ಐಸಿಯು ಕೋಣೆಗೆ ವಿಧಿಸಿದ್ದ ಹೆಚ್ಚುವರಿ ತೆರಿಗೆ ನೀತಿ ಹಿಂದಕ್ಕೆ

Subscribe to Oneindia Kannada

ಬೆಂಗಳೂರು, ಜನವರಿ, 21: ಅತ್ಯಾಧುನಿಕ ಆಸ್ಪತ್ರೆಯ ತೀವ್ರ ನಿಗಾ ಘಟಕಕ್ಕೆ (ಐಸಿಯು) ಗೆ ದಾಖಲಾಗಿ ಚಿಕಿತ್ಸೆ ಪಡೆಯುವ ರೋಗಿಗಳು ನೀಡಬೇಕು ಎಂದಿದ್ದ ಹೆಚ್ಚುವರಿ ಶೇ. 8 ರಷ್ಟು ತೆರಿಗೆ ನೀತಿಯನ್ನು ಸರ್ಕಾರ ಕೈಬಿಡುತ್ತೇನೆ ಎಂದು ಹೇಳಿದೆ.

ಈ ಬಗ್ಗೆ ಮಾಹಿತಿ ನೀಡಿದ ಆರೋಗ್ಯ ಸಚಿವ ಯು ಟಿ ಖಾದರ್, ಸಿಎಂ ಸಿದ್ದರಾಮಯ್ಯ ಹಣಕಾಸು ಸಚಿವಾಲಯಕ್ಕೆ ಹೆಚ್ಚುವರಿ ತೆರಿಗೆ ಬೇಡ ಎಂದು ಮನವಿ ಮಾಡಿದ್ದಾರೆ. ಇನ್ನು ಕೆಲ ದಿನಗಳಲ್ಲಿ ಅಧಿಕೃತ ಆದೇಶ ಬರಲಿದೆ ಎಂದು ತಿಳಿಸಿದ್ದಾರೆ.[ಐಸಿಯು ರೋಗಿಗಳಿಗೆ ಸರ್ಕಾರದ ಟ್ಯಾಕ್ಸ್ ಟ್ರೀಟ್ ಮೆಂಟ್]

Luxury Tax For ICU Patients In Karnataka Withdrawn


ಜನವರಿ ಮೊದಲ ವಾರದಲ್ಲಿ ಆದೇಶ ಹೊರಡಿಸಿದ್ದ ವಾಣಿಜ್ಯ ತೆರಿಗೆ ಇಲಾಖೆ ದಿನವೊಂದಕ್ಕೆ ಸಾವಿರ ರು. ಅಥವಾ ಅದಕ್ಕಿಂತ ಹೆಚ್ಚಿಗೆ ನೀಡಬೇಕಾದ ಐಸಿಯು ವಾರ್ಡ್ ಗಳನ್ನು ಐಷಾರಾಮಿ ಎಂದು ಪರಿಗಣಿಸಲಾಗುತ್ತದೆ. ಇವರು ಹೆಚ್ಚುವರಿ ಶೇ. 8 ರಷ್ಟು ತೆರಿಗೆ ಪಾವತಿ ಮಾಡಬೇಕು ಎಂದು ಹೇಳಿತ್ತು. ಇದಕ್ಕೆ ಕರ್ನಾಟಕದ ತೆರಿಗೆ ಕಾಯ್ದೆ 1979 ರ ಅನ್ವಯ ಆಧಾರವನ್ನು ನೀಡಿತ್ತು.[ಆಧಾರ್ ಕಾರ್ಡ್ ಮಾಡಿಸುವುದು ಹೇಗೆ?]

ಅತ್ಯಾಧುನಿಕ ಆಸ್ಪತ್ರೆಗಳ ಡಿಲೆಕ್ಸ್ ಮತ್ತು ಸೂಪರ್ ಡಿಲೆಕ್ಸ್ ರೂಮ್ ಗಳಿಗೆ ತೆರಿಗೆ ನೀತಿ ಅನ್ವಯವಾಗುತ್ತದೆ. ಅಲ್ಲದೇ ರೋಗಿಗಳಿಗೆ ನೀಡುವ ಹೆಚ್ಚುವರಿ ಸೌಲಭ್ಯಗಳಿಗೂ ತೆರಿಗೆ ಅನ್ವಯವಾಗುತ್ತದೆ ಎಂದು ತೆರಿಗೆ ಇಲಾಖೆ ತಿಳಿಸಿತ್ತು. ಸರ್ಕಾರ ಆದೇಶ ಹಿಂದಕ್ಕೆ ಪಡೆದರೆ ಹಿಂದಿನ ನೀತಿಯೇ ಮುಂದುವರಿಯಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
In face of stiff disapproval from public and medical fraternity, the Karnataka government has decided to withdraw the "controversial" 8% luxury tax on patients treated in intensive care units in state's hospitals. Karnataka health minister UT Khader said Chief Minister Siddaramaiah has requested the finance department to withdraw the tax. He added that ICU is a necessity and not luxury. He said official notification will take time, but the tax will not be imposed.
Please Wait while comments are loading...