ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪಂಚ ಭ್ರಷ್ಟರ ಮನೆಯಲ್ಲಿ ಸಿಕ್ಕಿದ್ದು 15 ಕೋಟಿ

|
Google Oneindia Kannada News

ಬೆಂಗಳೂರು, ಮೇ 30 : ಗುರುವಾರ ಐವರು ಭ್ರಷ್ಟ ಸರ್ಕಾರಿ ಅಧಿಕಾರಿಗಳ ಮನೆ ಮೇಲೆ ದಾಳಿ ನಡೆಸಿದ ಲೋಕಾಯುಕ್ತ ಅಧಿಕಾರಿಗಳು 15 ಕೋಟಿಗೂ ಅಧಿಕ ಮೌಲ್ಯದ ಅಕ್ರಮ ಆಸ್ತಿಯನ್ನು ಪತ್ತೆ ಹಚ್ಚಿದ್ದಾರೆ. ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಐಎಫ್ಎಸ್ ಅಧಿಕಾರಿ ಹರಿಕುಮಾರ್ ಝಾ ಸೇರಿದಂತೆ ಐವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿತ್ತು.

ಗುರುವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಲೋಕಾಯುಕ್ತ ಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ಭ್ರಷ್ಟ ಅಧಿಕಾರಿಗಳ ಆಸ್ತಿಗಳ ಕುರಿತು ಮಾಹಿತಿ ನೀಡಿದರು. ಲೋಕೋಪಯೋಗಿ ಇಲಾಖೆ (ನೀರಾವರಿ) ಅಧೀಕ್ಷಕ ಎಂಜಿನಿಯರ್ ಬಿ.ಎಲ್.ರವೀಂದ್ರ ಬಾಬು, ಕೆಎಸ್‌ಆರ್‌ಟಿಸಿ ಹಣಕಾಸು ನಿರ್ದೇಶಕ ಎಸ್.ಪದ್ಮನಾಭನ್, ಕರ್ನಾಟಕ ಪ್ರದೇಶಾಭಿವದ್ಧಿ ಮಂಡಳಿ ಸಹಾಯಕ ಕಾರ್ಯದರ್ಶಿ ಆರ್.ಭಾಸ್ಕರ್, ಚಿಕ್ಕಬಳ್ಳಾಪುರ ಅಬಕಾರಿ ಇಲಾಖೆ ಉಪ ಆಯುಕ್ತ ಶ್ರೀನಿವಾಸ ಮೂರ್ತಿ ಅವರ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ.

ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ ಹರಿಕುಮಾರ್ ಝಾ ಐಎಫ್‌ಎಸ್ ಅಧಿಕಾರಿಗಳಿಗೆ ಮನೆ ಕಟ್ಟಿಸಿಕೊಳ್ಳಲೆಂದು ಎಚ್‌ಎಸ್ಆರ್ ಬಡಾವಣೆಯಲ್ಲಿ ಸರ್ಕಾರ ಮಂಜೂರು ಮಾಡಿದ್ದ ಭೂಮಿಯನ್ನು ವಾಣಿಜ್ಯ ಭೂಮಿಯಾಗಿ ಪರಿವರ್ತಿಸಿಕೊಂಡು, ವಾಣಿಜ್ಯ ಸಂಕೀರ್ಣ ನಿರ್ಮಿಸುತ್ತಿದ್ದಾರೆ. ನಿರ್ಮಾಣ ಹಂತದ ಈ ಕಟ್ಟಡದ ಮೌಲ್ಯವೇ 1.40 ಕೋಟಿಯಾಗಿದೆ ಎಂದು ಸತ್ಯನಾರಾಯಣ ರಾವ್ ಹೇಳಿದರು. ಯಾರ ಆಸ್ತಿ ಎಷ್ಟು?

