ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪತಿ ಪರ ನಿಂತ 'ಮಹಾದಾನಿ' ರೋಹಿಣಿ ನಿಲೇಕಣಿ

By Mahesh
|
Google Oneindia Kannada News

ಬೆಂಗಳೂರು, ಜ.16:ಇನ್ಫೋಸಿಸ್ ನ ಸಹ ಸಂಸ್ಥಾಪಕ, ಆಧಾರ್ ಸೃಷ್ಟಿಕರ್ತ ನಂದನ್ ನೀಲೇಕಣಿ ಅವರ ರಾಜಕೀಯ ಪ್ರವೇಶಕ್ಕೆ ಆರಂಭ ವಿಘ್ನಗಳು ಎದುರಾಗುತ್ತಿದ್ದಂತೆ ಶುಭ ಸುದ್ದಿಯೊಂದು ಬಂದಿದೆ. ನಿಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ತಮ್ಮ ದಾನ ಧರ್ಮ, ಸಮಾಜ ಉದ್ಧಾರ ಕಾರ್ಯಗಳನ್ನು ಕೆಲಕಾಲ ಬದಿಗೊತ್ತಿ ಪತಿಯ ರಾಜಕೀಯ ಜರ್ನಿಗೆ ಸಾಥ್ ನೀಡುವುದಾಗಿ ಘೋಷಿಸಿದ್ದಾರೆ.

ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ಕಾಂಗ್ರೆಸ್ ಪಕ್ಷದಲ್ಲಿ ವಾದ-ವಿವಾದಗಳು ಹುಟ್ಟುಕೊಂಡಿವೆ.[ಈ ಬಗ್ಗೆ ಇಲ್ಲಿ ವಿವರವಾಗಿ ಓದಿ] ನಂದನ್ ನಿಲೇಕಣಿ ಅವರಿಗೆ ಕಾಂಗ್ರೆಸ್ ಟಿಕೆಟ್ ಸಿಗುತ್ತಾ? ಕೆಪಿಸಿಸಿ ನಾಯಕರಿಗೂ ಗೊತ್ತಿಲ್ಲ.

ಇಂಥ ಪರಿಸ್ಥಿತಿಯಲ್ಲಿ ರೋಹಿಣಿ ನಿಲೇಕಣಿ ಅವರು ಪತಿಯ ರಾಜಕೀಯ ಬದುಕಿಗೆ ಇಂಬು ನೀಡಲು ಸಿದ್ಧರಾಗುತ್ತಿದ್ದಾರೆ. ಸಾರ್ವಜನಿಕ ಕ್ಷೇತ್ರದಲ್ಲಿ ನಂದನ್ ಗಿಂತ ಜನರೊಂದಿಗೆ ಹೆಚ್ಚಿಗೆ ಬೆರೆತು ಅನುಭವ ಹೊಂದಿರುವ ರೋಹಿಣಿ ಬೆಂಬಲ ನಂದನ್ ಗೆ ಬಹುಮುಖ್ಯವಾಗಿದೆ.ಇತ್ತೀಚೆಗಷ್ಟೇ ತಾವೇ ಸ್ಥಾಪಿಸಿದ ಪ್ರಥಮ್ ಬುಕ್ಸ್ ಎಂಬ ಸರ್ಕಾರೇತರ ಸಂಸ್ಥೆಯ ಮುಖ್ಯಸ್ಥ ಸ್ಥಾನದಿಂದ ಕೆಳಗಿಳಿದಿದ್ದಾರೆ. ಮಕ್ಕಳಿಗಾಗಿ ವಿವಿಧ ಭಾಷೆಗಳಲ್ಲಿ ವೈಜ್ಞಾನಿಕ ಹಾಗೂ ಜ್ಞಾನವೃದ್ಧಿ ಪುಸ್ತಕಗಳನ್ನು ಈ ಸಂಸ್ಥೆ ಹೊರತರುತ್ತಿದೆ.

ಪ್ರಥಮ್ ಬುಕ್ಸ್ ಸಂಸ್ಥೆಯನ್ನು ಭಾರವಾದ ಮನಸ್ಸಿನಿಂದ ತೊರೆದಿರುವ ರೋಹಿಣಿ ಅವರು ತಮ್ಮ ವಿದಾಯ ಭಾಷಣದಲ್ಲಿ ತಮ್ಮ ಮುಂದಿನ ಯೋಜನೆ ಬಗ್ಗೆ ವಿವರಿಸಿದರು. ನಂದನ್ ಅವರ ಮುಂದಿನ ಸಾರ್ವಜನಿಕ ಜೀವನದ ಜರ್ನಿಗೆ ನಾನು ಎಲ್ಲಾ ರೀತಿ ಬೆಂಬಲ ನೀಡಲು ಸಿದ್ಧಳಾಗಬೇಕಿದೆ. ಪ್ರಥಮ್ ಸಂಸ್ಥೆ ತೊರೆಯುತ್ತಿರುವುದು ಸಕಾಲಿಕವಾಗಿದೆ ಎಂದಿದ್ದಾರೆ.

