ಸ್ವಾಮಿ ರಾಸಲೀಲೆ, ಮಠಕ್ಕೆ ಶ್ರೀಶೈಲ ಶ್ರೀ ಭೇಟಿ, ಪರಿಸ್ಥಿತಿ ಉದ್ವಿಗ್ನ

Posted By:
Subscribe to Oneindia Kannada

ಬೆಂಗಳೂರು, ಅಕ್ಟೋಬರ್ 28: ಯಲಹಂಕದ ಹುಣಸಮಾರನಹಳ್ಳಿಯ ಮದ್ದೇವಣಾಪುರ ಜಂಗಮ ಮಠದ ಸ್ವಾಮೀಜಿ ಪುತ್ರ ದಯಾನಂದ ಮತ್ತು ಸ್ಯಾಂಡಲ್ ವುಂಡ್ ನಟಿ ಜೊತೆಗಿನ ಕಾಮಪುರಾಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ.

ಮಠದ ಪೀಠಾಧಿಪತಿ ಶಿವಾಚಾರ್ಯ ಸ್ವಾಮಿಜೀ ಪುತ್ರ ದಯಾನಂದ ಅಲಿಯಾಸ್ ನಂಜೇಶ್ವರ ಸ್ವಾಮಿಯ ರಾಸಲೀಲೆ ವಿಡಿಯೋ ಬಹಿರಂಗಗೊಂಡ ದಿನದಿಂದ ಮಠದ ಬಳಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ.

ಮದ್ದೇವಣಾಪುರ ಮಠದ ಸ್ವಾಮಿಯ ಕಾಮಪುರಾಣಕ್ಕೆ ಹೊಸ ಟ್ವಿಸ್ಟ್

ಕಾಮಿ ಸ್ವಾಮಿ ದಯಾನಂದನ ಪರ-ವಿರೋಧ ಬಣಗಳ ನಡುವೆ ಮಠದ ಬಳಿ ಪರಸ್ಪರ ಕಿತ್ತಾಟಗಳು ನಡೆದಿವೆ. ಇದೊಂದು ಹಣ ವಸೂಲಿ ದಂಧೆಯಾಗಿದೆ ಎನ್ನುತ್ತಿದ್ದರೇ, ಇನ್ನು ಕೆಲವರು ಇಂತಹ ಕಾಮಿ ಸ್ವಾಮಿಯನ್ನು ಮಠದಿಂದ ಹೊರ ಹಾಕಿ ಎಂದು ಪಟ್ಟು ಹಿಡಿದಿದ್ದಾರೆ. ಹೀಗೆ ಆರೋಪ-ಪ್ರತ್ಯಾರೋಪಗಳು ತಾರಕಕ್ಕೇರಿವೆ.

ವಿಡಿಯೋದಲ್ಲಿರುವುದು ನಾನಲ್ಲ ಎಂದ 'ಖತರ್ನಾಕ್' ನಟಿ

ಶ್ರೀಶೈಲ ಮತ್ತು ರಂಭಾಪುರಿ ಜಗದ್ಗುರುಗಳು ಮಧ್ಯಪ್ರವೇಶಿಸಿ ಸೂಕ್ತ ತೀರ್ಮಾನ ತೆಗೆದುಕೊಳ್ಳುವ ವರೆಗೂ ಅನಿರ್ಧಿಷ್ಟಾವಧಿ ಧರಣಿ ಸತ್ಯಾಗ್ರಹ ಮುಂದುವರೆಸುವುದಾಗಿ ಭಕ್ತರು ಹೇಳುತ್ತಿದ್ದಾರೆ.