ಬಿ.ಎಲ್.ರವೀಂದ್ರ ಬಾಬು

ಬಿ.ಎಲ್.ರವೀಂದ್ರ ಬಾಬು

ಬಿ.ಎಲ್.ರವೀಂದ್ರ ಬಾಬು, ಅಧೀಕ್ಷಕ ಎಂಜಿನಿಯರ್, ಲೋಕೋಪಯೋಗಿ ಇಲಾಖೆ (ನೀರಾವರಿ)
ಅಂದಾಜು ಆಸ್ತಿ : 10.72 ಕೋಟಿ
ಅಸಮತೋಲನ ಆಸ್ತಿ : 9.04 ಕೋಟಿ.
ಶೇ.324.9

* ಜಯನಗರ 4ನೇ ಟೀ ಬ್ಲಾಕ್‌ನಲ್ಲಿ 45/90 ವಿಸ್ತೀರ್ಣದಲ್ಲಿ 3 ಅಂತಸ್ತಿನ ವಾಣಿಜ್ಯ ಸಂಕೀರ್ಣ ಮೌಲ್ಯ 3 ಕೋಟಿ.
* ಜಯನಗರದಲ್ಲಿ 40/60 ನಿವೇಶನದಲ್ಲಿ ನಿರ್ಮಿಸುತ್ತಿರುವ ಕಟ್ಟಡ ಮೌಲ್ಯ 2.50 ಕೋಟಿ.
* ಜಯನಗರ 1ನೇ ಬ್ಲಾಕ್‌ನಲ್ಲಿ 40/60 ಮನೆ ಮೌಲ್ಯ 67 ಲಕ್ಷ.
* ಕಗ್ಗಲಹಳ್ಳಿಯಲ್ಲಿ 3 ಎಕರೆ ಜಮೀನಿನ ಮೌಲ್ಯ 96 ಲಕ್ಷ.
* ಜೆ.ಪಿ ನಗರ 2ನೇ ಹಂತದಲ್ಲಿ ಸಿ.ಎ ನಿವೇಶನ ಮೌಲ್ಯ 17 ಲಕ್ಷ.
* 1 ಕೆಜಿ 250 ಗ್ರಾಂ ಚಿನ್ನಾಭರಣ, 2.75 ಕೆಜಿ ಬೆಳ್ಳಿ, ನಗದು 7.59 ಲಕ್ಷ
* ಟೋಯೋಟಾ ಫಾರ್ಚ್ಯೂನರ್ ಕಾರು 22 ಲಕ್ಷ, ವರ್ನಾ ಕಾರು 7 ಲಕ್ಷ, ಇಟಿಯೋಸ್ ಕಾರು ಮೌಲ್ಯ 6 ಲಕ್ಷ, ಕ್ವಾಲಿಸ್ 5.50 ಲಕ್ಷ,

