಕವನ್ನು ವಿಶಿಷ್ಟವಾದ ರೀತಿಯಲ್ಲಿ ಕ್ರಿಯಾತ್ಮಕವಾಗಿ ವಿನ್ಯಾಸಗೊಳಿಸಲಾಗಿದೆ. ಮಧುಲೋಕದ ಬಿಟಿಎಂ ಲೇಔಟ್‌ನಲ್ಲಿ ಬೀರ್, ಬ್ರಾಂಡಿ, ಜಿನ್, ಲಿಕರ್‌ಗಳು, ವೆರ್ಮೌತ್, ವಿಸ್ಕಿ, ವೈನ್, ವೊಡ್ಕಾ, ರಮ್, ಟೆಕ್ವಿಲಾ ಮತ್ತು ಆಗ್ವೆಗಳ ಲೋಕವೇ ತೆರೆದುಕೊಂಡಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಲೋಕೇಶ್, "ಬಿಟಿಎಂ ಲೇಔಟ್‌ನಲ್ಲಿ ಇನ್ನೊಂದು ಮಳಿಗೆ ತೆರೆಯಬೇಕೆಂದು ನಮ್ಮ ಗ್ರಾಹಕರಿಂದ ಭಾರಿ ಬೇಡಿಕೆ ಇತ್ತು. ಹಾಗಾಗಿ ಈ ಮಳಿಗೆ ತಲೆ ಎತ್ತಿದೆ. ಈ ಮಳಿಗೆಯಲ್ಲಿ, ಬ್ರಾಂಡ್‌ನಿಂದ ಬಾಟಲಿಯ ಪ್ರದರ್ಶನದ ತನಕ ಪ್ರತಿಯೊಂದಕ್ಕೂ ಗಮನ ಹರಿಸಲಾಗಿದೆ. ಬೆಂಗಳೂರು ಯಾವಾತ್ತೂ ಪಬ್ ರಾಜಧಾನಿಯಾಗಿದೆ ಮತ್ತು ಈ ನಗರದ ಜನರು ಮದ್ಯಪಾನವನ್ನು ಪ್ರೀತಿಸುತ್ತಾರೆ. ಈ ಮಳಿಗೆಯು ಮನೆಗೆ ಸನಿಹಕ್ಕೆ ಬಂದು ಗ್ರಾಹಕರಿಗೆ ಅತ್ಯುತ್ತಮ ಅನುಭವವನ್ನು ಒದಗಿಸಲಿದೆ" ಎಂದು ಹೇಳಿದರು.

Madhuloka opens second branch in BTM Layout in Bengaluru

ದಯವಿಟ್ಟು ಹೆಚ್ಚಿನ ವಿವರಗಳಿಗಾಗಿ ಈ ವೆಬ್ ಸೈಟನ್ನು ವೀಕ್ಷಿಸಿ. ಸದ್ಯಕ್ಕೆ ಮಧುಲೋಕದ ಈ ವೆಬ್ ಸೈಟ್ ನಿರ್ಮಾಣ ಹಂತದಲ್ಲಿದ್ದು, ಸದ್ಯದಲ್ಲಿಯೇ ಕುಡುಕರಿಗೆ ಬಾಗಿಲು ತೆರೆದುಕೊಳ್ಳಲಿದೆ.

ಲಾಸ್ಟ್ ಡ್ರಾಪ್ : ಖಾಲಿ ಕ್ವಾಟ್ರು ಬಾಟ್ಲಿಯಂಗೆ ಲೈಫು... ಆಚೆಗೆ ಹಾಕೊವ್ಳೆ ವೈಫು... ಕಣ್ತುಂಬ ನೀರು ಬಾಯ್ತುಂಬ ಬೀರು ನಿಜವಾಗ್ಲು... ನಿಜವಾಗ್ಲು... ನಿಜವಾಗ್ಲು ಬಾರು ಗಂಡಮಕ್ಳ ತವರು, ಗಂಡಮಕ್ಳ ತವರು, ಗಂಡಮಕ್ಳ ತವರು! ಕುಡುಕ್ರು ಒಳ್ಳೇಯವ್ರು.. ಎಣ್ಣೆ ತುಂಬ ಕೆಟ್ಟದ್ದು... ಡೈಲಿ ಕುಡಿಯೋದು... ತಮ್ ತಮ್ ಗೆ ಬಿಟ್ಟಿದ್ದು...

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Madhuloka, a liquor boutique has opened it's branch in BTM Layout in Bengaluru on 19th January, 2016. Member of Parliament Kupendra Reddy and advocate Anil Kumar Shetty inaugurated the liquor boutique owned by K.S. Lokesh.
Please Wait while comments are loading...