ಸರ್ಕಾರಿ ಶಾಲೆ ನೆಲಸಮ, ಇ.ಕೃಷ್ಣಪ್ಪ ಅವರ ವಿರುದ್ಧ ಚಾರ್ಜ್ ಶೀಟ್

Posted By:
Subscribe to Oneindia Kannada

ಬೆಂಗಳೂರು, ಜುಲೈ 02 : ನಿರ್ಮಾಪಕ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ಇ.ಕೃಷ್ಣಪ್ಪ ಅವರ ವಿರುದ್ಧ ಲೋಕಾಯುಕ್ತ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಸರ್ಕಾರಿ ಶಾಲೆ ನೆಲಸಮಗೊಳಿಸಿ, ಆ ಜಾಗವನ್ನು ಒತ್ತುವರಿ ಮಾಡಿಕೊಂಡಿರುವ ಆರೋಪ ಅವರ ಮೇಲಿದೆ.

2014ರ ಆಗಸ್ಟ್ 14ರಂದು ಎಂ.ಭಾಸ್ಕರ್ ಅವರು ಲೋಕಾಯುಕ್ತರಿಗೆ ನೀಡಿದ ದೂರಿನ ಅನ್ವಯ ತನಿಖೆ ನಡೆಸಿ, ಶುಕ್ರವಾರ ಚಾರ್ಜ್ ಶೀಟ್ ಸಲ್ಲಿಸಲಾಗಿದೆ. ಭ್ರಷ್ಟಾಚಾರ ಪ್ರತಿಬಂಧನ ಕಾಯ್ದೆ ಪ್ರಕಾರ ಆರೋಪ ಪಟ್ಟಿ ಸಲ್ಲಿಸಲಾಗಿದೆ. [ಗಣೇಶ್ 'ಮುಂಗಾರು ಮಳೆ-2'ಗೆ ಅದ್ದೂರಿ ಮುಹೂರ್ತ]

E Krishnappa

ಏನಿದು ಪ್ರಕರಣ? : ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಅಡಕಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 16/2ರಲ್ಲಿ ಪ್ರಾಥಮಿಕ ಶಾಲೆ ಕಟ್ಟಡದ ಪಕ್ಕದಲ್ಲಿಯೇ ಕೃಷ್ಣಪ್ಪ ಅವರ ಮನೆ ಇದೆ. ಕೃಷ್ಣಪ್ಪ ಅವರು 2012ರಲ್ಲಿ ಶಾಲೆಯನ್ನು ನೆಲಸಮಗೊಳಿಸಿ, ಆ ಜಾಗವನ್ನು ಒತ್ತುವರಿ ಮಾಡಿಕೊಂಡು ಕಾಪೌಂಡ್ ನಿರ್ಮಿಸಿಕೊಂಡಿದ್ದಾರೆ ಎಂಬುದು ಆರೋಪ. [ಸರ್ಕಾರಕ್ಕೆ ಮುಖಭಂಗ, ಲೋಕಾಯುಕ್ತ ನೇಮಕ ಕಡತ ವಾಪಸ್]

ಎಂ.ಭಾಸ್ಕರ್ ಅವರು ಈ ಕುರಿತು ಲೋಕಾಯಕ್ತರಿಗೆ ದೂರು ನೀಡಿದ್ದರು. ಸರ್ಕಾರದ ಆಸ್ತಿ ಕಬಳಿಕೆ ಆಗಿದ್ದರೂ ಕೃಷ್ಣಪ್ಪ ಅವರ ಪ್ರಭಾವದಿಂದಾಗಿ ಯಾವ ಅಧಿಕಾರಿಯೂ ಕ್ರಮ ಕೈಗೊಂಡಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು.['ಲೋಕಾಯುಕ್ತ ಸಂಸ್ಥೆ ಮುಚ್ಚಲು ಸರ್ಕಾರದ ಷಡ್ಯಂತ್ರ']

ತನಿಖೆ ನಡೆಸಿದ ಪೊಲೀಸರು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಕೃಷ್ಣಪ್ಪ ಅವರ ಜೊತೆಗೆ ಹಿಂದೆ ಅಲ್ಲಿ ಕೆಲಸ ಮಾಡಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ನರಸಿಂಹಮೂರ್ತಿ ಅವರ ವಿರುದ್ಧವೂ ಚಾರ್ಜ್ ಶೀಟ್ ಸಲ್ಲಿಕೆ ಮಾಡಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Karnataka Lokayukta police filed charge sheet against former MLC E.Krishnappa in government land encroachment case.
Please Wait while comments are loading...