ಹರಿಕುಮಾರ್ ಝಾ, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ

ಹರಿಕುಮಾರ್ ಝಾ, ಎಂಎಸ್ಐಎಲ್ ವ್ಯವಸ್ಥಾಪಕ ನಿರ್ದೇಶಕ

ಅಂದಾಜು ಆಸ್ತಿ: 2.65 ಕೋಟಿ.
ಅಸಮತೋಲನ ಆಸ್ತಿ: 1.74 ಕೋಟಿ.
ಶೇ.99.67

* ಎಚ್‌ಎಸ್‌ಆರ್ ಬಡಾವಣೆಯಲ್ಲಿ ಸೈಟ್ ಸಂಖ್ಯೆ 87ರಲ್ಲಿ 1.40 ಕೋಟಿ ಮೌಲ್ಯದ ನಿರ್ಮಾಣ ಹಂತದ ವಾಣಿಜ್ಯ ಸಂಕೀರ್ಣ.
* ಆರ್.ಎಂ.ವಿ ಬಡಾವಣೆಯಲ್ಲಿ ಮನೆ ಮೌಲ್ಯ 60 ಲಕ್ಷ.
* ಕರಿಷ್ಮಾ ಹಿಲ್ಸ್‌ ನಲ್ಲಿ 22 ಗುಂಟೆ ನಿವೇಶನ ಮೌಲ್ಯ 10 ಲಕ್ಷ.
* ಬಿಹಾರದಲ್ಲಿ ಕೃಷಿ ಭೂಮಿ 7 ಲಕ್ಷ.
* ಮಾರುತಿ ಸ್ವಿಫ್ಟ್ ಕಾರು 6 ಲಕ್ಷ, ಐ10 ಕಾರು 6 ಲಕ್ಷ, ಐ20 ಕಾರು 6 ಲಕ್ಷ
* ಠೇವಣೆ 2.5 ಲಕ್ಷ, ಎಲ್ಐಸಿ 5 ಲಕ್ಷ, ಎಂಎಸ್ಐಎಲ್ ಚಿಟ್ 8 ಲಕ್ಷ, 349 ಗ್ರಾಂ ಚಿನ್ನಾಭರಣ, 6 ಕೆಜಿ ಬೆಳ್ಳಿ

ಎಸ್.ಪದ್ಮನಾಭನ್, ಕೆಎಸ್‌ಆರ್‌ಟಿಸಿ ಹಣಕಾಸು ನಿರ್ದೇಶಕ

ಎಸ್.ಪದ್ಮನಾಭನ್, ಕೆಎಸ್‌ಆರ್‌ಟಿಸಿ ಹಣಕಾಸು ನಿರ್ದೇಶಕ

ಅಂದಾಜು ಆಸ್ತಿ : 3.15 ಕೋಟಿ
ಅಸಮತೋಲನ ಆಸ್ತಿ : 2.35 ಕೋಟಿ
ಶೇ.107.19

* ಪಾಪರೆಡಿಪಾಳ್ಯದಲ್ಲಿ 62.5/40 ವಿಸ್ತೀರ್ಣದಲ್ಲಿ ಮನೆ ಮೌಲ್ಯ 45 ಲಕ್ಷ
* 50/80 ನಿವೇಶನದಲ್ಲಿ ವಾಣಿಜ್ಯ ಮಳಿಗೆ ಹಾಗೂ ಖಾಲಿ ಜಾಗ ಮೌಲ್ಯ 55 ಲಕ್ಷ.
* ರಾಜಾಜಿನಗರದಲ್ಲಿ 30/46ನಲ್ಲಿ 3 ಅಂತಸ್ತಿನ ವಾಣಿಜ್ಯ ಮಳಿಗೆ ಹಾಗೂ ಖಾಲಿ ನಿವೇಶನ 25 ಲಕ್ಷ
* ನಾಗವಾರದಲ್ಲಿ ಫ್ಲ್ಯಾಟ್ ಮೌಲ್ಯ 15 ಲಕ್ಷ
* ಶೇಷಾದ್ರಿಪುರಂದಲ್ಲಿ ಫ್ಲ್ಯಾಟ್ 46 ಲಕ್ಷ
* ಬಂತಗಳ್ಳಿ ಗ್ರಾಮದಲ್ಲಿ 2.37 ಎಕರೆ ಜಮೀನು 30 ಲಕ್ಷ.
*2 ಲಕ್ಷ ನಗದು, 138 ಗ್ರಾಂ ಚಿನ್ನ, 2.34 ಕೆಜಿ ಬೆಳ್ಳಿ, 3 ಬ್ಯಾಂಕ್ ಲಾಕರ್‌ ಗಳನ್ನು ಓಪನ್ ಮಾಡಿಲ್ಲ.

