ಪ್ರಿಯಕರನನ್ನು ಪೆಟ್ರೋಲಿನಿಂದ ಸುಟ್ಟು ಕೊಂದ ಪ್ರೇಯಸಿ

Posted By:
Subscribe to Oneindia Kannada

ಬೆಂಗಂಳೂರು, ಡಿಸೆಂಬರ್ 7: ಬೆಂಗಳೂರಿನ ಕಾಟನ್ ಪೇಟೆ ಠಾಣಾ ವ್ಯಾಪ್ತಿಯ ಲಾಡ್ಜ್ ಅಲ್ಲಿ ಪ್ರೀತಿಸಿದ ಯುವಕನನ್ನು ಪೆಟ್ರೋಲಿನಿಂದ ಸುಟ್ಟು ಕೊಂದ ಘಟನೆ ಜರುಗಿದೆ.

ಪ್ರೀತಿಸುತ್ತಿದ್ದ ಯುವತಿ ಶೃತಿ ತನ್ನನ್ನು ಮದುವೆಯಾಗುವುದಾಗಿ ಪ್ರಿಯಕರ ಮನ್ಸೂರನ್ನು ಕೇಳಿಕೊಂಡಿದ್ದಾಳೆ. ಆತ ಅನೇಕ ಸಬೂಬುಗಳನ್ನು ಹೇಳಿ ತಪ್ಪಿಸಿಕೊಂಡಿದ್ದಾನೆ ಮನ್ಸೂರ್ ಮಲಗಿದ್ದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾಳೆ.[ಮುಸ್ಲಿಂ ಯುವಕನಿಂದ ಹಿಂದೂ ಹುಡುಗಿಯ ಅಪಹರಣ]

Lover put the fire and dead her boyfriend

ಮೂರು ವರ್ಷದ ಹಿಂದೆಯೇ ಶುರುವಾಗಿದ್ದ ಪ್ರೇಮ ಪರಸ್ಪರ ದೈಹಿಕ ಸಂಬಂಧಕ್ಕೆ ತಿರುಗಿದೆ. ಅಲ್ಲದೆ ಆಕೆಗೆ ಮನ್ಸೂರ್ ಎರಡು ಬಾರಿ ಗರ್ಭಪಾತವನ್ನೂ ಮಾಡಿಸಿದ್ದಾನೆ. ಈ ಎಲ್ಲ ನೋವು ಸಂಕಟವನ್ನು ಅದುಮಿಟ್ಟು ಕೊಂಡಿದ್ದ ಶೃತಿ ಪ್ರಿಯತಮನ್ನು ವಿವಾಹವಾಗಲು ಕೇಳಿದ್ದಾಳೆ.

ಆದರೆ ಮನ್ನೂರ್ ತನಗೆ ಇನ್ನು ಸರಿಯಾದ ಕೆಲಸವಿಲ್ಲ, ಉದ್ಯೋಗದಲ್ಲಿ ನಾನು ಇನ್ನು ಹೆಚ್ಚು ಬೆಳೆಯಬೇಕಿದೆ. ಸಂಸಾರ ನಡೆಸುವಷ್ಟು ಆದಾಯವಿಲ್ಲ ಎಂಬ ಕಾರಣಕ್ಕೆ ವಿವಾಹ ನಿವೇದನೆಯನ್ನು ನಿರಾಕರಿಸಿದ್ದಾನೆ.

ಇನ್ನು ಕಾಟನ್ ಪೇಟೆಯಲ್ಲಿ ಆತ ಮಲಗಿದ್ದಾಗ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಶೃತಿ ಗಾಯಗೊಂಡ ಮನ್ಸೂರನ್ನು ಬಚ್ಚಲು ಮನೆಯಲ್ಲಿ ಮುಚ್ಚಿಡಲು ಯತ್ನಸಿದ್ದಾಳೆ.

ಆದರೆ ಬೆಂಕಿಯಿಂದ ಉಂಟಾದ ಹೊಗೆಯನ್ನು ಮುಚ್ಚಿಡಲು ಸಾಧ್ಯವೇ? ಲಾಡ್ಜಿನ ಸಿಬ್ಬಂದಿ ಅವರ ಕೊಠಡಿಗೆ ಪ್ರವೇಶಿಸಿ ಏನಾಗಿದೆ ಎಂದು ಪರೀಕ್ಷಿಸಿದ್ದಾರೆ. ನಂತರ ಮನ್ನೂರ್ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಆಸ್ಪತ್ರೆಯಲ್ಲಿಯೇ ಎರಡು ದಿನ ಐಸಿಯುನಲ್ಲಿ ಚಿಕಿತ್ಸೆ ಪಡೆದಿದ್ದ ಪ್ರಿಯಕರ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾನೆ. ಪ್ರಕರಣ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lover put the fire and dead her boyfriend in bangaluru, katanpeta lodge. because Three years love and relationship girl approach to marry but boyfriend mansur refuse to marry matter in shruti in bengaluru.
Please Wait while comments are loading...