 ಮದ್ದೇವಣಾಪುರ ಮಠಕ್ಕೆ ಶ್ರೀಶೈಲ ಶ್ರೀಗಳ ಭೇಟಿ

ಮದ್ದೇವಣಾಪುರ ಮಠಕ್ಕೆ ಶ್ರೀಶೈಲ ಶ್ರೀಗಳ ಭೇಟಿ

ಮದ್ದೇವಣಾಪುರ ಜಂಗಮ ಮಠದ ಸ್ವಾಮೀಜಿಯ ರಾಸಲೀಲೆ ವಿಡಿಯೋ ಇಡೀ ಜಂಗಮ ಮಠಗಳಿಗೆ ಬೇಸರ ತಂದಿದ್ದು, ಇದಕ್ಕೆ ಹಲವು ಸ್ವಾಮಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇನ್ನು ಈ ಬಗ್ಗೆ ಪರಿಶೀಲನೆ ನಡೆಸಲು ಖುದ್ದು ಶನಿವಾರ ಶ್ರೀಶೈಲ ಶ್ರೀ ಚನ್ನಸಿದ್ಧರಾಮ ಪಂಡಿತರಾಧ್ಯ ಸ್ವಾಮಿಗಳು ಮಠಕ್ಕೆ ಆಗಮಿಸಿದ್ದು, ಚರ್ಚೆ ನಡೆಸಿದ್ದಾರೆ.

ಶ್ರೀಶೈಲ ಶ್ರೀಗಳಿಂದ ಇಂದು ಅಂತಿಮ ನಿರ್ಣಯ ಸಾಧ್ಯತೆ

ಶ್ರೀಶೈಲ ಶ್ರೀಗಳಿಂದ ಇಂದು ಅಂತಿಮ ನಿರ್ಣಯ ಸಾಧ್ಯತೆ

ಮದ್ದೇವಣಾಪುರ ಜಂಗಮ ಮಠದ ಸ್ವಾಮಿ ದಯಾನಂದನ ಉಚ್ಚಾಟನೆಗೆ ಭಕ್ತರು ತೀವ್ರ ತರನಾದ ಹೋರಾಟ ನಡೆಸುತ್ತಿರುವುದರಿಂದ. ಹಾಗೂ ಮಠದ ಹಿತ ದೃಷ್ಟಿಯಿಂದ ಶ್ರೀಶೈಲ ಶ್ರೀಗಳು ಆಗಮಿಸಿದ್ದು, ಈ ಬಗ್ಗೆ ಚರ್ಚಿಸಿ ಅಂತಿಮ ನಿರ್ಣಯ ಕೈಗೊಳ್ಳಲಿದ್ದಾರೆ.

ಯುವತಿನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್?

ಯುವತಿನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್?

ಹಿಮಾಚಲ ಮತ್ತು ಪ್ರವೀಣ್ ಎನ್ನುವರು ಮೈಸೂರಿನ ಯುವತಿನ್ನು ಮುಂದಿಟ್ಟುಕೊಂಡು ಹನಿಟ್ರ್ಯಾಪ್ ಮೂಲಕ ಹಣ ವಸೂಲಿಗೆ ಇಳಿದಿದ್ದಾರೆ. ಈಗಾಗಲೇ ಪ್ರವೀಣ್ ಎಂಬಾತ ಈ ವಿಡಿಯೋ ಇಟ್ಟುಕೊಂಡಿ ಸ್ವಾಮಿಜೀಯಿಂದ ಲಕ್ಷಾಂತರ ರು. ಲಪಟಾಯಿಸಿದ್ದಾನೆ ಎಂದು ದಯಾನಂದನ ಪರ ಬಣ ಆರೋಪಿಸುತ್ತಿದೆ.

 ಈವರೆಗೂ ಸ್ವಾಮಿಜಿ ನಾಪತ್ತೆ

ಈವರೆಗೂ ಸ್ವಾಮಿಜಿ ನಾಪತ್ತೆ

ರಾಸಲೀಲೆ ಸಿಡಿ ಬಹಿರಂಗಗೊಂಡು ಮೂರು ದಿನಗಳು ಉರುಳಿದರೂ ಈವರೆಗೆ ಕಾಮಿ ದಯಾನಂದ ಹಾಗೂ ಅವರ ತಂದೆ ಮದ್ದೇವಣಾಪುರ ಜಂಗಮ ಮಠದ ಪೀಠಾಧಿಪತಿ ಶಿವಾಚಾರ್ಯ ಸ್ವಾಮಿ ನಾಪತ್ತೆಯಾಗಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Maddevanapura mutt seer Dayananda sex scandal, Srishaila Seer Channasiddarama Panditaradhaya Shivacharya visits to Mutt on Saturday. The Channasiddarama seer discusses with mutt trust and he will take final decision today.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