Lok Sabha Ticket aspirant Nandan Nilekani gets support from Rohini Nilekani

ದಶಕಗಳ ಕಾಲ ಪ್ರಥಮ್ ಬುಕ್ಸ್ ಮುನ್ನಡೆಸಿದ್ದ ರೋಹಿಣಿ ಅವರಿಗೆ ಪ್ರಥಮ್ ಬುಕ್ಸ್ ಮೂಲಕ ಡಿಜಿಟಲ್ ಬುಕ್ಸ್ ಹೊರ ತರುವ ಆಸೆಯಿತ್ತು. ಮುಂದಿನ ದಿನಗಳಲ್ಲಿ ಅದು ಸೌಜೈನ್ ಸಿಂಗ್ ಅವರ ಮುಂದಾಳತ್ವದಲ್ಲಿ ನೆರವೇರುವ ಸಾಧ್ಯತೆಯೂ ಇದೆ.

ಮಹಾದಾನಿ: ಇನ್ಫೋಸಿಸ್ ನ ಸಹ ಸಂಸ್ಥಾಪಕ ನಂದನ್ ನೀಲೇಕಣಿ ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ದಾನ ಧರ್ಮಗಳಿಗೂ ಹೆಸರುವಾಸಿ. ಇದು ಅವರನ್ನು ಕಂಡಿರುವ ಬೆಂಗಳೂರು ದಕ್ಷಿಣ ಭಾಗದ ಜನ ಸಾಮಾನ್ಯರಿಗೂ ಗೊತ್ತಿದೆ. ಹೀಗಾಗಿ ನಂದನ್ ಗೆ ರೋಹಿಣಿ ಬೆಂಬಲ ಶ್ರೀರಕ್ಷೆಯಾಗಲಿದೆ.

ರೋಹಿಣಿ ಅವರು ಇತ್ತೀಚೆಗೆ ತಮ್ಮ ಬಳಿ ಇದ್ದ 5.77 ಲಕ್ಷ ಷೇರುಗಳನ್ನು ಮಾರಾಟ ಮಾಡಿದ್ದರು. ಅದರಿಂದ ಸಂಗ್ರಹಗೊಂಡ 163.58 ಕೋಟಿ ರುಗಳನ್ನು ಸಮಾಜಸೇವೆಗಾಗಿ ವಿನಿಯೋಗಿಸಲು ಮುಂದಾಗಿದ್ದರು.

ಕಳೆದ ಹಲವು ವರ್ಷಗಳಿಂದ ಶಿಕ್ಷಣ, ನೀರು, ಪರಿಸರ ಮತ್ತು ಆಡಳಿತ ಕ್ಷೇತ್ರದ ಬೆಳವಣಿಗೆಗೆ ದಾನ ನೀಡುತ್ತಿದ್ದೇನೆ. ಈ ಹಿನ್ನೆಲೆಯಲ್ಲಿ ಈ ಷೇರುಗಳನ್ನು ಮಾರಾಟ ಮಾಡುತ್ತಿರುವುದಾಗಿ ರೋಹಿಣಿ ನೀಲೇಕಣಿ ಅವರು ಘೋಷಿಸಿದ್ದರು.ಇದು ಬರೀ ಆಶ್ವಾಸನೆ ಎನ್ನುವಂತಿಲ್ಲ. ಏಕೆಂದರೆ ಪ್ರತಿ ಪೈಸಾ ಲೆಕ್ಕವನ್ನು ಬಿಎಸ್ ಇಗೆ ಕೊಟ್ಟಿರುವುದರಿಂದ ರೋಹಿಣಿ ಅವರ ದಾನ ಧರ್ಮದ ಬಗ್ಗೆ ಯಾರೂ ಕೆಮ್ಮಂಗಿಲ್ಲ.

ನಂದನ್ ಫ್ಯಾಮಿಲಿ: ಐಐಟಿ ಕ್ವಿಜ್ ಕಾರ್ಯಕ್ರಮವೊಂದರಲ್ಲಿ ರೋಹಿಣಿ ಅವರನ್ನು ಕಂಡು ಮೆಚ್ಚಿ ನಂದನ್ ನಿಲೇಕಣಿ ಮದುವೆಯಾಗಿದ್ದರು. ದಂಪತಿಗೆ ನಿಹಾರ್ ಹಾಗೂ ಜಾಹ್ನವಿ ಎಂಬ ಮಕ್ಕಳಿದ್ದಾರೆ. ರೋಹಿಣಿ ಅವರು 'ಆರ್ಘ್ಯಂ' ಎಂಬ ಸಾರ್ವಜನಿಕ ದತ್ತಿ ಸಂಸ್ಥೆಯ ಸ್ಥಾಪಕರಾಗಿದ್ದಾರೆ. ಈ ಸಂಸ್ಥೆ ಜಲ ನಿರ್ವಹಣೆ ಹಾಗೂ ಬಡ ಶೋಷಿತ ವರ್ಗಗಳಿಗೆ ಕುಡಿಯುವ ನೀರು ಒದಗಿಸುವ ಕಾರ್ಯ ನಿರ್ವಹಿಸುತ್ತಿದೆ.

English summary
Rohini Nilekani, after announcing her retirement from Pratham Books -a non-profit trust that publishes high-quality books for children said she will support her husband Nandan Nilekani in his new public journey
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X