ಆರ್.ಭಾಸ್ಕರ್, ಸಹಾಯಕ ಕಾರ್ಯದರ್ಶಿ

ಆರ್.ಭಾಸ್ಕರ್, ಸಹಾಯಕ ಕಾರ್ಯದರ್ಶಿ

ಅಂದಾಜು ಆಸ್ತಿ : 1.34 ಕೋಟಿ
ಅಸಮತೋಲನ ಆಸ್ತಿ : 89.05 ಲಕ್ಷ
ಶೇ.127.21

* ಆಡುಗೋಡಿಯಲ್ಲಿ ಮನೆ ಮೌಲ್ಯ 25 ಲಕ್ಷ
* ಎಚ್‌ಎಸ್‌ಆರ್ ಬಡಾವಣೆಯಲ್ಲಿ ಮನೆ 45 ಲಕ್ಷ
* ವಿಶ್ವಪ್ರಿಯನಗರದಲ್ಲಿ ನಿವೇಶನ 13 ಲಕ್ಷ
* ಅರ್ಕಾವತಿ ಬಡಾವಣೆಯಲ್ಲಿ 2 ನಿವೇಶನ 4 ಲಕ್ಷ
* ಬೇಗೂರಿನಲ್ಲಿ ನಿವೇಶನ 16 ಲಕ್ಷ
* ಸೇಲಂ, ಬೇಗೂರು, ಡೌಡಸಂದ್ರದಲ್ಲಿ 3 ನಿವೇಶನಗಳ ಮೌಲ್ಯ 15 ಲಕ್ಷ
* ಸ್ಯಾಂಟ್ರೋ ಕಾರ್, ಇನ್ನೋವಾ ಕಾರ್ 7 ಲಕ್ಷ, ಬುಲೆಟ್ ಬೈಕ್ 1.25 ಲಕ್ಷ,
* 525 ಗ್ರಾಂ ಚಿನ್ನಾಭರಣ, 2 ಕೆ.ಜಿ ಬೆಳ್ಳಿ

ಶ್ರೀನಿವಾಸಮೂರ್ತಿ, ಉಪ ಆಯುಕ್ತರು ಅಬಕಾರಿ ಇಲಾಖೆ

ಶ್ರೀನಿವಾಸಮೂರ್ತಿ, ಉಪ ಆಯುಕ್ತರು ಅಬಕಾರಿ ಇಲಾಖೆ

ಅಂದಾಜು ಆಸ್ತಿ : 2.17 ಕೋಟಿ
ಅಸಮತೋಲನ ಆಸ್ತಿ : 1.65 ಕೋಟಿ
ಶೇ.207.14

* ಇಸ್ರೋ ಬಡಾವಣೆಯಲ್ಲಿ ಕಟ್ಟಡ ಮೌಲ್ಯ 1 ಕೋಟಿ
* ಜೆ.ಪಿ ನಗರದಲ್ಲಿ ಕಟ್ಟಡದ 20 ಲಕ್ಷ, ಸೈಟ್ 10 ಲಕ್ಷ
* ಸರ್ಜಾಪುರದಲ್ಲಿ 2 ಜಮೀನುಗಳು 16 ಲಕ್ಷ.
* ಮೈಸೂರಿನ ಬೋಗಾದಿಯಲ್ಲಿ ಆಸ್ತಿ ಪರಿಶೀಲನೆ
* ಇನ್ನೋವಾ ಕಾರು ಮೌಲ್ಯ 12 ಲಕ್ಷ, ಐ10 ಕಾರ್ 5 ಲಕ್ಷ, ಪುಂಟೋ ಕಾರು 4.50 ಲಕ್ಷ
* 1 ಕೆಜಿ 145 ಗ್ರಾಂ ಚಿನ್ನಾಭರಣ ಹಾಗೂ ವಜ್ರಾಭರಣಗಳ ಮೌಲ್ಯ 33 ಲಕ್ಷ

English summary
The Lokayukta police on Thursday carried out simultaneous raids on five officials, including a senior Indian Forest Service officer, and unearthed assets worth Rs. 15 crore that were disproportionate to their known sources of income.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X