ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಗೆ ಬಂಧನ ಭೀತಿ

By Mahesh
|
Google Oneindia Kannada News

ಬೆಂಗಳೂರು, ಸೆ.18: ಕ್ರಿಕೆಟ್ ಬೆಟ್ಟಿಂಗ್ ದಂಧೆ,ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಆರೋಪ ಹೊತ್ತಿರುವ ಹಿರಿಯ ಐಎಎಸ್ ಅಧಿಕಾರಿ ಕಪಿಲ್ ಮೋಹನ್ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಪಿಲ್ ಅವರು ಬಂಧನ ಭೀತಿಯಲ್ಲಿದ್ದಾರೆ.

ಇತ್ತೀಚೆಗೆ ಎರಡನೇ ಬಾರಿ ಕಪಿಲ್ ಮೋಹನ್ ಅವರ ನಿವಾಸ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ಹಲವಾರು ಮಹತ್ವದ ದಾಖಲೆಗಳನ್ನು ವಶಪಡಿಸಿಕೊಂಡಿದ್ದರು. [ಕಪಿಲ್ ಗೂ ಹುಬ್ಬಳ್ಳಿ ಲಿಂಕ್]

Lokayukta registers FIR against IAS officer Kapil Mohan

ಕ್ರೀಡಾ ಮತ್ತು ಯುವ ಜನ ಸೇವಾ ಇಲಾಖೆ ಪ್ರಧಾನ ಕಾರ್ಯದರ್ಶಿ ಕಪಿಲ್ ಮೋಹನ್ ಮತ್ತು ಅವರ ಪತ್ನಿ ರೀಚಾ ಮೋಹನ್ ವಿರುದ್ಧ ತನಿಖೆ ನಡೆಸಲು ಸಿಐಡಿ ಪೊಲೀಸರು ಸರ್ಕಾರಕ್ಕೆ ಸಲ್ಲಿಸಿದ್ದ ವರದಿಯಲ್ಲಿ ಶಿಫಾರಸು ಮಾಡಿದ್ದರು. ಕರ್ನಾಟಕ ಸರ್ಕಾರ ಆದೇಶ ನೀಡಿದ ನಂತರ ಲೋಕಾಯುಕ್ತ ಸಂಸ್ಥೆ ತನಿಖೆ ತೀವ್ರಗೊಳಿಸಿದೆ.

ಕಪಿಲ್ ಮೋಹನ್ ಮತ್ತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅವರ ಪತ್ನಿ ರೀಚಾ ಮೋಹನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಪ್ರಕರಣ ದಾಖಲಿಸಿ ತನಿಖೆ ಕೈಗೆತ್ತಿಕೊಂಡಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ ಅಡಿ ಕೇಸು ದಾಖಲಾಗಿದೆ. ಲೋಕಾಯುಕ್ತ ಗ್ರಾಮಾಂತರ ಎಸ್ಪಿ ಅಬ್ದುಲ್ ಅಹಾದ್ ನೇತೃತ್ವದ ತಂಡ ತನಿಖೆ ಮುಂದುವರೆಸಿದೆ.

ಬಿ.ಜಿ.ರತ್ನಾಕರ್ ನೇತೃತ್ವದ ತಂಡ ಕಪಿಲ್ ಮೋಹನ್ ಒಡೆತನದ ಕಂಪನಿಗೆ ಸೇರಿದ್ದ ಗೋಲ್ಡನ್ ಗ್ರ್ಯಾಂಡ್ ಅಪಾರ್ಟ್​ವೆುಂಟ್ ಮೇಲೆ ದಾಳಿ ನಡೆಸಿದ ವೇಳೆ ಈ ವೇಳೆ 4.37 ಕೋಟಿ ರೂ. ನಗದು, 2.5 ಕೆ.ಜಿ ಚಿನ್ನ, 37 ಕ್ಯಾರೆಟ್ ವಜ್ರ ಮತ್ತು ಮಹತ್ವದ ದಾಖಲೆಗಳು ಸಿಕ್ಕಿತ್ತು.

ಹುಬ್ಬಳ್ಳಿ ಕ್ರಿಕೆಟ್ ಬೆಟ್ಟಿಂಗ್ ಪ್ರಕರಣ ಸಂಬಂಧ ಜೈಲು ಸೇರಿರುವ ಅರ್ಜುನ್ ಹಾಗೂ ಹೀರಾಚಂದ್ ಎಂಬ ಬುಕ್ಕಿಗಳ ವಿಚಾರಣೆ ಜಾರಿಯಲ್ಲಿದೆ.

English summary
The Lokayukta police registered an FIR against senior IAS officer Kapil Mohan and his wife Dr Richa Saxena in the disproportionate assets (DA) case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X